ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರು ಎಲ್ಲಾ ರೀತಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಮಿಥಾನಿ ಭಾರತದಲ್ಲಿ ಮಾತ್ರವಲ್ಲದೆ ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಗೌರವಾನ್ವಿತ ಮಹಿಳಾ ಆಟಗಾರ್ತಿ. ಮಿಥಾಲಿ ಬ್ಯಾಟ್ಸ್‌ಮನ್ ಮತ್ತು ನಾಯಕಿಯಾಗಿ ಇಂತಹ ಹಲವು ದಾಖಲೆಗಳನ್ನು ಮಾಡಿದ್ದಾರೆ, ಇದು ಭವಿಷ್ಯದ ಕ್ರಿಕೆಟಿಗರಿಗೆ ಮುರಿಯಲು ತುಂಬಾ ಕಷ್ಟ. ಹೀಗಾಗಿ ಮಿಥಾಲಿ ಅವರನ್ನು ಲೇಡಿ ತೆಂಡೂಲ್ಕರ್ ಎಂದೇ ಕರೆಯುತ್ತಾರೆ. ಮಿಥಾಲಿ ಅವರ 10 ವಿಶೇಷ ದಾಖಲೆ ಇಲ್ಲಿವೆ.
1 ಸುದೀರ್ಘ ಅಂತಾರಾಷ್ಟ್ರೀಯ ವೃತ್ತಿಜೀವನ
ಮಿಥಾಲಿ ತನ್ನ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು 26 ಜೂನ್ 1999 ರಂದು ಐರ್ಲೆಂಡ್ ವಿರುದ್ಧ ಆಡಿದರು. ಅದೊಂದು ಏಕದಿನ ಪಂದ್ಯವಾಗಿತ್ತು. ಅವರು 27 ಮಾರ್ಚ್ 2022 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರು. ಅಂದರೆ, ಮಿಥಾಲಿ ಅವರ ಅಂತಾರಾಷ್ಟ್ರೀಯ ವೃತ್ತಿಜೀವನವು 22 ವರ್ಷ, 274 ದಿನಗಳ ಕಾಲ ನಡೆಯಿತು. ಇದು ಮಹಿಳಾ ಕ್ರಿಕೆಟ್‌ನಲ್ಲಿ ವಿಶ್ವದಾಖಲೆಯಾಗಿದೆ.

2 ಮಹಿಳೆಯರ ODIನಲ್ಲಿ 7000 ರನ್ ಗಳಿಸಿದ ಏಕೈಕ ಬ್ಯಾಟ್ಸ್‌ಮನ್
ಮಿಥಾಲಿ ರಾಜ್ ತಮ್ಮ ODI ವೃತ್ತಿಜೀವನದಲ್ಲಿ 7805 ರನ್ ಗಳಿಸಿದ್ದಾರೆ. ಈ ಮಾದರಿಯಲ್ಲಿ 7,000 ರನ್‌ಗಳ ಗಡಿ ದಾಟಿದ ವಿಶ್ವದ ಮೊದಲ ಮತ್ತು ಏಕೈಕ ಮಹಿಳಾ ಬ್ಯಾಟ್ಸ್‌ಮನ್.
3 ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್
ಮಿಥಾಲಿ ರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಲ್ಲಾ ಮೂರು ಮಾದರಿಗಳಲ್ಲಿ 10,868 ರನ್ ಗಳಿಸಿದ್ದಾರೆ. ಮಹಿಳಾ ಕ್ರಿಕೆಟ್‌ನಲ್ಲೂ ಇದು ವಿಶ್ವ ದಾಖಲೆಯಾಗಿದೆ.

4 ಎರಡು ODI ವಿಶ್ವಕಪ್ ಫೈನಲ್‌ಗಳನ್ನು ಆಡಿದ ಭಾರತದ ಏಕೈಕ ನಾಯಕಿ
ಮಿಥಾಲಿ ನಾಯಕತ್ವದಲ್ಲಿ ಮಹಿಳಾ ತಂಡ 2005 ಮತ್ತು 2017ರ ODI ವಿಶ್ವಕಪ್‌ನಲ್ಲಿ ಫೈನಲ್ ತಲುಪಿತ್ತು. ಭಾರತ ತಂಡವು ಎರಡೂ ವೇಳೆ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ, ಆದರೆ ನಾಯಕಿಯಾಗಿ ಎರಡು ODI ವಿಶ್ವಕಪ್ ಫೈನಲ್‌ಗಳನ್ನು ಆಡಿದ ಏಕೈಕ ಭಾರತೀಯ ನಾಯಕಿ ಮಿಥಾಲಿ. ಈ ದಾಖಲೆ ಪುರುಷರ ಕ್ರಿಕೆಟ್‌ನಲ್ಲಿ ಯಾವುದೇ ಭಾರತೀಯ ನಾಯಕನ ಹೆಸರಿನಲ್ಲಿ ದಾಖಲಾಗಿಲ್ಲ.
5 T20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 2,000 ರನ್
ಮಿಥಾಲಿ ರಾಜ್ ಟಿ20 ಅಂತರಾಷ್ಟ್ರೀಯ (ಪುರುಷರ ಮತ್ತು ಮಹಿಳೆಯರ ಒಟ್ಟು) 2,000 ರನ್ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಈ ಮಾದರಿಯಲ್ಲಿ ಅವರು 2364 ರನ್ ಗಳಿಸಿದ್ದಾರೆ. ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಮಿಥಾಲಿ.

6 ಮಹಿಳಾ ODIಗಳಲ್ಲಿ ಅತ್ಯಧಿಕ 50+ ಸ್ಕೋರ್‌ಗಳು
ಮಿಥಾಲಿ ಏಕದಿನ ವೃತ್ತಿಜೀವನದಲ್ಲಿ 64 ಅರ್ಧಶತಕ ಮತ್ತು 7 ಶತಕಗಳನ್ನು ಗಳಿಸಿದ್ದಾರೆ. ಈ ಮಾದರಿಯಲ್ಲಿ 71 ಬಾರಿ 50ಕ್ಕೂ ಹೆಚ್ಚು ರನ್‌ಗಳನ್ನು ಬಾರಿಸುವಲ್ಲಿ ಯಶಸ್ವಿಯಾಗಿದ್ದಳು. ಇದು ಮಹಿಳಾ ಏಕದಿನದಲ್ಲಿ ವಿಶ್ವದಾಖಲೆಯಾಗಿದೆ.
7 ಹೆಚ್ಚಿನ ODI ಪಂದ್ಯಗಳಲ್ಲಿ ನಾಯಕತ್ವದ ದಾಖಲೆ
ಮಿಥಾಲಿ ತಮ್ಮ ವೃತ್ತಿಜೀವನದಲ್ಲಿ 155 ODIಗಳಲ್ಲಿ ಭಾರತ ಮುನ್ನಡೆಸಿದರು. ಇದು ಮಹಿಳಾ ಕ್ರಿಕೆಟ್‌ನಲ್ಲಿ ವಿಶ್ವದಾಖಲೆಯಾಗಿದೆ. ಇವರ ನಾಯಕತ್ವದಲ್ಲಿ 89 ಪಂದ್ಯಗಳಲ್ಲಿ ಭಾರತ ತಂಡ ಗೆಲುವು ಸಾಧಿಸಿದೆ. ತಂಡ 63ರಲ್ಲಿ ಸೋಲನುಭವಿಸಿದ್ದು, 3 ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ.

8 ಹೆಚ್ಚಿನ ODI ವಿಶ್ವಕಪ್
ಮಿಥಾಲಿ ರಾಜ್ 6 ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಇದು ಮಹಿಳಾ ಕ್ರಿಕೆಟ್‌ನಲ್ಲಿ ವಿಶ್ವದಾಖಲೆಯಾಗಿದೆ. ಪುರುಷರ ಕ್ರಿಕೆಟ್‌ನಲ್ಲಿ ಭಾರತದ ಸಚಿನ್ ತೆಂಡೂಲ್ಕರ್ 6 ವಿಶ್ವಗಳಲ್ಲಿ ಭಾಗವಹಿಸಿದ್ದರು.
9 ಕಿರಿಯ ವಯಸ್ಸಿನಲ್ಲಿ ODI ಶತಕ
ಮಿಥಾಲಿ ರಾಜ್ 16 ವರ್ಷ 205 ದಿನಗಳ ವಯಸ್ಸಿನಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಶತಕ ದಾಖಲಿಸಿದರು. ಇದು ಮಹಿಳಾ ಕ್ರಿಕೆಟ್‌ನಲ್ಲಿ ಇಂದಿಗೂ ವಿಶ್ವ ದಾಖಲೆಯಾಗಿದೆ.

10 ವಿಶ್ವಕಪ್‌ನಲ್ಲಿ ಸತತ ಏಳು ಅರ್ಧಶತಕಗಳು
2017ರ ಏಕದಿನ ವಿಶ್ವಕಪ್‌ನಲ್ಲಿ ಮಿಥಾಲಿ ರಾಜ್ ಸತತ ಏಳು ಅರ್ಧಶತಕಗಳನ್ನು ಬಾರಿಸಿದ್ದರು. ಇದು ವಿಶ್ವದಲ್ಲಿ ಸತತ ಅರ್ಧಶತಕಗಳ ದಾಖಲೆಯಾಗಿದೆ.