ಮೈದಾನದ ಒಳಗೆ ಇರಲಿ ಅಥವಾ ಹೊರಗೆ ಇರಲಿ, ಟೀಮ್ ಇಂಡಿಯಾದ (India) ಮಾಜಿ ಆಟಗಾರ, ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ (MS Dhoni) ಸುದ್ದಿಯಲ್ಲಿರುತ್ತಾರೆ. ಧೋನಿ ಏನ್ ಮಾಡಿದರೂ, ಮಾಡದೇ ಇದ್ದರೂ ಸುದ್ದಿ ಅನ್ನುವ ಹಾಗಾಗಿದೆ. ಉದ್ದ ಕೂದಲು, ಕ್ಲೀನ್ ಶೇವ್, ಅದಾದ ಮೇಲೆ ಶಾರ್ಟ್ ಹೇರ್, ಗಡ್ಡ, ಅದಾದ ಮೇಲೆ ಸಿನಿಮಾ ಹಿರೋ ಲುಕ್ ಹೀಗೆ ಧೋನಿ ಹಲವು ಶೈಲಿಗಳನ್ನು ಮಾಡಿದ್ದರು. ಈಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅದುವೇ “ಫ್ಯಾಂಟಸಿ ಲುಕ್”..!
ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಹೊಸ ಗೆಟಪ್ ತೊಟ್ಟಿದ್ದಾರೆ.ಈ ಅವತಾರ ನೋಡಿ ಫ್ಯಾನ್ಸ್ ಕನ್ಫ್ಯೂಸ್ ಆಗಿದ್ದಾರೆ. ಧೋನಿ ಕಾದಂಬರಿವೊಂದರ ಪಾತ್ರವಾಗಿದ್ದಾರೆ. ಇದು ಹೊಸ ತಲೆಮಾರಿನ ಗ್ರಾಫಿಕ್ಸ್ ಕಾದಂಬರಿ (Graphics Novel). ಇಲ್ಲಿ ಪಾತ್ರಗಳು ಕಾದಂಬರಿಯ ರೂಪದಲ್ಲಿರುತ್ತವೆ. ಇದೀಗ ‘ಅಥರ್ವ ದಿ ಒರಿಜಿನ್’ (Atharva: The Origin) ಎಂಬ ಗ್ರಾಫಿಕ್ಸ್ ಕಾದಂಬರಿಯಲ್ಲಿ ಎಂಎಸ್ ಧೋನಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕಾದಂಬರಿಯಲ್ಲಿ ಧೋನಿ ಅಥರ್ವನ ಪಾತ್ರದಲ್ಲಿದ್ದಾರೆ. ಹೀಗಾಗಿ ಧೋನಿಯನ್ನು ಗ್ರೀಕ್ ಯೋಧನ ಶೈಲಿಯಲ್ಲಿ ಚಿತ್ರಿಸಲಾಗಿದೆ.
ಅಥರ್ವ ಒಂದು ಫ್ಯಾಂಟಸಿ ಲೋಕವನ್ನು ಸೃಷ್ಟಿ ಮಾಡಿದೆ. ಈಗಾಗಲೇ ಧೋನಿಯ ಲೈಫ್ ಸ್ಟೋರಿ, MS Dhoni: Untold Story ಸಿನಿಮಾವಾಗಿ ಸೂಪರ್ ಹಿಟ್ ಆಗಿತ್ತು. ಈಗ ಮತ್ತೊಂದು ಅವತಾರದಲ್ಲಿ ಧೋನಿ ಬರುತ್ತಿದ್ದಾರೆ.