ವೆಸ್ಟ್ಇಂಡೀಸ್ ವಿರುದ್ಧದ ಸರಣಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಟೀಮ್ ಇಂಡಿಯಾಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಬುಧವಾರ ಶ್ರೇಯಸ್ ಅಯ್ಯರ್, ಶಿಖರ್ ಧವನ್, ರುತುರಾಜ್ ಗಾಯಕ್ವಾಡ್ ಮತ್ತು ನವ್ ದೀಪ್ ಸೈನಿ ಕೊರೊನಾ ಪಾಸಿಟಿವ್ ಆಗಿ ಕ್ವಾರಂಟೈನ್ ಆಗಿದ್ದರು. ಬಿಸಿಸಿಐ ಮಯಾಂಕ್ ಅಗರ್ವಾಲ್ ಅವರನ್ನು ಬ್ಯಾಕ್ ಅಪ್ ಆಟಗಾರನಾಗಿ ಆಯ್ಕೆ ಮಾಡಿತ್ತು. ಆದರೆ ಗುರುವಾರ ಟೀಮ್ ಇಂಡಿಯಾ ಕ್ಯಾಂಪ್ನಲ್ಲಿ ಮತ್ತೊಂದು ಕೊರೊನಾ ಕೇಸ್ ಪತ್ತೆಯಾಗಿದೆ.
ಎಡಗೈ ಸ್ಪಿನ್ನರ್, ಆಲ್ರೌಂಡರ್ ಅಕ್ಷರ್ ಪಟೇಲ್ಗೆ ಗುರುವಾರ ಕೊರೊನಾ ಇರುವುದು ದೃಢವಾಗಿದೆ. ಆದರೆ ಪಟೇಲ್ ಟಿ20 ತಂಡಕ್ಕೆ ಆಯ್ಕೆ ಆಗಿರುವುದರಿಂದ ಟೀಮ್ ಹೊಟೇಲ್ನಲ್ಲಿಲ್ಲ. ಅಕ್ಸರ್ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಾರತದ ಕೆಲ ಆಟಗಾರರು ಮತ್ತು ತರಬೇತಿ ಸಿಬ್ಬಂದಿ ಒಳಗೊಂಡಂತೆ ಒಟ್ಟು 8 ಸದಸ್ಯರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಎರಡೂ ತಂಡಗಳ ಅಭ್ಯಾಸವನ್ನು ರದ್ದು ಪಡಿಸಲಾಗಿದೆ. ನಿಯಮದಂತೆ ಎರಡೂ ತಂಡಗಳ ಆಟಗಾರರು 3 ದಿನಗಳ ಐಸೋಲೇಷನ್ಗೆ ಒಳಗಾಗಬೇಕಿದೆ. ಕೊರೊನಾ ಸೋಂಕಿತರು 7 ದಿನಗಳ ಕ್ವಾರಂಟೈನ್ ಮುಗಿಸಿ ನೆಗೆಟಿವ್ ರಿಪೋರ್ಟ್ ಬಂದರೆ ಮಾತ್ರ ಮೈದಾನಕ್ಕೆ ಇಳಿಯಬಹುದಾಗಿದೆ.