ಟೀಮ್ ಇಂಡಿಯಾ (Team India) ಅದ್ಭುತ ಲಯದಲ್ಲಿದೆ. ಮೇಲಿಂದ ಮೇಲೆ ಗೆಲುವು ದಾಖಲಿಸಿಕೊಂಡು ಮುನ್ನಡೆಯುತ್ತಿದೆ. ಒಂದೇ ವರ್ಷದಲ್ಲಿ ಅತಿಹೆಚ್ಚು ಪಂದ್ಯಗಳನ್ನು ಗೆದ್ದ ದಾಖಲೆ ಬರೆಯುತ್ತಿದೆ (Highest Series Win). ಏಕದಿನ (ODI) ಮತ್ತು ಟಿ20 (T20) ಸರಣಿಗಳಲ್ಲಂತೂ ಭಾರತ (India) ತಂಡದ್ದೇ ಮಾತು. ಅಷ್ಟರ ಮಟ್ಟಿಗೆ ಭಾರತ ಎದುರಾಳಿಗಳನ್ನು ಹೊಸಕಿ ಹಾಕಿದೆ.
ರೋಹಿತ್ ಶರ್ಮಾ (Rohit Sharma), ರಿಷಬ್ ಪಂತ್ (Rishab Pant), ಕೆ.ಎಲ್. ರಾಹುಲ್ (KL Rahul), ಶಿಖರ್ ಧವನ್ (Shikhar Dhawan) ಮತ್ತು ಹಾರ್ದಿಕ್ ಪಾಂಡ್ಯಾ (Hardik Pandya) ಕಳೆದ 10 ಸರಣಿಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಏಷ್ಯಾಕಪ್ (Asia Cup)ಹೊರತು ಪಡಿಸಿ ಎಲ್ಲೆಡೆ ಭಾರತ ದಿಗ್ವಿಜಯ ಸಾಧಿಸಿದೆ. ಟೀಮ್ ಇಂಡಿಯಾದ ಆಟಕ್ಕೆ ವಿಶ್ವದೆಲ್ಲೆಡೆಯಿಂದ ಶಹಬ್ಬಾಸ್ ಸಿಗುತ್ತಿದೆ. ಆಸ್ಟ್ರೇಲಿಯಾದಲ್ಲಿ (Australia) ನಡೆಯುವ ಟಿ20 ವಿಶ್ವಕಪ್‌ನಲ್ಲೂ (T20 Worldcup) ಈ ತಂಡ ಅದ್ಭುತ ಪ್ರದರ್ಶನ ನೀಡುವ ಬಗ್ಗೆ ಕನಸು ಹುಟ್ಟಿಸಿದೆ.
ಟೀಮ್ ಇಂಡಿಯಾ ದ್ವಿಪಕ್ಷೀಯ ಸರಣಿಗಳಲ್ಲಿ ಸೋತಿಲ್ಲ ಅನ್ನುವುದು ಎದುರಾಳಿಗೆ ನಡುಕ ಹುಟ್ಟಿಸುತ್ತಿದೆ. ಅಷ್ಟೇ ಅಲ್ಲ 3 ವಿವಿಧ ಸರಣಿಗಳಲ್ಲಿ ಕ್ಲೀನ್ ಸ್ವೀಪ್ (Clean Sweep) ಸಾಧನೆಯನ್ನೂ ಮಾಡಿದೆ. ಇದು ಮಿಷನ್ ಮೆಲ್ಬರ್ನ್‌ಗೆ (Mission Melbourne)ಹೊಸ ವಿಶ್ವಾಸ ತುಂಬುವುದರಲ್ಲಿ ಎರಡು ಮಾತಿಲ್ಲ.
ದ.ಆಫ್ರಿಕಾ ವಿರುದ್ಧ ODI & T20 ಸರಣಿಯಲ್ಲಿ 2-1 ಗೆಲುವು
ಆಸ್ಟ್ರೇಲಿಯಾ ವಿರುದ್ಧ T20 ಸಿರೀಸ್‌ನಲ್ಲಿ 2-1 ಜಯ
ಜಿಂಬಾಬ್ವೆಯಲ್ಲಿ 3-0 ಏಕದಿನ ಸರಣಿ ಜಯ
ವಿಂಡೀಸ್ ವಿರುದ್ಧ T20 ಸರಣಿಯಲ್ಲಿ 4-1 ಗೆಲುವು
ವಿಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ 3-0 ದಿಗ್ವಿಜಯ
ಇಂಗ್ಲೆಂಡ್ ವಿರುದ್ಧ 2-1 ಏಕದಿನ ಸರಣಿ ಜಯ
ಐರ್ಲೆಂಡ್ ವಿರುದ್ಧ 2-0 ಟಿ20 ಸರಣಿ ಜಯ