Team india – ಎರಡನೇ ಏಕದಿನ ಪಂದ್ಯಕ್ಕೆ ಸನ್ನದ್ಧಗೊಳ್ಳುತ್ತಿರುವ ಶಿಖರ್ ಧವನ್ ಬಳಗ..!
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸೋತಿರುವ ಟೀಮ್ ಇಂಡಿಯಾ ಇದೀಗ ಎರಡನೇ ಏಕದಿನ ಪಂದ್ಯದ ಮೇಲೆ ಚಿತ್ತವನ್ನಿಟ್ಟಿದೆ.
ಅಕ್ಟೋಬರ್ 9ರಂದು ರಾಂಚಿಯ ಜೆಎಸ್ ಸಿಎ ಅಂಗಣದಲ್ಲಿ ನಡೆಯಲಿರುವ ಪಂದ್ಯಕ್ಕೆ ಟೀಮ್ ಇಂಡಿಯಾ ಆಟಗಾರರ ನೆಟ್ಸ್ ನಲ್ಲಿ ಅಭ್ಯಾಸ ನಡೆಸಿದ್ದಾರೆ. ತಂಡದ ಕೋಚ್ ವಿವಿಎಸ್ ಲಕ್ಷ್ಮಣ್ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಆಟಗಾರರು ಬೆವರು ಸುರಿಸಿದ್ದಾರೆ.
ಟೀಮ್ ಇಂಡಿಯಾ ಆಟಗಾರರು ನೆಟ್ಸ್ ನಲ್ಲಿ ಅಭ್ಯಾಸ ನಡೆಸುತ್ತಿರುವ ಫೋಟೋಗಳನ್ನು ಬಿಸಿಸಿಐ ತನ್ನ ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿಕೊಂಡಿದೆ.
ಲಕ್ನೋದಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯವನ್ನು ಶಿಖರ್ ಧವನ್ ಬಳಗ 9 ರನ್ ಗಳಿಂದ ಸೋತಿತ್ತು. ಸಂಜು ಸ್ಯಾಮ್ಸನ್ ಆಕರ್ಷಕ ಅರ್ಧಶತಕ ದಾಖಲಿಸಿ ತಂಡದ ಗೆಲುವಿಗಾಗಿ ಕೊನೆಯ ತನಕ ಹೋರಾಟ ನಡೆಸಿದ್ರು. ಆದ್ರೆ ತಂಡವನ್ನು ಸೋಲಿನಿಂದ ಬಚಾವ್ ಮಾಡಲು ಸಂಜುಗೆ ಸಾಧ್ಯವಾಗಲಿಲ್ಲ.