ಟೀಮ್ ಇಂಡಿಯಾ ವಿದೇಶಿ ಪಿಚ್ನಲ್ಲಿ ಟೆಸ್ಟ್ ಪಂದ್ಯಕ್ಕೆ ಸಿದ್ಧವಾಗುತ್ತಿದೆ. ದಕ್ಷಿಣ ಅಫ್ರಿಕಾದ ಫಾಸ್ಟ್ ಅಂಡ್ ಬೌನ್ಸಿ ಪಿಚ್ ಚಾಲೆಂಜ್ ಆಗಿರುವುದು ಖಚಿತ. ಹೀಗಾಗಿ ಟೀಮ್ ಇಂಡಿಯಾದ ಕಾಂಬಿನೇಷನ್ ಬಗ್ಗೆಯೂ ಚರ್ಚೆ ಆಗುತ್ತಿದೆ. 5 ಬೌಲರ್ಗಳು ಮತ್ತು 6 ಬ್ಯಾಟ್ಸ್ಮನ್ಗಳು ಆಡ್ಬೇಕೋ ಅಥವಾ 7 ಬ್ಯಾಟ್ಸ್ಮನ್ಗಳು ಮತ್ತು 4 ಸ್ಪಿನ್ನರ್ಗಳು ಆಡಬೇಕೋ ಅನ್ನುವ ಬಗ್ಗೆ ಡಿಸ್ಕಷನ್ ಆಗುತ್ತಿದೆ.
5 ಬೌಲರ್ಸ್ ಅಥವಾ 4 ಬೌಲರ್…?
ಟೀಮ್ ಇಂಡಿಯಾದ ಬೌಲಿಂಗ್ ಕಾಂಬಿನೇಷನ್ ಬಗ್ಗೆ ಸಖತ್ ಚರ್ಚೆ ನಡೆಯುತ್ತಿದೆ. ಜಸ್ಪ್ರಿತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಸ್ಥಾನ ಫಿಕ್ಸ್. ಅಶ್ವಿನ್ ಆಡಲೇ ಬೇಕು. ಶಾರ್ದೂಲ್ ಥಾಕೂರ್ ಬೌಲಿಂಗ್ ಆಲ್ರೌಂಡರ್. ಅದರೆ ಐದನೇ ಬೌಲರ್ ಆಡಿಸಬೇಕೋ ಬೇಡ್ವೋ ಅನ್ನುವುದು ದೊಡ್ಡ ಚರ್ಚೆ. ಐದನೇ ಬೌಲರ್ ಆಡಿದರೆ ಒಬ್ಬ ಬ್ಯಾಟ್ಸ್ಮನ್ ಕಡಿಮೆ ಆಗುತ್ತಾರೆ. ಹೀಗಾಗಿ 5 ಬೌಲರ್ ಅಥವಾ 4 ಬೌಲರ್ ಚರ್ಚೆ ಜೋರಾಗಿದೆ.
ಇಶಾಂತ್ ಅಥವಾ ಸಿರಾಜ್..?
ಟೀಮ್ ಇಂಡಿಯಾದಲ್ಲಿ 4ನೇ ಫಾಸ್ಟ್ ಬೌಲರ್ ಯಾರು ಅನ್ನುವ ಬಗ್ಗೆ ಚರ್ಚೆ ಇದೆ. ಅನುಭವಿ ಇಶಾಂತ್ ಶರ್ಮಾ ಮತ್ತು ಆರ್ಸಿಬಿ ಎಕ್ಸ್ಪ್ರೆಸ್ ಮೊಹಮ್ಮದ್ ಸಿರಾಜ್ ನಡುವೆ ಸ್ಪರ್ಧೆ ಜೋರಾಗಿದೆ. ಇಶಾಂತ್ ಇತ್ತೀಚಿನ ದಿನಗಳಲ್ಲಿ ಫಾರ್ಮ್ನಲ್ಲಿಲ್ಲ ಅನ್ನುವುದು ಸಿರಾಜ್ಗೆ ಬೋನಸ್. ಆದರೆ ಅನುಭವದ ಲೆಕ್ಕದಲ್ಲಿ ಸಿರಾಜ್ ಇಶಾಂತ್ ಗೆ ಸಾಟಿಯಲ್ಲ.
6 ಬ್ಯಾಟ್ಸ್ಮನ್ ಅಥವಾ 7 ಬ್ಯಾಟ್ಸ್ಮನ್..?
ಮಾಯಾಂಕ್, ರಾಹುಲ್, ಪೂಜಾರಾ ಮತ್ತು ವಿರಾಟ್ ಕೊಹ್ಲಿ ಬ್ಯಾಟಿಂಗ್ನ ಆಧಾರ ಸ್ಥಂಭಗಳು. 5 ಮತ್ತು 6 ನೇ ಸ್ಥಾನದಲ್ಲಿ ರಿಷಬ್ ಪಂತ್ ಸೇರಿದಂತೆ ಮತ್ತೊಬ್ಬರ ಆಯ್ಕೆ ನಡೆಯುತ್ತದೆ. 5 ಬೌಲರ್ಗಳನ್ನು ಆಡಿಸಿದರೆ ಶ್ರೇಯಸ್, ವಿಹಾರಿ ಮತ್ತು ರಹಾನೆ ನಡುವೆ ಫೈಟ್ ಒಂದು ಸ್ಥಾನಕ್ಕೆ ಫೈಟ್. ಒಂದು ವೇಳೆ 7 ಬ್ಯಾಟ್ಸ್ಮನ್ಗಳನ್ನು ಆಡಿಸಿದರೂ 2 ಸ್ಥಾನಕ್ಕಾಗಿ ಈ ಮೂವರ ನಡುವೆ ಫೈಟ್ ಫಿಕ್ಸ್
ರಹಾನೆ, ವಿಹಾರಿ, ಅಯ್ಯರ್ ಕಾಂಬಿನೇಷನ್..?
ಅಜಿಂಕ್ಯಾ ರಹಾನೆ ಅನುಭವಿ. ವಿಹಾರಿ ಆಟ ಏನು ಅನ್ನುವುದು ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ನಲ್ಲಿ ಗೊತ್ತಾಗಿದೆ. ಶ್ರೇಯಸ್ ಅಯ್ಯರ್ಗೆ 2 ಟೆಸ್ಟ್ ಗಳ ಅನುಭವ ಇದ್ದರೂ ಶತಕ ಮತ್ತು ಆರ್ಧಶತಕದ ಬೋನಸ್ ಇದೆ. ಹೀಗಾಗಿ ಮೂವರಲ್ಲಿ ಯಾರು ಹಿತವರು ಅನ್ನುವುದು ತಲೆನೋವಾಗಿದೆ.
ಸೆಂಚೂರಿಯನ್ನ ಸೂಪರ್ ಸ್ಪೋರ್ಟ್ಸ್ ಪಾರ್ಕ್ನಲ್ಲಿ ಟೆಸ್ಟ್ ನಡೆಯುವುದರಿಂದ ಕಾಂಬಿನೇಷನ್ ಆಯ್ಕೆ ಬಹಳ ಮುಖ್ಯವಾಗಿದೆ. ಆಯ್ಕೆಯಲ್ಲಿ ಸ್ವಲ್ಪ ಎಡವಿದರೂ ಹಿನ್ನಡೆಯಾಗುವುದು ಖಚಿತ.