Monday, June 5, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

ವಿರಾಟ್​​ ಕ್ಯಾಪ್ಟನ್ಸಿಗೆ ಟೆನ್ಷನ್​​, ಕಿಂಗ್​​ ಕೊಹ್ಲಿ ಬ್ಯಾಟಿಂಗ್​​ ಮೇಲೆ ಡೈರೆಕ್ಟ್​​ ಎಫೆಕ್ಟ್​​..?

December 24, 2021
in Cricket, ಕ್ರಿಕೆಟ್
virat kohli rcb ipl 2022 sports karnataka

virat kohli rcb ipl 2022 sports karnataka

Share on FacebookShare on TwitterShare on WhatsAppShare on Telegram

ಟೀಮ್​​ ಇಂಡಿಯಾದ ಟೆಸ್ಟ್​​ ಕ್ಯಾಪ್ಟನ್​​ ವಿರಾಟ್​​ ಕೊಹ್ಲಿ ಕೆಲ ವರ್ಷಗಳ ಹಿಂದೆ ಶತಕಗಳ ಮೇಲೆ ಶತಕ ಬಾರಿಸಿದ್ದರು. ಆದರೆ ಇತ್ತೀಚಿನ ಎರಡು ವರ್ಷಗಳಲ್ಲಿ ವಿರಾಟ್​​ ಬ್ಯಾಟ್​​ನಿಂದ ಶತಕಗಳು ಸಿಡಿದಿಲ್ಲ. ಏಕದಿನ ಪಂದ್ಯ ಇರಲಿ, ಟೆಸ್ಟ್​​ ಮ್ಯಾಚ್​​ ಇರಲಿ ವಿರಾಟ್​ ಶತಕ ಬಾರಿಸುವುದನ್ನು ಮರೆತು ಬಿಟ್ಟಿದ್ದಾರೆ. ಏಕದಿನ ಪಂದ್ಯಗಳಲ್ಲಿ ಸಚಿನ್​​​​ ದಾಖಲೆ ಮುರಿಯಬಲ್ಲ ಆಟಗಾರ ಎಂದು  ಹೆಸರು ಮಾಡಿದರೂ, ಕಳೆದ 2 ವರ್ಷಗಳ ಶತಕದ ಬರ ವಿರಾಟ್​​​​​​ ದಾಖಲೆಯನ್ನು ಮುಂದೂಡುತ್ತಿದೆ.

ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಸಚಿನ್​​​ 100 ಶತಕಗಳನ್ನು ಬಾರಿಸಿದ್ದರು. ಏಕದಿನ ಕ್ರಿಕೆಟ್​​ನಲ್ಲಿ 49 ಹಾಗೂ ಟೆಸ್ಟ್​​ ಕ್ರಿಕಟ್​​ನಲ್ಲಿ 51 ಶತಕ ಸಿಡಿಸಿದ್ದರು. ಸಚಿನ್​​ ಬಳಿಕ 71 ಶತಕ ಬಾರಿಸಿರುವ ರಿಕಿ ಪಾಂಟಿಂಗ್​​ 2ನೇ ಸ್ಥಾನದಲ್ಲಿದ್ದಾರೆ. ವಿರಾಟ್​​ ಖಾತೆಯಲ್ಲಿ 70 ಅಂತರಾಷ್ಟ್ರೀಯ ಶತಕಗಳಿವೆ. ವಿರಾಟ್​​​ ಟೆಸ್ಟ್​​ನಲ್ಲಿ 27 ಹಾಗೂ ಏಕದಿನ ಕ್ರಿಕೆಟ್​​ನಲ್ಲಿ 43 ಶತಕ ಸಿಡಿಸಿದ್ದಾರೆ. ಟೆಸ್ಟ್​ನಲ್ಲಿ ಸಚಿನ್​​ ಶತಕದ ಬಳಿ ಹೋಗುವುದು ವಿರಾಟ್​​ಗೆ ಕಷ್ಟದ ಮಾತು. ಆದರೆ ಏಕದಿನ ಕ್ರಿಕೆಟ್​​ನಲ್ಲಿ ವಿರಾಟ್​​ ಸಚಿನ್​​​ ದಾಖಲೆಯನ್ನು ಮುರಿಯಬಹುದು ಅನ್ನುವ ಲೆಕ್ಕಾಚಾರವಿದೆ.

ಏಕದಿನ ಮತ್ತು ಟಿ-20 ಕ್ಯಾಪ್ಟನ್ಸಿ ವಿರಾಟ್​​ ಕೈಯಿಂದ ತಪ್ಪಿ ಹೋಗಿದೆ. ಹೀಗಾಗಿ ವಿರಾಟ್​​​ ಕೊಂಚ ಗಲಿಬಿಲಿಯಾಗಿದ್ದಾರೆ. ಅದರಲ್ಲೂ ಏಕದಿನ ಕ್ರಿಕೆಟ್​​ನ ಕ್ಯಾಪ್ಟನ್ಸಿ ತಪ್ಪಿರುವುದು ವಿರಾಟ್​​ಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ವಿರಾಮ ಪಡೆದುಕೊಂಡಿದ್ದಾರೆ. ಅಂದಹಾಗೇ, ವಿರಾಟ್​​ 2023ರಲ್ಲಿ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್​​ನಲ್ಲಿ ಟೀಮ್​​ ಇಂಡಿಯಾವನ್ನು ಮುನ್ನಡೆಸುವ ಕನಸು ಕಂಡಿದ್ದರು. ಅದಾದ ಬಳಿಕ ಏಕದಿನ ಕ್ರಿಕೆಟ್​​ನಿಂದ ನಿವರತ್ತಿ ಪಡೆಯುವ ಕನಸು ವಿರಾಟ್​ಗಿತ್ತು ಎನ್ನಲಾಗಿದೆ. ಆದರೆ ಸದ್ಯ ತಂಡವನ್ನು ಮುನ್ನಡೆಸುವ ಕನಸು ನನಸಾಗದು.

ಈ ಮಧ್ಯೆ ಏಕದಿನ ಕ್ರಿಕೆಟ್​​ನಲ್ಲಿ ಇನ್ನು 7 ಶತಕ ದಾಖಲಿಸಿದರೆ ವಿರಾಟ್​​ ಸಚಿನ್​​ ದಾಖಲೆಯನ್ನು ಮೀರಿ ನಿಲ್ಲುತ್ತಾರೆ. ಆದರೆ ಅವರ ಮಾನಸಿಕ ಗೊಂದಲಗಳು ಮತ್ತು ಇತ್ತೀಚಿನ ಫಾರ್ಮ್​ ಸಮಸ್ಯೆ ಅವರನ್ನು ಈ ದಾಖಲೆ ಮಾಡಲು ಬಿಡುತ್ತಾ ಅನ್ನುವ ಪ್ರಶ್ನೆ ಕ್ರಿಕೆಟ್​​ ವಲಯದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ.

6ae4b3ae44dd720338cc435412543f62?s=150&d=mm&r=g

admin

See author's posts

Tags: Team IndiaVirat 100Virat Kohli
ShareTweetSendShare
Next Post
Pro kabaddi: ದಬಾಂಗ್ ಎದುರು ಪುಣೇರಿ ಪಲ್ಟಿ

Pro kabaddi: ದಬಾಂಗ್, ಮುಂಬಾ ಕಾದಾಟ

Leave a Reply Cancel reply

Your email address will not be published. Required fields are marked *

Stay Connected test

Recent News

Ranji Trophy 2023: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೇತೇಶ್ವರ್‌ ಪುಜಾರ ಮತ್ತೊಂದು ಮೈಲುಗಲ್ಲು

WTC Final: ಇಂಗ್ಲೆಂಡ್‌ ಅಂಗಳದಲ್ಲಿ ಚೇತೇಶ್ವರ್‌ ಪುಜಾರ ಟೆಸ್ಟ್‌ ದಾಖಲೆ ಹೇಗಿದೆ?

June 5, 2023
WTC Final: ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ನೆಚ್ಚಿನ ತಂಡ: ವಾಸಿಂ ಅಕ್ರಮ್

WTC Final: ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ನೆಚ್ಚಿನ ತಂಡ: ವಾಸಿಂ ಅಕ್ರಮ್

June 5, 2023
WTC Final: ಆಸೀಸ್‌ ಚಾಲೆಂಜ್‌ ಎದುರಿಸಲು ಭಾರತ ಸಜ್ಜು: ಓವಲ್‌ ಅಂಗಳಕ್ಕೆ ಬಂದಿಳಿದ ರೋಹಿತ್‌ ಪಡೆ

WTC Final: ಆಸೀಸ್‌ ಚಾಲೆಂಜ್‌ ಎದುರಿಸಲು ಭಾರತ ಸಜ್ಜು: ಓವಲ್‌ ಅಂಗಳಕ್ಕೆ ಬಂದಿಳಿದ ರೋಹಿತ್‌ ಪಡೆ

June 5, 2023
IND v AUS 2nd Test: ಶಮಿ, ಜಡೇಜಾ, ಅಶ್ವಿನ್‌ ದಾಳಿಗೆ ಆಸೀಸ್‌ ತತ್ತರ: ಮೊದಲ ಇನ್ನಿಂಗ್ಸ್‌ನಲ್ಲಿ 263ಕ್ಕೆ ಆಲೌಟ್‌

WTC FINAL: ಇಂಗ್ಲೆಂಡ್‌ ನೆಲದಲ್ಲಿ ಟೀಂ ಇಂಡಿಯಾ ವೇಗಿಗಳ ಪ್ರದರ್ಶನ ಹೇಗಿದೆ?

June 4, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram