ಟೀಮ್ ಇಂಡಿಯಾ ಬದಲಾಗಿದೆ. ತವರಿನಲ್ಲಿ ಮಾತ್ರ ಟೆಸ್ಟ್ ಪಂದ್ಯಗಳನ್ನು ಗೆಲ್ಲುತ್ತಿದ್ದ ಟೀಮ್ ಇಂಡಿಯಾ ಈಗ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಲ್ಲೂ ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. ತವರಿನ್ಲಲಂತೂ ಟೀಮ್ ಇಂಡಿಯಾವನ್ನು ಸದ್ಯದ ಮಟ್ಟಿಗೆ ಸೋಲಿಸುವುದು ಕಷ್ಟದ ಮಾತು. ಅದು ಕೂಡ ವಿರಾಟ್ ಕೊಹ್ಲಿ ನಾಯಕತ್ವವಹಿಸಿಕೊಂಡ ಮೇಲೆ ತವರಿನಲ್ಲಿ ಟೀಮ್ ಇಂಡಿಯಾ ಸೋತಿದ್ದು ಕೇವಲ ಎರಡು ಪಂದ್ಯಗಳನ್ನಷ್ಟೇ.
ಕಾನ್ಪುರ ಟೆಸ್ಟ್ನಲ್ಲಿ ನ್ಯೂಜಿಲೆಂಡ್ ಹೋರಾಟ ಮಾಡಿ ಟೆಸ್ಟ್ ಡ್ರಾ ಮಾಡಿಕೊಂಡಿತ್ತು. ಆ ಪಂದ್ಯಕ್ಕೆ ವಿರಾಟ್ ವಿರಾಮ ಪಡೆದಿದ್ದರು. ಈಗ ತಂಡಕ್ಕೆ ವಾಪಾಸಾಗಿ ಮುಂಬೈ ಟೆಸ್ಟ್ನಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ತವರಿನಲ್ಲಿ ಭಾರತ ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿಯಲ್ಲಿ 30 ಪಂದ್ಯಗಳನ್ನು ಆಡಿದೆ. ಈ ಪೈಕಿ 23 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 5 ಪಂದ್ಯಗಳು ಡ್ರಾಗೊಂಡಿವೆ. ಕೊಹ್ಲಿ ಕ್ಯಾಪ್ಟನ್ ಶಿಪ್ ನಲ್ಲಿ ಟೀಂ ಇಂಡಿಯಾ ತವರಿನಲ್ಲಿ ಕೇವಲ 2 ಬಾರಿ ಮಾತ್ರ ಸೋಲು ಕಂಡಿದೆ.
ವಿರಾಟ್ ಕೊಹ್ಲಿ 2014ರಲ್ಲಿ ಮಹೇಂದ್ರ ಸಿಂಗ್ ಧೋನಿ ಬಳಿಕ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರು. ತವರಿನಲ್ಲಿ ಭಾರತ ವಿರಾಟ್ ಕ್ಯಾಪ್ಟನ್ಸಿಯಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ವಿರುದ್ಧ ಮಾತ್ರ ತಲಾ ಒಂದೊಂದು ಪಂದ್ಯದಲ್ಲಿ ಸೋಲು ಕಂಡಿತ್ತು. ವಿರಾಟ್ ಒಟ್ಟಾರೆಯಾಗಿ 65 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದಾರೆ. ವಿರಾಟ್ ನಾಯಕತ್ವದಲ್ಲಿ ಟೀಮ್ ಇಂಡಿಯಾ 38 ಪಂದ್ಯಗಳನ್ನು ಗೆದ್ದುಕೊಂಡಿದ್ದು, 16 ಪಂದ್ಯಗಳಲ್ಲಿ ಸೋತಿದೆ. 11 ಮ್ಯಾಚ್ ಗಳು ಡ್ರಾ ಆಗಿವೆ. ಒಟ್ಟಿನಲ್ಲಿ ಟೀಮ್ ಇಂಡಿಯಾ ಈಗ ವಿಶ್ವದ ಬಲಿಷ್ಠ ತಂಡವಾಗಿ ಬೆಳೆದಿದೆ. ತವರಿನಲ್ಲಿ ಭಾರತ ತಂಡವನ್ನು ಸೋಲಿಸುವುದು ಅಸಾಧ್ಯದ ಮಾತು ಅನ್ನುವ ಹಾಗಾಗಿದೆ.