ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ (Westindies) ತಂಡವನ್ನು ಖೆಡ್ಡಾಕ್ಕೆ ಕೆಡವಿದ ಮೇಲೆ ಭಾರತ (India) 2ನೇ ಪಂದ್ಯದಲ್ಲೇ ಸರಣಿ ಗೆದ್ದು ಬಿಡುವ ಲೆಕ್ಕಾಚಾರ ಹಾಕಿಕೊಂಡಿದೆ. 3 ಪಂದ್ಯಗಳ ಸರಣಿಯ 2ನೇ ಪಂದ್ಯದಲ್ಲೇ ಸರಣಿ ಗೆದ್ದು ಬಿಟ್ಟರೆ, ಮೂರನೇ ಪಂದ್ಯದಲ್ಲಿ ಹೊಸಬರಿಗೆ ಅವಕಾಶ ನೀಡಬಹುದು ಅನ್ನುವ ಲೆಕ್ಕಾಚಾರ ನಡೆಯುತ್ತಿದೆ.
ಏಕದಿನ ಸರಣಿಯ 2ನೇ ಪಂದ್ಯವೂ ಅಹ್ಮದಾಬಾದ್ನ (Ahmadbad) ನರೇಂದ್ರ ಮೋದಿ (Narendra Modi Stadium) ಕ್ರೀಡಾಂಗಣದಲ್ಲಿ ನಡೆಯಲಿದೆ.
ಮೊದಲ ಏಕದಿನ ಪಂದ್ಯದಲ್ಲಿ ಭಾರತ (India) 6 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತ್ತು.
ಉಪನಾಯಕ ಕೆ.ಎಲ್. ರಾಹುಲ್ (KL Rahul)ತಂಡಕ್ಕೆ ವಾಪಾಸಾಗಿದ್ದಾರೆ. ಹೀಗಾಗಿ ಭಾರತದ ಕಾಂಬಿನೇಷನ್ನಲ್ಲಿ ಒಂದು ಬದಲಾವಣೆ ಆಗಬಹುದು.