ಭಾರತದಲ್ಲಿ ಡೇ-ನೈಟ್ ಟೆಸ್ಟ್ ಪಂದ್ಯ ನಡೆದಿರುವುದು ತೀರಾ ಅಪರೂಪ. ಕೊಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ಬಾಂಗ್ಲಾದೇಶದ ವಿರುದ್ಧ ಹಗಲು ರಾತ್ರಿ ಟೆಸ್ಟ್ ಪಂದ್ಯ ನಡೆದಿದ್ದರೆ, ನಂತರ ಇಂಗ್ಲೆಂಡ್ ವಿರುದ್ಧ ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಡೇ ನೈಟ್ ಟೆಸ್ಟ್ ಪಂದ್ಯ ನಡೆದಿತ್ತು. ಈಗ ಮೂರನೇ ಬಾರಿ ಡೇ-ನೈಟ್ ಟೆಸ್ಟ್ಗೆ ಆತಿಥ್ಯ ನೀಡುವ ಸರದಿ ಬೆಂಗಳೂರಿನದ್ದಾಗಲಿದೆ.
ವೆಸ್ಟ್ಇಂಡೀಸ್ ಸರಣಿ ಮುಗಿದ ಬೆನ್ನಲ್ಲೇ ಶ್ರೀಲಂಕಾ ಭಾರತ ಪ್ರವಾಸ ಮಾಡಲಿದೆ. 3 ಪಂದ್ಯಗಳ ಟಿ20 ಸರಣಿಯ ಜೊತೆ 2 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಟೆಸ್ಟ್ ಸರಣಿಯ 2 ಪಂದ್ಯಗಳ ಪೈಕಿ ಒಂದು ಪಂದ್ಯ ಡೇ-ನೈಟ್ ಮ್ಯಾಚ್ ಆಗಿರಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನ ಡೇ-ನೈಟ್ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ನೀಡಲಿದೆ ಎಂದು ಬಿಸಿಸಿಐ ತಿಳಿಸಿದೆ.
ಕೊಲ್ಕತ್ತಾದಲ್ಲಿ ಡೇ ನೈಟ್ ಟೆಸ್ಟ್ ನಡೆದಿದ್ದಾಗ ಭಾರತ ಇನ್ನಿಂಗ್ಸ್ ಮತ್ತು 46 ರನ್ಗಳ ಜಯ ದಾಖಲಿಸಿತ್ತು. ಅಹ್ಮಾದಾಬಾದ್ನಲ್ಲ ಇಂಗ್ಲೆಂಡ್ ವಿರುದ್ಧ ಡೇ ನೈಟ್ ಟೆಸ್ಟ್ನಲ್ಲಿ 10 ವಿಕೆಟ್ಗೆಗಳ ಜಯ ಸಾಧಿಸಿತ್ತು. ಶ್ರೀಲಂಕಾ ವಿರುದ್ಧದ ಡೇ-ನೈಟ್ ಟೆಸ್ಟ್ ಬೆಂಗಳೂರಿನಲ್ಲಿ ಫೆಬ್ರವರಿ 25 ರಂದು ನಡೆಯುವ ಸಾಧ್ಯತೆ ಇದೆ.
ವಿರಾಟ್ ಕೊಹ್ಲಿಯ 100ನೇ ಟೆಸ್ಟ್ ಪಂದ್ಯ ಡೇ-ನೈಟ್ ಟೆಸ್ಟ್ ಪಂದ್ಯವಾಗಲಿ ಅನ್ನುವ ಚರ್ಚೆ ಕೂಡ ನಡೆಯುತ್ತಿದೆ. ಸದ್ಯ 99 ಟೆಸ್ಟ್ ಪಂದ್ಯಗಳನ್ನು ಕೊಹ್ಲಿ ಆಡಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದ ಮೂಲಕ ಕೊಹ್ಲಿ 100 ಟೆಸ್ಟ್ ಪಂದ್ಯಗಳ ಗಡಿ ದಾಟುವ ವಿಶ್ವಾಸದಲ್ಲಿದ್ದಾರೆ. ಈ ಮಧ್ಯೆ ಬಿಸಿಸಿಐ ಐಪಿಎಲ್ ಭಾರತದಲ್ಲಿ ನಡೆಯುವು ಗ್ಯಾರೆಂಟಿ ಎಂದು ಸ್ಪಷ್ಟ ಪಡಿಸಿದೆ.