Tata Open Maharashtra – ಮುನ್ನಡೆ ಸಾಧಿಸಿದ ರೋಹನ್ ಬೋಪಣ್ಣ – ರಾಮ್ ಕುಮಾರ್ ರಾಮನಾಥನ್ ಜೋಡಿ
ಭಾರತದ ಡಬಲ್ಸ್ ಜೋಡಿ ರೋಹನ್ ಬೋಪಣ್ಣ ಮತ್ತು ರಾಮ್ ಕುಮಾರ್ ರಾಮನಾತನ್ ಅವರು ಟಾಟಾ ಓಪನ್ ಮಹಾರಾಷ್ಟ್ರ ಟೆನಿಸ್ ಟೂರ್ನಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಎರಡನೇ ಶ್ರೇಯಾಂಕಿತ ರೋಹನ್ ಬೋಪಣ್ಣ ಮತ್ತು ರಾಮ್ ಕುಮಾರ್ ರಾಮನಾಥನ್ ಅವರು 6-3, 3-6, 7-6ರಿಂದ ಅಮೆರಿಕಾದ ಜಾಮಿಯ್ ಕರೆಟಾನಿ ಮತ್ತು ನಿಕೊಲಾಸ್ ಮೊನ್ರೊಯ್ ಅವರನ್ನು ಪರಾಭವಗೊಳಿಸಿದ್ರು.
ರೋಹನ್ ಬೋಪಣ್ಣ ಮತ್ತು ರಾಮ್ ಕುಮಾರ್ ರಾಮನಾಥನ್ ಅವರು ಆಡಿಲೇಡ್ ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು. ಮೊದಲ ಸೆಟ್ ನಲ್ಲಿ ಅಮೋಘ ಆಟವನ್ನಾಡಿದ ಬೋಪಣ್ಣ ಮತ್ತು ರಾಮನಾಥ್ ಎರಡನೇ ಸೆಟ್ ನಲ್ಲಿ ಹಿನ್ನಡೆ ಅನುಭವಿಸಿದ್ರು. ಹಾಗೇ ಅಂತಿಮ ಸೆಟ್ ನಲ್ಲಿ ಜಿದ್ದಾ ಜಿದ್ದಿನ ಹೋರಾಟ ನಡೆಸಿ ಪ್ರಯಾಸದ ಜಯ ಸಾಧಿಸಿದ್ರು.
Tata Open Maharashtra – Rohan Bopanna and Ramkumar Ramanathan advance
ಹಾಗೇ ಮತ್ತೊಂದು ಡಬಲ್ಸ್ ನಲ್ಲಿ ಭಾರತದ ಸಕೇತ್ ಮೈನೆನಿ ಮತ್ತು ಸಸಿ ಕುಮಾರ್ ಮುಕುಂದ್ ಅವರು 6-3, 6-4ರಿಂದ ದಿವಿಜಿ ಶರಣ್ ಮತ್ತು ಯುಕಿ ಭಾಂಬ್ರಿ ಅವರನ್ನು ಪರಾಭವಗೊಳಿಸಿದ್ರು.
ಇನ್ನೊಂದು ಡಬಲ್ಸ್ ಪಂದ್ಯದಲ್ಲಿ ಜೆರಿ ವೆಸೆಲ್ ಮತ್ತು ಅಲೆಕ್ಸಾಂಡರ್ ಎರ್ಲರ್ ಅವರು 7-6, 6-4ರಿಂದ ಫ್ರೆಂಚ್ ನ ಹ್ಯೂಗೊ ಗ್ರೇನರ್ ಮತ್ತು ಕ್ವಿಂಟಿನಾ ಹೇಲ್ಸ್ ಅವರನ್ನು ಸೋಲಿಸಿ ಮುನ್ನಡೆ ಸಾಧಿಸಿದ್ರು.
ಪುರುಷರ ಎರಡನೇ ಸುತ್ತಿನ ಸಿಂಗಲ್ಸ್ ನಲ್ಲಿ ಪೋಚ್ಗೀಸ್ ನ ಸೌಸಾ ಅವರು 6-6, 6-3, 7-6ರಿಂದ ಮೂರನೇ ಶ್ರೇಯಾಂಕಿತ ಗಿಯಾನ್ಲುಕಾ ಮಾರ್ಗರ್ ಅವರನ್ನು ಅಚ್ಚರಿಗೊಳಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ರು.
ಇಂದು ನಡೆಯಲಿರುವ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಯುಕಿ ಭಾಂಬ್ರಿ ಅವರು ಎಂಟನೇ ಶ್ರೇಯಾಂಕಿತ ಸ್ಟೆಫಾನೊ ಟ್ರಾವಾಗ್ಲಿಯಾ ಅವರನ್ನು ಎದುರಿಸಲಿದ್ದಾರೆ.