ವಿರಾಟ್ ಕೊಹ್ಲಿ ತಮ್ಮ ಸ್ನೇಹಿತ ಮತ್ತು ಸ್ಟಾರ್ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಮುಂದಿನ ವರ್ಷ ಯಾವುದಾದರೂ ಪಾತ್ರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮರಳುತ್ತಾರೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ಎಬಿ ಡಿವಿಲಿಯರ್ಸ್ RCB ಯ ಅವಿಭಾಜ್ಯ ಅಂಗವಾಗಿದ್ದರು, ಆದರೆ ಅವರು ಕಳೆದ ವರ್ಷ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. ಆರ್‌ಸಿಬಿಯ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಾಕಿದ ಸಂಭಾಷಣೆಯಲ್ಲಿ ವಿರಾಟ್ ಕೊಹ್ಲಿ, ‘ನಾನು ಎಬಿ ಡಿವಿಲಿಯರ್ಸ್‌ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ನಾನು ಎಬಿ ಡಿವಿಲಿಯರ್ಸ್ ಜೊತೆ ನಿಯಮಿತವಾಗಿ ಮಾತನಾಡಿದ್ದೇನೆ. ಅವರು ಇತ್ತೀಚೆಗೆ ತಮ್ಮ ಕುಟುಂಬದೊಂದಿಗೆ ಗಾಲ್ಫ್ ವೀಕ್ಷಿಸಲು ಅಮೆರಿಕಕ್ಕೆ ಹೋಗಿದ್ದರು. ಅವರು RCB ಯ ಪ್ರದರ್ಶನದ ಬಗ್ಗೆ ಗಮನ ಹರಿಸಿದ್ದಾರೆ. ಮುಂದಿನ ವರ್ಷ ಅವರು ಯಾವದಾದರೂ ಪಾತ್ರದಲ್ಲಿ ತಂಡದೊಂದಿಗೆ ಇರುತ್ತಾರೆ ಎಂದು ನಿರೀಕ್ಷಿಸಲಾಗಿದೆ” ಎಂದು ವಿರಾಟ್ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದಾರೆ. ಅವರು, 12 ಪಂದ್ಯಗಳಲ್ಲಿ ಕೇವಲ 216 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಮೂರು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ನನ್ನ ವೃತ್ತಿಜೀವನದಲ್ಲಿ ಈ ರೀತಿ ಎಂದು ಆಗಿಲ್ಲ ಎಂದಿದ್ದಾರೆ.
ಜನರ ಮಾತಿಗೆ ಬೆಲೆ ಕೊಡುವುದಿಲ್ಲ, ಟೀಕಾಕಾರರನ್ನು ಕಡೆಗಣಿಸುತ್ತೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ‘ಮಾತನಾಡುವವರು ನನ್ನ ಸ್ಥಾನವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಮತ್ತು ನಾನು ಏನು ಯೋಚಿಸುತ್ತೇನೆ ಎಂದು ಯೋಚಿಸಲು ಸಾಧ್ಯವಿಲ್ಲ. ನಾನು ಟಿವಿಯ ಧ್ವನಿಯನ್ನು ಆಫ್ (ಮ್ಯೂಟ್) ಮಾಡುತ್ತೇನೆ ಅಥವಾ ನಾನು ಅವರತ್ತ ಗಮನ ಹರಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಕೊಹ್ಲಿ RCB ನಾಯಕತ್ವವನ್ನು ತೊರೆದ ನಂತರ ಫಾಫ್ ಡು ಪ್ಲೆಸಿಸ್ ಕಮಾಂಡ್ ಅನ್ನು ವಹಿಸಿಕೊಂಡರು. ನಮ್ಮಲ್ಲಿ ಉತ್ತಮ ಬಾಂಧವ್ಯವಿದ್ದು, ನಾನು ಮತ್ತು ಫಾಫ್ ಪರಸ್ಪರ ಗೌರವವನ್ನು ಹೊಂದಿದ್ದೇವೆ ಎಂದು ಕೊಹ್ಲಿ ಹೇಳಿದ್ದಾರೆ.