Taipei Open: ಭಾರತದ ಮಿಶ್ರ ಜೋಡಿ ಪ್ರಿ ಕ್ವಾರ್ಟರ್ ಗೆ
ಮಂಗಳವಾರ ತೈಪೆಯಲ್ಲಿ ನಡೆದ ತೈಪೆ ಓಪನ್ ಸೂಪರ್ 300 ಟೂರ್ನಮೆಂಟ್‌ನಲ್ಲಿ ಭಾರತದ ಮಿಶ್ರ ಜೋಡಿಯಾದ ತನಿಶಾ ಕ್ರಾಸ್ಟೊ ಮತ್ತು ಇಶಾನ್ ಭಟ್ನಾಗರ್ ಸ್ವೆಟ್ಲಾನಾ ಜಿಲ್ಬರ್‌ಮನ್ ಮತ್ತು ಮಿಶಾ ಜಿಲ್ಬರ್‌ಮನ್ ಅವರನ್ನು ಸೋಲಿಸಿ ಪ್ರಿ-ಕ್ವಾರ್ಟರ್‌ಫೈನಲ್ ಪ್ರವೇಶಿಸಿದೆ.
ಈ ವರ್ಷದ ಆರಂಭದಲ್ಲಿ ಸೈಯದ್ ಮೋದಿ ಇಂಟರ್‌ನ್ಯಾಶನಲ್ ಸೂಪರ್ 300 ಅನ್ನು ಗೆದ್ದ ವಿಶ್ವದ 47 ನೇ ಶ್ರೇಯಾಂಕದ ಜೋಡಿ, ಕೇವಲ 26 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 21-15 21-8 ಗೆಲುವಿನ ನಗೆ ಬೀರಿದೆ. ವಿಜೇತ ಜೋಡಿ 95-ನೇ ಶ್ರೇಯಾಂಕಿತ ಇಸ್ರೇಲಿ ಪ್ರತಿಸ್ಪರ್ಧಿಗಳ ವಿರುದ್ಧ ಅಬ್ಬರಿಸಿತು.

ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಟೂರ್ನಿಯಿಂದ ಹಿಂದೆ ಸರಿದಿದ್ದು, ಅವರ ಪತಿ ಪರುಪಳ್ಳಿ ಕಶ್ಯಪ್ ಸ್ಥಳೀಯ ಚಾಲೆಂಜರ್ ಚಿ ಯು ಜೆನ್ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ.
ಎಸ್ ಶಂಕರ್ ಮುತ್ತುಸ್ವಾಮಿ ಸುಬ್ರಮಣಿಯನ್ ಮತ್ತು ಕೆಯೂರ ಮೋಪತಿ ತಮ್ಮ ಅರ್ಹತಾ ಸುತ್ತಿನಲ್ಲಿ ಸೋತರು.
ಸುಬ್ರಮಣಿಯನ್ 17-21 23-21 17-21 ರಿಂದ ಚೈನೀಸ್ ತೈಪೆಯ ಜುವೊ-ಫು ಲಿಯಾವೊ ವಿರುದ್ಧ, ಮತ್ತೊಂದೆಡೆ ಕೆಯೂರ 13-21 14-21 ರಿಂದ ಇಂಡೋನೇಷ್ಯಾದ ಕೋಮನ್ ಅಯು ಕಾಹ್ಯಾ ದೆವಿ ವಿರುದ್ಧ ಸೋತರು.