ಕೊನೆಯ ಓವರ್(Last Over)ವರೆಗೂ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಚಾಣಾಕ್ಷ ಪ್ರದರ್ಶನ ನೀಡಿದ ನೆದರ್ಲೆಂಡ್ಸ್(Netherlands), ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ನಮೀನಿಯಾ(Namibia) ವಿರುದ್ಧ 5 ವಿಕೆಟ್‌ಗಳ ಗೆಲುವು ಸಾಧಿಸಿತು. ಗೀಲಾಂಗ್‌ನಲ್ಲಿ ನಡೆದ A ಗುಂಪಿನ ಪಂದ್ಯದಲ್ಲಿ ಮೊದಲು ಮೊದಲು ಬ್ಯಾಟ್ ಮಾಡಿದ ನಮೀಬಿಯಾ, ಬ್ಯಾಟಿಂಗ್ ವೈಫಲ್ಯದಿಂದಾಗಿ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 121 ರನ್‌ಗಳಿಸಿತು. ಸಾಧಾರಣ ಟಾರ್ಗೆಟ್ ಚೇಸ್ ಮಾಡಿದ ನೆದರ್ಲೆಂಡ್ಸ್, 19.3 ಓವರ್‌ಗಳಲ್ಲಿ 5 ವಿಕೆಟ್‌ಗೆ 122 ರನ್ ಕಲೆಹಾಕುವ ಮೂಲಕ ಗೆಲುವಿನ ನಗೆಬೀರಿತು. ಆ ಮೂಲಕ ಸತತ 2ನೇ ಗೆಲುವಿನೊಂದಿಗೆ ʼಎʼ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನಮೀಬಿಯಾ, ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲವಾಯಿತು. ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಜೆನ್ ಫ್ರೈಲಿಂಕ್(43) ರನ್‌ಗಳಿಸಿ ತಂಡಕ್ಕೆ ಆಸರೆಯಾದರೆ. ಮೈಕಲ್ ವ್ಯಾನ್ ಲಂಗೆನ್(20) ಹಾಗೂ ಸ್ಟೀಫನ್ ಬಾರ್ಡ್(19) ರನ್‌ಗಳ ಉಪಯುಕ್ತ ರನ್ ಕಲೆಹಾಕುವ ಮೂಲಕ ತಂಡದ ಮೊತ್ತವನ್ನ ಹೆಚ್ಚಿಸಿದರು. ಅಂತಿಮವಾಗಿ ನಮೀಬಿಯಾ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 121 ರನ್‌ಗಳ ಗೌರವಯುತ ಮೊತ್ತಗಳಿಸಿತು. ನೆದರ್ಲೆಂಡ್ ಪರ ಡೀ ಲೀಡ್ 2 ವಿಕೆಟ್ ಪಡೆದು ಮಿಂಚಿದರು.
ನಮೀಬಿಯಾ ನೀಡಿದ 122 ರನ್‌ಗಳ ಸಾಧಾರಣ ಟಾರ್ಗೆಟ್ ಚೇಸ್ ಮಾಡಿದ ನೆದರ್ಲೆಂಡ್ಸ್ ಉತ್ತಮ ಆರಂಭ ಪಡೆಯಿತು. ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ಮ್ಯಾಕ್ಸ್ ಓಡೌಡ್(35) ಹಾಗೂ ವಿಕ್ರಂಜಿತ್ ಸಿಂಗ್(39) ಬಿರುಸಿನ ಬ್ಯಾಟಿಂಗ್ ಮೂಲಕ ತಂಡದ ಗೆಲುವಿನ ಹಾದಿ ಸುಗಮಗೊಳಿಸಿದರು. ಆದರೆ ಇವರಿಬ್ಬರ ವಿಕೆಟ್ ಪತನದ ನಂತರ ಬಂದ ಟಾಮ್ ಕೂಪರ್(6), ಆಕ್ರಮಾನ್(0) ಹಾಗೂ ಎಡ್ವರ್ಡ್ಸ್(1) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಪರಿಣಾಮ ಕೇವಲ 10 ರನ್‌ಗಳ ಅಂತರದಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡ ನೆದರ್ಲೆಂಡ್ಸ್, ಸಂಕಷ್ಟಕ್ಕೆ ಸಿಲುಕಿತು. ಆದರೆ ಒಂದೆಡೆ ವಿಕೆಟ್ ಬೀಳುತ್ತಿದ್ದರು, ಜವಾಬ್ದಾರಿಯುತ ಆಟವಾಡಿದ ಡೀ ಲೀಡ್(30*) ತಂಡವನ್ನ ಗೆಲುವಿನ ದಡ ಸೇರಿಸಿದರು. ನಮೀಬಿಯಾ ಪರ ಜೆಜೆ ಸ್ಮಿತ್ 2 ವಿಕೆಟ್ ಪಡೆದರು.