ಆರಂಭಿಕರಾದ ಮೊಹಮ್ಮದ್ ರಿಜ್ವಾನ್(Mohammad Rizwan)(69) ಹಾಗೂ ನಾಯಕ ಬಾಬರ್ ಆಜಂ(Babar Azam)(55) ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಟಿ20 ತ್ರಿಕೋನ ಸರಣಿಯಲ್ಲಿ ಬಾಂಗ್ಲಾದೇಶ(Bangladesh)ದ ವಿರುದ್ಧ ಪಾಕಿಸ್ತಾನ(Pakistan) 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದ್ದು, ಆ ಮೂಲಕ ಸರಣಿಯ ಫೈನಲ್ ಪ್ರವೇಶಿಸಿದೆ.
ಕ್ರೈಸ್ಟ್ಚರ್ಚ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾ, 20 ಓವರ್ಗಳಲ್ಲಿ 6 ವಿಕೆಟ್ಗೆ 176 ರನ್ಗಳ ಪೈಪೋಟಿಯ ಮೊತ್ತ ಕಲೆಹಾಕಿತು. ಆದರೆ ಈ ಗುರಿಯನ್ನ ಸುಲಭವಾಗಿ ಚೇಸ್ ಮಾಡಿದ ಪಾಕಿಸ್ತಾನ, 19.5 ಓವರ್ಗಳಲ್ಲಿ 177/3 ರನ್ಗಳಿಸುವ ಮೂಲಕ ಗೆಲುವಿನ ನಗೆಬೀರಿತು. ಈ ಗೆಲುವಿನೊಂದಿಗೆ ಪಾಕಿಸ್ತಾನ, ಅ.14ರಂದು ನಡೆಯುವ ಸರಣಿಯ ಫೈನಲ್ ಪಂದ್ಯದಲ್ಲಿ ನ್ಯೂಜಿ಼ಲೆಂಡ್ ತಂಡವನ್ನ ಎದುರಿಸಲಿದೆ.
ಮೊದಲು ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ, 41 ರನ್ಗಳಿಗೆ ಇಬ್ಬರು ಆರಂಭಿಕರ ವಿಕೆಟ್ ಕಳೆದುಕೊಂಡಿತು. ಆದರೆ ನಂತರ ಜೊತೆಯಾದ ಅನುಭವಿ ಲಿಟ್ಟನ್ ದಾಸ್(69) ಹಾಗೂ ನಾಯಕ ಶಕೀಬ್-ಅಲ್-ಹಸನ್(68) ಉತ್ತಮ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾದರು. ಅಲ್ಲದೇ ಇವರಿಬ್ಬರು ಜವಾಬ್ದಾರಿಯುತ ಆಟದಿಂದ ಬಾಂಗ್ಲಾ ಪಡೆ, 173 ರನ್ಗಳನ್ನ ಕಲೆಹಾಕಿತು. ಪಾಕಿಸ್ತಾನದ ಪರ ನಸೀಮ್ ಶಾ ಹಾಗೂ ಮೊಹಮ್ಮದ್ ವಸೀಂ ತಲಾ 2 ವಿಕೆಟ್ ಪಡೆದರು.
ಬಾಂಗ್ಲಾದೇಶ ನೀಡಿದ 174 ರನ್ಗಳ ಟಾರ್ಗೆಟ್ ಚೇಸ್ ಮಾಡಿದ ಪಾಕಿಸ್ತಾನ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕರಾದ ಮೊಹಮ್ಮದ್ ರಿಜ್ವಾನ್(69) ಹಾಗೂ ನಾಯಕ ಬಾಬರ್ ಆಜಂ(55) ಅವರ ಆಕರ್ಷಕ ಬ್ಯಾಟಿಂಗ್ ಮೂಲಕ ತಂಡದ ಗೆಲುವಿನ ದಾರಿ ಸುಲಭ ಮಾಡಿದರು. ಮೊದಲ ಕ್ರಮಾಂಕದಲ್ಲಿ ಬಂದ ಹೈದರ್ ಅಲಿ(0) ಖಾತೆ ತೆರೆಯದೆ ಪೆವಿಲಿಯನ್ ಸೇರಿದರೆ, ನವಾಜ್(ಅಜೇಯ 45) ರನ್ಗಳಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.