ಓಪನರ್ ಜಾರ್ಜ್ ಮುನ್ಸೆ ಅವರ ಸೊಗಸಾದ ಅರ್ಧ ಶತಕದಿಂದ ಸ್ಕಾಟ್ಲೆಂಡ್ ಎರಡು ಬಾರಿ ಚಾಂಪಿಯನ್ ವೆಸ್ಟ್ಇಂಡೀಸ್ ತಂಡವನ್ನು 42 ರನ್ಗಳ ಅಂತರದಿಂದ ಗೆದ್ದು ಶಾಕ್ ಕೊಟ್ಟಿದೆ.
ಹೋಬರ್ಟ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ ನ ಮೂರನೆ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 160 ರನ್ ಕಲೆ ಹಾಕಿತು.ವೆಸ್ಟ್ ಇಂಡೀಸ್ 18.3 ಓವರ್ಗಳಲ್ಲಿ 118 ರನ್ ಗಳಿಗೆ ಆಲೌಟ್ ಆಯಿತು.
161 ರನ್ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಉತ್ತಮ ಆರಂಭ ಕೊಡುವಲ್ಲಿ ಎಡವಿತು. ಓಪನರ್ ಕೈಲೆ ಮೇಯರ್ಸ್ 20, ಎವಿನ್ ಲಿವೀಸ್ 14, ಬ್ರಾಂಡನ್ ಕಿಂಗ್ 17, ನಾಯಕ ನಿಕೊಲೊಸ್ ಪೂರಾನ್ 5, ಶಾಮರ್ಹ ಬ್ರೂಕ್ಸ್ 4, ರೊವಮನ್ ಪೊವೆಲ್ 5, ಆಲ್ರೌಂಡರ್ ಜಾಸನ್ ಹೋಲ್ಡರ್ 38 ಹಾಗೂ ಒಬೆಡ್ ಮೆಕ್ಕೊಯ್ ಅಜೇಯ 2 ರನ್ ಗಳಿಸಿದರು.
ಸ್ಕಾಟ್ಲೆಂಡ್ ಪರ ಮಾರ್ಕ ವಾಟ್ 12ಕ್ಕೆ 3, ಬ್ರಾಡ್ ವ್ಹೀಲ್ 32ಕ್ಕೆ 2, ಮೈಕಲ್ ಲೀಸ್ಕ್ 15ಕ್ಕೆ 2 ವಿಕೆಟ್ ಪಡೆದರು. ಜೋಶ್ ಡೇವಿ ಹಾಗು ಸಾಫ್ಯಾನ್ ಶರೀಫ್ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಸ್ಕಾಟ್ಲೆಂಡ್ ಪರ ಜಾರ್ಜ್ ಮುನ್ಸೆ (53 ಎಸೆತ, 9 ಬೌಂಡರಿ,ಅಜೇಯ 66 ರನ್) ಮೈಕಲ್ ಜಾನ್ಸ್ 20, ಮ್ಯಾತೀವ್ ಕ್ರಾಸ್ 3,ನಾಯಕ ರಿಚಿ ಬೆರಿಂಗ್ಟನ್ 16,ಕಾಲಂ ಮೆಕ್ಲಿಯೊಡ್ 23, ಕ್ರಿಸ್ ಗ್ರೀವ್ಸ್ ಅಜೇಯ 16 ರನ್ ಕಲೆ ಹಾಕಿದರು.
ಅಲ್ಜಾರಿ ಜೋಸೆಫ್ 28ಕ್ಕೆ 2, ಜಾಸನ್ ಹೋಲ್ಡರ್ 14ಕ್ಕೆ 2 ವಿಕೆಟ್ ಪಡೆದರು.
ಸ್ಕಾಟ್ಲೆಂಡ್ ಪರ ಅರ್ಧ ಶತಕ ಸಿಡಿಸಿದ ಜಾರ್ಜ್ ಮುನ್ಸೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.