ಆರಂಭಿಕ ಕೆ.ಎಲ್.ರಾಹುಲ್(57) ಹಾಗೂ ಸೂರ್ಯಕುಮಾರ್ ಯಾದವ್(50) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯ(Warm Up Match)ದಲ್ಲಿ ಭಾರತ 186 ರನ್‌ಗಳ ಉತ್ತಮ ಮೊತ್ತ ಕಲೆಹಾಕಿದೆ.
ಬ್ರಿಸ್ಬೆನ್(Brisbane)ನಲ್ಲಿ ನಡೆದ ಪಂದ್ಯದಲ್ಲಿ ಟಾಸ್(Toss) ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳ ಉತ್ತಮ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 186 ರನ್‌ಗಳ ಅತ್ಯುತ್ತಮ ಮೊತ್ತ ಕಲೆಹಾಕಿತು. ಭಾರತದ ಪರ ಕೆ.ಎಲ್.ರಾಹುಲ್(57) ಹಾಗೂ ಸೂರ್ಯಕುಮಾರ್ ಯಾದವ್(50) ಉತ್ತಮ ಆಟವಾಡಿದರು.
ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಕೆ.ಎಲ್.ರಾಹುಲ್(57) ಹಾಗೂ ನಾಯಕ ರೋಹಿತ್ ಶರ್ಮ(15) ಮೊದಲ ವಿಕೆಟ್‌ಗೆ 78 ರನ್‌ಗಳ ಉತ್ತಮ ಮೊತ್ತ ಕಲೆಹಾಕಿದರು. ಇನ್ನಿಂಗ್ಸ್ ಆರಂಭದಿಂದಲೇ ಮಿಂಚಿದ ಕನ್ನಡಿಗ ಕೆ.ಎಲ್.ರಾಹುಲ್, 33 ಬಾಲ್‌ಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಮೂಲಕ 57 ರನ್‌ಗಳ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ ನಿಧಾನಗತಿಯ ಆಟವಾಡಿದ ರೋಹಿತ್(15) ನಿರೀಕ್ಷಿತ ರನ್‌ಗಳಿಸಲಿಲ್ಲ. ನಂತರ ಕಣಕ್ಕಿಳಿದ ವಿರಾಟ್ ಕೊಹ್ಲಿ(19) ಬಿರುಸಿನ ಆಟವಾಡಿ ವಿಕೆಟ್ ಒಪ್ಪಿಸಿದರೆ. ಇವರ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ(2) ಕೂಡ ಪೆವಿಲಿಯನ್ ಸೇರಿಕೊಂಡರು.
ಆದರೆ ಮಧ್ಯಮ ಕ್ರಮಾಂಕದಲ್ಲಿ ಜೊತೆಯಾದ ಸೂರ್ಯಕುಮಾರ್ ಯಾದವ್(50) ಹಾಗೂ ದಿನೇಶ್ ಕಾರ್ತಿಕ್(20) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್, 33 ಬಾಲ್‌ಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಮೂಲಕ 50 ಅರ್ಧಶತಕ ಸಿಡಿಸಿದರು. ಉಳಿದಂತೆ ಅಕ್ಸರ್ ಪಟೇಲ್(6) ಹಾಗೂ ಅಶ್ವಿನ್(6) ರನ್‌ಗಳಿಸಿದರು. ಆಸ್ಟ್ರೇಲಿಯಾ ಪರ ಕೇನ್ ರಿಚರ್ಡ್ಸನ್ 4 ವಿಕೆಟ್ ಪಡೆದು ಮಿಂಚಿದರೆ. ಸ್ಟಾರ್ಕ್, ಮ್ಯಾಕ್ಸ್‌ವೆಲ್ ಹಾಗೂ ಅಗರ್ ತಲಾ 1 ವಿಕೆಟ್ ಪಡೆದುಕೊಂಡರು.