ಕ್ರಿಕೆಟ್ ಲೋಕದ ಮಹಾಸಮರ T20I World Cup ಆರಂಭಕ್ಕೆ ಕೆಲವು ದಿನಗಳಷ್ಟೇ ಬಾಕಿ ಉಳಿದಿದೆ. ಚುಟುಕು ಕ್ರಿಕೆಟ್ ಕಾಳಗದಲ್ಲಿ ವಿಶ್ವದ ಹಲವು ದಿಗ್ಗಜ ಆಟಗಾರರು ತಮ್ಮ ಛಾಪು ಮೂಡಿಸಿದ್ದಾರೆ.
ಬ್ಯಾಟ್ಸಮನ್‌ಗಳ ತಾಕತ್ತು ಹಾಗೂ ಬೌಲರ್‌ಗಳ ಜಾಣ್ಮೆಯ ಆಟಕ್ಕೆ T20I ಕ್ರಿಕೆಟ್ ಸಾಕ್ಷಿಯಾಗಿದೆ. ಇಂತಹ T20I ವಿಶ್ವಕಪ್‌ನ ಈವರೆಗೂ ನಡೆದ 7 ಟೂರ್ನಿಗಳಲ್ಲಿ ಜಗತ್ತಿನ ಹಲವು ತಂಡಗಳ ಸ್ಟಾರ್ ಬ್ಯಾಟ್ಸಮನ್(Star Batsman)ಗಳು ಸರ್ವಶ್ರೇಷ್ಠ ಪ್ರದರ್ಶನದಿಂದ ಮಿಂಚಿದ್ದಾರೆ. 2007ರಲ್ಲಿ ಆರಂಭವಾದ ಮೊದಲ ಟಿ20 ವಿಶ್ವಕಪ್‌ನಿಂದ 2021ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ರನ್(Most Runs)ಗಳಿಸಿದ ಆಟಗಾರರ ಡೀಟೆಲ್ಸ್ ಇಲ್ಲಿದೆ. ಟಾಸ್ 7 ಬ್ಯಾಟ್ಸ್‌ಮನ್‌ಗಳ ಲಿಸ್ಟ್‌ನಲ್ಲಿ ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ, ನಂ.1 ಸ್ಥಾನದಲ್ಲಿದ್ದರೆ. ಆಸ್ಟ್ರೇಲಿಯಾದ ತಂಡದ ಮಾಜಿ ಆಟಗಾರ ಶೇನ್ ವಾಟ್ಸನ್ 7ನೇ ಸ್ಥಾನದಲ್ಲಿದ್ದಾರೆ.
2007: ಕ್ರಿಕೆಟ್ ಲೋಕಕ್ಕೆ ಹೊಸದಾಗಿ ಪರಿಚಯವಾದ T20I World Cup ಟೂರ್ನಿಯ ಚೊಚ್ಚಲ ಆವೃತ್ತಿಯಲ್ಲಿ ಆಸೀಸ್ ದಿಗ್ಗಜ ಬ್ಯಾಟ್ಸ್‌ಮನ್ ಮ್ಯಾಥ್ಯೂ ಹೇಡನ್(265) ರನ್‌ಗಳಿಸಿ ಮಿಂಚಿದ್ದರು.
2009: ತಮ್ಮ ವಿಶಿಷ್ಠ “ದಿಲ್ ಸ್ಕೂಪ್” ಮೂಲಕ ಕ್ರಿಕೆಟ ಫ್ಯಾನ್ಸ್‌ಗಳ ದಿಲ್ ಗೆದ್ದಿದ್ದ ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ 2009ರ T20I World Cup ಟೂರ್ನಿಯಲ್ಲಿ 317 ರನ್‌ಗಳಿಸಿ ಗಮನ ಸೆಳೆದಿದ್ದರು.
2010: ತಾಳ್ಮೆಯ ಆಟದಿಂದ ಮೋಡಿ ಮಾಡಿದ್ದ ಶ್ರೀಲಂಕಾದ ಮಹೆಲಾ ಜಯವರ್ಧನೆ, 2010ರಲ್ಲಿ 302 ರನ್‌ಗಳಿಸಿ ಟೂರ್ನಿಯಲ್ಲಿ ಅತ್ಯಧಿಕ ರನ್‌ಗಳಿಸಿದ ಆಟಗಾರ ಎನಿಸಿದರು.
2012: ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್, ಮಾಜಿ ಕ್ರಿಕೆಟಿಗ ಶೇನ್ ವಾಟ್ಸನ್, 249 ರನ್‌ಗಳಿಸಿದ್ದು ಟೂರ್ನಿಯಲ್ಲಿ ಗರಿಷ್ಠ ರನ್‌ಗಳಿಸಿದ ಬ್ಯಾಟ್ಸ್‌ಮನ್ ಎಂಬ ಹಿರಿಮೆ ಪಡೆದರು.
2014: ಹಿಂದಿನ ನಾಲ್ಕು ಆವೃತ್ತಿಗಳಲ್ಲೂ ದೊಡ್ಡಮಟ್ಟದಲ್ಲಿ ಸದ್ದು ಮಾಡದ ಟೀಂ ಇಂಡಿಯಾದ ʼರನ್ ಮಷಿನ್ʼ 2014ರಲ್ಲಿ ಅಬ್ಬರದ ಬ್ಯಾಟಿಂಗ್ ಮೂಲಕ ಘರ್ಜಿಸಿದ್ದರು. ಕಿಂಗ್ ಕೊಹ್ಲಿ ಟೂರ್ನಿಯಲ್ಲಿ 319 ರನ್‌ಗಳಿಸುವ ಮೂಲಕ ಅತ್ಯಧಿಕ ರನ್‌ಗಳಿಸಿದ ಆಟಗಾರನಾಗಿ ಕಮಾಲ್ ಮಾಡಿದರು. ವಿರಾಟ್ ಕೊಹ್ಲಿ(Virat Kohli) ಅವರು ಗಳಿಸಿರುವ 319 ರನ್‌ಗಳು ಈವರೆಗೆ ನಡೆದಿರುವ 7 ಟಿ20 ವಿಶ್ವಕಪ್ ಟೂರ್ನಿಯ ಗರಿಷ್ಠ ಸ್ಕೂರ್ ಆಗಿದೆ.
2016: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ರನ್‌ಗಳಿಸಿದ ಆಟಗಾರರ ಲಿಸ್ಟ್‌ನಲ್ಲಿ ವಿಶ್ವದ ಬಲಿಷ್ಠ ತಂಡಗಳ ಆಟಗಾರರೇ ಕಾಣಿಸಿಕೊಂಡಿದ್ದರು. ಆದರೆ 2016ರಲ್ಲಿ ಬಾಂಗ್ಲಾದೇಶ ತಮೀಮ್ ಇಕ್ಬಾಲ್, 295 ರನ್‌ಗಳಿಸುವ ಮೂಲಕ ಎಲ್ಲರ ಗಮನ ಸೆಳೆದರು.
2021: ಯುಎಇ ಅಂಗಳದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ಕ್ಯಾಪ್ಟನ್ ಬಾಬರ್ ಆಜಂ(Babar Azam), ಅದ್ಭುತ ಬ್ಯಾಟಿಂಗ್‌ನಿಂದ ಮೋಡಿ ಮಾಡಿದರು. ತಂಡದ ಬ್ಯಾಟಿಂಗ್ ಶಕ್ತಿಯಾಗಿ ಮಿಂಚಿದ ಆಜಂ, 303 ರನ್‌ಗಳಿಸಿ ಹೆಚ್ಚು ರನ್‌ಗಳಿಸಿದ ಆಟಗಾರ ಎನಿಸಿದರು.
ಇದೀಗ 2022ರ ಟಿ20 ವಿಶ್ವಕಪ್ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, 8ನೇ ಆವೃತ್ತಿಯ ಚುಟುಕು ಕ್ರಿಕೆಟ್ ಕದನದಲ್ಲಿ ಯಾರು? ಅತಿ ಹೆಚ್ಚು ರನ್‌ಗಳಿಸುತ್ತಾರೆ ಎಂಬ ಕುತೂಹಲ ಮೂಡಿದೆ.