ಟಿ20 ಕ್ರಿಕೆಟ್ನಲ್ಲಿ(T20I) ಡೆತ್ ಓವರ್ಗೆ ಹೆಚ್ಚು ಬೆಲೆ ಇದೆ. ಡೆತ್ ಓವರ್ಗಳಲ್ಲಿ ಬೀಡು ಬೀಸಿನ ಬ್ಯಾಟಿಂಗ್ ಮಾಡುವ ಆಟಗಾರನ ಜೊತೆ ಡೆತ್ ಓವರ್ ಸ್ಪೆಷಲಿಸ್ಟ್ ಬೌಲರ್ಗಳಿಗೂ ಹೆಚ್ಚು ಡಿಮ್ಯಾಂಡ್ ಇದೆ. ಆದರೆ ಈಗ ಭಾರತದ ಪರ ಅಂತಿಮ ಓವರ್ನಲ್ಲಿ (Last Over) ಗರಿಷ್ಠ ರನ್ಗಳಿಸಿದ ಆಟಗಾರರ ಬಗ್ಗೆ ಚರ್ಚೆಯಾಗುತ್ತಿದೆ. ಸದ್ಯ ರೆಡ್ ಹಾಟ್ ಫಾರ್ಮ್ನಲ್ಲಿರುವ ಸೂರ್ಯಕುಮಾರ್ ಯಾದವ್ (Surya Kumar Yadav) ಫೈನಲ್ ಓವರ್ನಲ್ಲಿ ಗರಿಷ್ಠ ರನ್ ಗಳಿಸಿದ ಭಾರತೀಯ ಕ್ರಿಕೆಟರ್ ಅನ್ನುವ ದಾಖಲೆ ಬರೆದಿದ್ದಾರೆ.
* ಸೂರ್ಯಕುಮಾರ್ ಯಾದವ್- 26 ರನ್ VS ಹಾಂಗ್ ಕಾಂಗ್ ವಿರುದ್ಧ
ಸದ್ಯ ಅದ್ಭುತ ಫಾರ್ಮ್ನಲ್ಲಿರುವ ಸೂರ್ಯಕುಮಾರ್ ಯಾದವ್ ಭಾರತದ ಪರ ಅಂತಿಮ ಓವರ್ನಲ್ಲಿ ಗರಿಷ್ಠ ರನ್ಗಳಿಸಿದ ಕೀರ್ತಿ ಸಂಪಾದಿಸಿದ್ದಾರೆ. ಹಾಂಕಾಂಗ್ ವಿರುದ್ಧ ಸೂರ್ಯ 26 ರನ್ ಸೂರೆಗೈದಿದ್ದರು. ಈ ವೇಳೆ 4 ಸಿಕ್ಸರ್ಗಳು ಸಿಡಿದಿದ್ದರೆ, 1 ಎಸೆತ ಡಾಟ್ ಬಾಲ್ ಆಗಿತ್ತು. 1 ಎಸೆತದಲ್ಲಿ 2 ರನ್ ಬಂದಿತ್ತು.
* ರೋಹಿತ್ ಶರ್ಮಾ (Rohit Sharma) – 19 ರನ್ VS ವೆಸ್ಟ್ ಇಂಡೀಸ್
ಟೀಮ್ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ವೆಸ್ಟ್ಇಂಡೀಸ್ ವಿರುದ್ಧದ ಪಂದ್ಯದಲ್ಲಿ 19 ರನ್ಗಳಿಸಿದ್ದು ಸೂರ್ಯ ಕುಮಾರ್ ಸಾಧನೆಗಿಂತ ಮುನ್ನ ಇದ್ದ ಬೆಸ್ಟ್ ಲಾಸ್ಟ್ ಓವರ್ ಆಗಿತ್ತು.
* ಸೂರ್ಯಕುಮಾರ್ ಯಾದವ್ – 19 ರನ್ VS ವೆಸ್ಟ್ ಇಂಡೀಸ್
ದುಬೈನಲ್ಲಿ ಲಾಸ್ಟ್ ಓವರ್ನಲ್ಲಿ 26 ರನ್ಗಳಿಸುವ ಮುನ್ನ ಸೂರ್ಯ ಕುಮಾರ್ ಯಾದವ್ ಕೊನೆಯ ಓವರ್ನಲ್ಲಿ 19 ರನ್ ಸಿಡಿಸಿದ ದಾಖಲೆಯನ್ನು ಕೂಡ ಹೊಂದಿದ್ದರು. ಈ ಸಾಧನೆಯನ್ನು ವೆಸ್ಟ್ಇಂಡೀಸ್ ವಿರುದ್ಧ ಸೂರ್ಯ ದಾಖಲಿಸಿದ್ದರು.
* ದೀಪಕ್ ಚಹರ್ (Deepak Chahar) – 19 ರನ್ VS ನ್ಯೂಜಿಲೆಂಡ್
ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆಯದಿರುವ ಆಲ್ರೌಂಡರ್ ದೀಪಕ್ ಚಹರ್ ಕೂಡ ಕೊನೆಯ ಓವರ್ನಲ್ಲ 19 ರನ್ ಸಿಡಿಸಿದ ಕೀರ್ತಿ ಹೊಂದಿದ್ದಾರೆ. ಚಹರ್ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು.