ಕ್ರಿಕೆಟ್ನ ಮಹಾಸಮರ T20 ವಿಶ್ವಕಪ್(World Cup) ಟೂರ್ನಿಗೆ ಎಲ್ಲಾ ತಂಡಗಳ(All Teams) ಆಟಗಾರರು ತುದಿಗಾಲಲ್ಲಿ ನಿಂತಿದ್ದಾರೆ. ಒಂದಡೆ ಆಟಗಾರು(Players) ಭರ್ಜರಿ ತಯಾರಿ ಮಾಡಿಕೊಂಡಿದ್ದರೆ, “The Men In Charge” ಎಂಬಂತೆ ಬಲಿಷ್ಠ ತಂಡಗಳ ಕೋಚ್ಗಳು ತಮ್ಮ ತಂಡದ ಯಶಸ್ಸಿಗಾಗಿ ತಮ್ಮದೇ ರಣತಂತ್ರಗಳನ್ನ ರೂಪಿಸಿಕೊಂಡು ತಯಾರಾಗಿದ್ದಾರೆ. ಆಸೀಸ್ ನೆಲದಲ್ಲಿ ನಡೆಯುತ್ತಿರುವ T20I ವಿಶ್ವಕಪ್ ಪಂದ್ಯಾವಳಿಯಲ್ಲಿ ದೊಡ್ಡ ಸಕ್ಸಸ್(Big Success) ನೋಡಲು ಕಾಯುತ್ತಿರುವ ಕೋಚ್ಗಳ ಲಿಸ್ಟ್ ಇಲ್ಲಿದೆ.
1. ರಾಹುಲ್ ದ್ರಾವಿಡ್.
ಟೀಂ ಇಂಡಿಯಾದ ಕೋಚ್ ಆಗಿರುವ ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರಿಗೆ T20 ವಿಶ್ವಕಪ್ ಟೂರ್ನಿ ಹೊಸ ಅಗ್ನಿಪರೀಕ್ಷೆಯಾಗಿದೆ. ಕ್ರಿಕೆಟ್ ಜಗತ್ತಿನ ʼದಿ ವಾಲ್ʼ ಎನಿಸಿರುವ ದ್ರಾವಿಡ್, ಟಿ20 ವಿಶ್ವಕಪ್ನಲ್ಲಿ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಲು ತಮ್ಮದೇ ರಣತಂತ್ರದೊಂದಿಗೆ ಸಜ್ಜಾಗಿದ್ದಾರೆ.
2. ಆಂಡ್ರ್ಯೂ ಮೆಕ್ಡೊನಾಲ್ಡ್.
ಆಸ್ಟ್ರೇಲಿಯಾ ತಂಡದ ಕೋಚ್ ಆಂಡ್ರ್ಯೂ ಮೆಕ್ಡೊನಾಲ್ಡ್, ಚೊಚ್ಚಲ ಗ್ಲೋಬಲ್ ಟೂರ್ನಮೆಂಟ್ನ ನಿರೀಕ್ಷೆಯಲ್ಲಿದ್ದಾರೆ. 2021ರ ಚಾಂಪಿಯನ್ ತಂಡವಾಗಿರುವ ಆಸೀಸ್ ಪಡೆಗೆ ತವರಿನ ಲಾಭವಿದೆ. ಆದರೆ ಆಂಡ್ರ್ಯೂ ಮೆಕ್ಡೊನಾಲ್ಡ್ ಅವರು ಮನೆಯಂಗಳದಲ್ಲಿ ತಮ್ಮ ತಂಡಕ್ಕೆ ಯಾವ ರೀತಿ ಯಶಸ್ಸು ತಂದುಕೊಡುತ್ತಾರೆ ಎಂಬ ದೊಡ್ಡ ಕುತೂಹಲವಿದೆ.
3. ಮ್ಯಾಥ್ಯೂ ಮೋಟ್
ಇಂಗ್ಲೆಂಡ್ ಕೋಚ್ ಮ್ಯಾಥ್ಯೂ ಮೋಟ್ ಅವರು, ಕ್ರಿಕೆಟ್ ಜನಕರಿಗೆ ಚುಟುಕು ಕ್ರಿಕೆಟ್ ಮಹಾಸಮರದಲ್ಲಿ ಸಕ್ಸಸ್ ತಂದುಕೊಡುವ ದೊಡ್ಡ ನಿರೀಕ್ಷೆಯಲ್ಲಿದ್ದಾರೆ. ಆಸೀಸ್ ಮೂಲದ ಇವರಿಗೆ ಮೈಕ್ ಹಸ್ಸಿ ಮತ್ತು ಡೇವಿಡ್ ಸಾಕರ್ ಕೂಡ ಸಾಥ್ ನೀಡಲು ತಯಾರಾಗಿದ್ದಾರೆ.
4. ಮಾರ್ಕ್ ಬೌಚರ್
ಸೌತ್ ಆಫ್ರಿಕಾ ತಂಡದ ಮಾಜಿ ವಿಕೆಟ್ ಕೀಪರ್, ತಂಡದ ಕೋಚ್ ಆಗಿ ಹೊಸ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಆಟಗಾರನಾಗಿ ಹಲವು ವರ್ಷ ತಂಡದ ಯಶಸ್ಸಿಗಾಗಿ ಶ್ರಮಿಸಿದ್ದ ಬೌಚರ್, ಹಲವು ವರ್ಷಗಳಿಂದ ಕನಸಾಗಿಯೇ ಉಳಿದಿರುವ ವಿಶ್ವಕಪ್ ಗೆಲ್ಲುವ ಆಸೆಯನ್ನು ಈಡೇರಿಸಲು ಸಜ್ಜಾಗಿ ತಮ್ಮ ತಂಡದೊಂದಿಗೆ ರೆಡಿಯಾಗಿದ್ದಾರೆ.
5. ಸಕ್ಲೈನ್ ಮುಷ್ತಾಕ್
ಪ್ರಸಕ್ತ ವರ್ಷದಲ್ಲಿ ಟಿ20 ಕ್ರಿಕೆಟ್ನಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿರುವ ಪಾಕಿಸ್ತಾನ, ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟಿದೆ. 2021ರಲ್ಲಿ ಸ್ವಲ್ಪದರಲ್ಲೇ ಕೈತಪ್ಪಿದ್ದ ಅವಕಾಶವನ್ನ ಈ ಬಾರಿ ಮಿಸ್ ಮಾಡಿಕೊಳ್ಳದೆ ಇರಲು ಪಾಕ್ ಆಟಗಾರರು ಸಜ್ಜಾಗಿದ್ದಾರೆ. ಇವರೊಂದಿಗೆ ತಂಡದ ಕೋಚ್ ಸಕ್ಲೈನ್ ಮುಷ್ತಾಕ್ ಕೂಡ ತಂಡವನ್ನ ಬಲಿಷ್ಠ ರೀತಿಯಲ್ಲಿ ಸಜ್ಜುಗೊಳಿಸಿದ್ದಾರೆ. ಮಾಜಿ ಸ್ಪಿನ್ ಮಾಂತ್ರಿಕನ ಈ ಪ್ರಯತ್ನಕ್ಕೆ ತಂಡದ ಕೋಚಿಂಗ್ ವಿಭಾಗದಲ್ಲಿರುವ ಮ್ಯಾಥ್ಯೂ ಹೇಡನ್, ಯೂಸುಫ್ ಯೊಹಾನ ಹಾಗೂ ಶಾನ್ ಟೈಟ್ ಕೈಜೋಡಿಸಲಿದ್ದಾರೆ.
ಇವರುಗಳ ಜೊತೆಗೆ ನ್ಯೂಜಿ಼ಲೆಂಡ್ ತಂಡದ ಕೋಚ್, ಗ್ಯಾರಿ ಸ್ಟಡ್ ಕೂಡ ಕಿವೀಸ್ ಪಡೆಗೆ ಸಕ್ಸಸ್ ತಂದುಕೊಡುವ ಲೆಕ್ಕಾಚಾರದಲ್ಲಿದ್ದರೆ. ಶ್ರೀಲಂಕಾ ತಂಡದ ಕೋಚ್, ಕ್ರಿಸ್ ಸಿಲ್ವರ್ವುಡ್ ಕೂಡ ಮಾಜಿ ಕ್ರಿಕೆಟಿಗರಾದ ಮಹೆಲಾ ಜಯವರ್ಧನೆ ಹಾಗೂ ಲಸಿತ್ ಮಲಿಂಗಾ ಅವರ ಜೊತೆಗೆ ತಯಾರಾಗಿದ್ದಾರೆ. ಇವರೆಲ್ಲರ ನಡುವೆ ಎರಡು ಬಾರಿಯ ಟಿ20 ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡದ ಕೋಚ್ ಪಿಲ್ ಸಿಮೋನ್ಸ್, ವಿಂಡೀಸ್ ಪಡೆಗೆ 3ನೇ T20 ವಿಶ್ವಕಪ್ ಪ್ರಶಸ್ತಿ ಕೊಡಿಸುವ ತವಕದಲ್ಲಿದ್ದಾರೆ.