Pro Kabaddi: ಕೊನೆಯ ದಾಳಿಯಲ್ಲಿ ಮಿಂಚಿದ ಪುಣೇರಿ
ರೋಚಕತೆ ಹುಟ್ಟಿಸಿದ್ದ ಪ್ರೊ ಕಬಡ್ಡಿ ಟೂರ್ನಿಯ 27ನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ ಕೊನೆಯ ದಾಳಿಯಲ್ಲಿ ಅಮೋಘ ಪ್ರದರ್ಶನ ನೀಡಿ ಅಂಕಗಳಿಸುವ ಮೂಲಕ ಡ್ರಾ ಆಗಬೇಕಿದ್ದ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದೆ.
ಆರಂಭದಿಂದಲೂ ಭರ್ಜರಿ ಪ್ರದರ್ಶನ ನೀಡಿದ ಪುಣೇರಿ 11-9 ರಿಂದ ತೆಲುಗು ಟೈಟಾನ್ಸ್ ವಿರುದ್ಧ ಮುನ್ನಡೆ ಸಾಧಿಸಿತು. ದಾಳಿಯಲ್ಲಿ ಉಭಯ ತಂಡಗಳು ಸಮಬಲದ ಪ್ರದರ್ಶನ ನೀಡಿದವು. ಆದರೆ ಟ್ಯಾಕಲ್ ನಲ್ಲಿ ಪುಣೇರಿ ಸೊಗಸಾದ ಪ್ರದರ್ಶನ ನೀಡಿತು. ಎರಡನೇ ಅವಧಿಯಲ್ಲಿ ತೆಲುಗು ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿ ಗೆಲುವಿನ ಕನಸು ಕಾಣುತ್ತಿತ್ತು. ಆದರೆ ಪುಣೇರಿ, ಸ್ಥಿರ ಪ್ರದರ್ಶನ ನೀಡಿ ಪಂದ್ಯದಲ್ಲಿ ಜಯ ಸಾಧಿಸಿತು. ಈ ಅವಧಿಯಲ್ಲಿ ಪುಣೇರಿ ದಾಳಿಯಲ್ಲಿ 4, ಟ್ಯಾಕಲ್ ನಲ್ಲಿ 4 ಹಾಗೂ ಆಲೌಟ್ ಮೂಲಕ ಎರಡು ಅಂಕ ಕಲೆ ಹಾಕಿತು.
ಪುಣೇರಿ ಪರ ಮೋಹಿತ್ ಗೊಯತ್ ಒಟ್ಟು 18 ಬಾರಿ ಎದುರಾಳಿ ಕೋರ್ಟ್ ಗೆ ಎಂಟ್ರಿ ನೀಡಿ, 8 ಟಚ್ ಪಾಯಿಂಟ್ ಗಳಿಸಿದರೆ, 2 ಟ್ಯಾಕಲ್ ಪಾಯಿಂಟ್ ಗಳಿಸಿದರು. ಉಳಿದಂತೆ ಅಸ್ಲಂ ಇನಾಂದಾರ್ 5, ಆಲ್ ರೌಂಡರ್ ಮೊಹಮ್ಮದ್ 4 ಅಂಕ ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು.
ಪರಾಜಿತ ತಂಡದ ಪರ ಸಿದ್ಧಾರ್ಥ್ ದೇಸಾಯಿ 8, ವಿನಯ್ ದಾಳಿಯಲ್ಲಿ 6, ಮನು ಗೋಯತ್ 3 ಅಂಕ ಕಲೆ ಹಾಕಿ ಮಿಂಚಿದರು.
ಪುಣೇರಿ ಆಡಿದ 5 ಪಂದ್ಯಗಳಲ್ಲಿ 2 ಜಯ, 2 ಸೋಲು, 1 ಡ್ರಾ ಸಾಧಿಸಿದ್ದು 14 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ತೆಲುಗು ಟೈಟಾನ್ಸ್ ಇಷ್ಟೇ ಪಂದ್ಯಗಳಲ್ಲಿ 7 ಅಂಕ ಸೇರಿಸಿದ್ದು 11ನೇ ಸ್ಥಾನದಲ್ಲಿದೆ.
Pro Kabaddi, Puneri Paltan Beat Telugu Titans