T20I CWC 2022 : ಐಸಿಸಿ T20 ವಿಶ್ವಕಪ್ 2022ರ ಅದ್ದೂರಿ ಆರಂಭಕ್ಕೆ ವೇದಿಕೆ ಸಿದ್ಧವಾಗಿದ್ದು, ಇಂದಿನಿಂದ ಆರಂಭವಾಗಲಿರುವ ಸೂಪರ್-12(Super-12) ಹಂತದ ಗ್ರೂಪ್-1ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತನ್ನ ಬದ್ಧ ಎದುರಾಳಿ ನ್ಯೂಜಿ಼ಲೆಂಡ್ ತಂಡವನ್ನ ಎದುರಿಸಲಿದೆ.
ಎರಡು ತಂಡಗಳ ಜಿದ್ದಾಜಿದ್ದಿನ ಹಣಾಹಣಿಗೆ ಸಿಡ್ನಿ ಕ್ರಿಕೆಟ್ ಮೈದಾನ(Sydney Cricket Ground) ಸಾಕ್ಷಿಯಾಗಲಿದೆ. 2021ರ ಟಿ20 ವಿಶ್ವಕಪ್ ಫೈನಲ್ನಲ್ಲಿ ಆಸೀಸ್ ವಿರುದ್ಧ ಸೋಲಿನ ಕಹಿ ಅನುಭವಿಸಿದ್ದ ಕಿವೀಸ್, ಸೇಡು ತೀರಿಸಿಕೊಳ್ಳುವ ನಿರೀಕ್ಷೆ ಹೊಂದಿದ್ದರೆ. ತವರಿನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯ ಲಾಭ ಪಡೆಯುವ ಲೆಕ್ಕಾಚಾರದೊಂದಿಗೆ ಆಸೀಸ್ ಕಣಕ್ಕಿಳಿಯಲು ತಯಾರಿ ಮಾಡಿಕೊಂಡಿದೆ.
ಕಳೆದ ವರ್ಷದ ಟಿ20 ವಿಶ್ವಕಪ್ ಪ್ರಶಸ್ತಿ ಮುಡಿಗೇರಿಸಿಕೊಂಡ ಆಸೀಸ್ ಈ ಬಾರಿ ತನ್ನ ತಂಡದಲ್ಲಿ ಕೇವಲ ಒಂದು ಬದಲಾವಣೆ ಮಾಡಿಕೊಂಡಿದೆ. ತವರಿನ ಮೈದಾನದ(Home Ground) ಹಾಗೂ ಅಭಿಮಾನಿಗಳ ಬೆಂಬಲದೊಂದಿಗೆ T20 ವಿಶ್ವಕಪ್ ಅಭಿಯಾನಕ್ಕೆ ಸಜ್ಜಾಗಿರುವ ಆಸೀಸ್, ಈ ಬಾರಿಯೂ ಟಿ20 ವಿಶ್ವಕಪ್ ಗೆದ್ದು, ICC ಪುರುಷರ T20 ವಿಶ್ವಕಪ್ ಉಳಿಸಿಕೊಳ್ಳುವ ಮೊದಲ ತಂಡವಾಗಿ ಹೊರಹೊಮ್ಮಲು ಕಾಯುತ್ತಿದೆ. ಆದರೆ 2021ರ ಫೈನಲ್ನಲ್ಲಿ ಅನುಭವಿಸಿದ ಸೋಲಿನ ಆಘಾತವನ್ನ ಮರೆಯದ ಕಿವೀಸ್, ಕಾಂಗರೂ ಪಡೆಗೆ ಅವರದ್ದೇ ನೆಲದಲ್ಲಿ ಸೋಲಿಸಿ ಪ್ರತೀಕಾರ ತೀರಿಸಿಕೊಳ್ಳಲು ಎಲ್ಲಾ ರಣತಂತ್ರಗಳನ್ನ ರೂಪಿಸಿಕೊಂಡಿದೆ.
ಮಳೆ ಆತಂಕ:
ಟಿ20 ವಿಶ್ವಕಪ್ ಟೂರ್ನಿಯ ಸೂಪರ್-12 ಪಂದ್ಯಗಳ ಆರಂಭಕ್ಕೆ ಕೋಟ್ಯಾಂತರ ಅಭಿಮಾನಿಗಳು ಕಾದುಕುಳಿತಿದ್ದಾರೆ. ಆದರೆ ಆಸ್ಟ್ರೇಲಿಯಾ ಹಾಗೂ ನ್ಯೂಜಿ಼ಲೆಂಡ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಆತಂಕ ಎದುರಾಗಿದೆ. ಪ್ರತಿಕೋಲ ಹವಾಮಾನದ ಕಾರಣದಿಂದ ಸಿಡ್ನಿಯಲ್ಲಿ ಶೇ.90 ಮಳೆಯಾಗುವ ಸಾಧ್ಯತೆ ಇದೆ. ಕಳೆದ ಕೆಲವು ದಿನಗಳ ಹಿಂದೆ ಬ್ರಿಸ್ಬೇನ್ನಲ್ಲಿ ನಡೆಯಬೇಕಿದ್ದ ನ್ಯೂಜಿಲೆಂಡ್ ಹಾಗೂ ಭಾರತ ನಡುವಿನ ಅಭ್ಯಾಸ ಪಂದ್ಯ ಕೂಡ ಮಳೆಯಿಂದಾಗಿ ರದ್ದಾಗಿತ್ತು.
ಸಂಭಾವ್ಯ ತಂಡಗಳು:
ಆಸ್ಟ್ರೇಲಿಯಾ: ಆರನ್ ಫಿಂಚ್(ನಾಯಕ), ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್ವೆಲ್, ಮಾರ್ಕಸ್ ಸ್ಟಾಯ್ನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಆಡಂ ಜ್ಹಂಪ, ಜೋಶ್ ಹೇಜ಼ಲ್ವುಡ್.
ನ್ಯೂಜಿ಼ಲೆಂಡ್: ಡೆವೋನ್ ಕಾನ್ವೆ, ಮಾರ್ಟಿನ್ ಗುಪ್ಟಿಲ್, ಕೇನ್ ವಿಲಿಯಂಸನ್(ನಾಯಕ), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರಾಸ್ವೆಲ್, ಜಿಮ್ಮಿ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಟ್ರೆಂಟ್ ಬೋಲ್ಟ್, ಲೂಕಿ ಫೆರ್ಗುಸನ್, ಇಶ್ ಸೋಧಿ.