T20 ವಿಶ್ವಕಪ್ (T20 Worldcup)ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಆಸ್ಟ್ರೇಲಿಯಾ (Australia) ನೆಲದಲ್ಲಿ ಗೆಲ್ಲುವವರು ಯಾರು ಅನ್ನುವ ಬಗ್ಗೆ ಚರ್ಚೆ ಜೋರಾಗಿದೆ. ಈ ಮಧ್ಯೆ ಹಳೆ ಚಾಂಪಿಯನ್ನರ ಬಗ್ಗೆ ಮಾತು ಶುರುವಾಗಿದೆ. ಈ ಬಾರಿ ಡಾರ್ಕ್ ಹಾರ್ಸ್‌ಗಳ ಬಗ್ಗೆ ಟಾಪ್ ಟೀಮ್‌ಗಳು ಕೂಡ ಕಣ್ಣಿಟ್ಟಿವೆ. 8 ನೇ ಆವೃತ್ತಿಯಲ್ಲಿ ಕಪ್ ಗೆಲ್ಲುವ ಕನಸು ಎಲ್ಲಾ ತಂಡಗಳಿಗಿವೆ.
ಭಾರತ (India) ಚುಟುಕು ಮಹಾಸಮರದ ಚೊಚ್ಚಲ ಚಾಂಪಿಯನ್. ಕಳೆದ ಬಾರಿ ಕಪ್ ಗೆದ್ದಿದ್ದು ಆಸ್ಟ್ರೇಲಿಯಾ. ಆದರೆ ವೆಸ್ಟ್‌ಇಂಡೀಸ್ (Westindies) ಟಿ20 ವಿಶ್ವಕಪ್‌ನಲ್ಲಿ ಎರಡು ಬಾರಿ ಚಾಂಪಿಯನ್ ಆದ ಏಕೈಕ ತಂಡ. ಒಟ್ಟಿನಲ್ಲಿ ಚಾಂಪಿಯನ್ನರ ಚಾಂಪಿಯನ್ಸ್‌ಗಳು ಈ ಬಾರಿ ಜಿದ್ದಾಜಿದ್ದಿಗೆ (History of T20 Worldcup) ಸಜ್ಜಾಗಿದ್ದಾರೆ.