ಟೀಮ್ ಇಂಡಿಯಾ (Team India) ಮಿಷನ್ ಮೆಲ್ಬರ್ನ್ಗಾಗಿ (Mission Melbourne) ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಆಸ್ಟ್ರೇಲಿಯಾ (Australia) ನೆಲಕ್ಕೆ ಎಲ್ಲಾ ತಂಡಗಳಿಗೂ ಮೊದಲೇ ಕಾಲಿಟ್ಟಿದೆ. ಸ್ಥಳೀಯ ತಂಡಗಳ ಜೊತೆ ಅಭ್ಯಾಸ ಪಂದ್ಯಗಳನ್ನು ಆಡಿ ವಾತಾವರಣಕ್ಕೆ ಹೊಂದಿಕೊಳ್ಳುವ ಪ್ಲಾನ್ ಮಾಡಿದೆ. ವಿಶ್ವಕಪ್ನಲ್ಲಿ (T20 Worldcup ) ಭಾರತ (India)ಕೆಲವು ಪ್ರಯೋಗಗಳನ್ನು (Experiment) ಮಾಡುವುದು ಖಚಿತ ಅನ್ನುವ ಮಾಹಿತಿ ಲಭ್ಯವಾಗಿದೆ.
ರೋಹಿತ್ (Rohit Sharma) ಬಳಗಕ್ಕೆ ದೊಡ್ಡ ಸಮಸ್ಯೆ ಆಗಿರುವುದು ಎಡಗೈ ಬ್ಯಾಟ್ಸ್ಮನ್ಗಳು (Left handed Batsman). ತಂಡದಲ್ಲಿ ಎಡಗೈ ಬ್ಯಾಟ್ಸ್ಮನ್ಗಳಿರುವುದು ಇಬ್ಬರೇ. ಒಬ್ಬರು ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ (Rishab Pant) ಮತ್ತು ಆಲ್ರೌಂಡರ್ ಅಕ್ಸರ್ ಪಟೇಲ್ (Axar Patel). ಲೆಫ್ಟ್-ರೈಟ್ ಕಾಂಬಿನೇಷನ್ (Left right combination) ಸಮಸ್ಯೆ ಟೀಮ್ ಇಂಡಿಯಾವನ್ನು ಕಾಡುತ್ತಿದೆ. ಹೀಗಾಗಿ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಹೊಸ ಓಪನರ್ ಕಣಕ್ಕಿಳಿಸಲು ಪ್ಲಾನ್ ಮಾಡಿದೆ. KL ರಾಹುಲ್ರನ್ನು ಫಿನಿಷರ್ ಸ್ಥಾನದಲ್ಲಿ ಆಡಿಸಿ ರಿಷಬ್ ಪಂತ್ರನ್ನು ಆರಂಭಿಕನಾಗಿ ಕಣಕ್ಕಿಳಿಸಿದರೆ ಲೆಫ್ಟ್-ರೈಟ್ ಕಾಂಬಿನೇಷನ್ ಸಿಗಲಿದೆ ಅನ್ನುವುದು ಮ್ಯಾನೇಜ್ಮೆಂಟ್ ಲೆಕ್ಕಾಚಾರ.
ಈಗಾಗಲೇ ಈ ಪ್ರಯೋಗವನ್ನು ಅಭ್ಯಾಸ ಪಂದ್ಯದಲ್ಲಿ ಮಾಡಲಾಗಿದೆ. ವೆಸ್ಟರ್ನ್ ಆಸ್ಟ್ರೇಲಿಯಾ ತಂಡದ ವಿರುದ್ಧದ ಪ್ರಾಕ್ಟೀಸ್ ಮ್ಯಾಚ್ನಲ್ಲಿ ರಾಹುಲ್ (KL Rahul) ಹಾಗೂ ವಿರಾಟ್ಗೆ (Virat Kohli) ವಿರಾಮ ನೀಡಲಾಗಿತ್ತು. ರೋಹಿತ್ ಜೊತೆ ಪಂತ್ ಇನ್ನಿಂಗ್ಸ್ ಆರಂಭಿಸಿದ್ದರು. ಈ ಪ್ರಯೋಗವೇ ಈಗ ಚರ್ಚೆಗೆ ಕಾರಣವಾಗಿದೆ.
ಆಸ್ಟ್ರೇಲಿಯನ್ ಪಿಚ್ಗಳಲ್ಲಿ ಪಂತ್ ಉತ್ತಮ ದಾಖಲೆ ಕೂಡ ಹೊಂದಿದ್ದಾರೆ. ಅಷ್ಟೇ ಅಲ್ಲ ಬೌನ್ಸಿ ಪಿಚ್ಗಳಲ್ಲಿ ಪಂತ್ ಅಕ್ರಮಣಕಾರಿ ಬ್ಯಾಟಿಂಗ್ ಭಾರತವನ್ನು ಸಾಕಷ್ಟು ಬಾರಿ ಅಪಾಯದಿಂದ ಕಾಪಾಡಿದೆ. ಹೀಗಾಗಿ ಮೆಲ್ಬರ್ನ್, ಪರ್ತ್ ಮತ್ತು ಸಿಡ್ನಿಯಂತಹ ಪಿಚ್ಗಳಲ್ಲಿ ಪಂತ್ ಇನ್ನಿಂಗ್ಸ್ ಆರಂಭಿಸಿದರೂ ಅಚ್ಚರಿ ಇಲ್ಲ. ಮತ್ತೊಂದೆಡೆ ಕೆ.ಎಲ್ ರಾಹುಲ್ ಫಿನಿಷರ್ ಸ್ಥಾನಕ್ಕೆ ಹೋಗುವುದರಿಂದ ಬ್ಯಾಟಿಂಗ್ ಬಲವೂ ಹೆಚ್ಚುತ್ತದೆ. ಇದೆಲ್ಲದರ ಜೊತೆಗೆ ವಿರಾಟ್ ಕೊಹ್ಲಿ ಕೂಡ ಇನ್ನಿಂಗ್ಸ್ ಆರಂಭಿಸಬಲ್ಲರು.
ಟೀಮ್ ಇಂಡಿಯಾ ಈಗಾಗಲೇ ಸಾಕಷ್ಟು ಪ್ರಯೋಗಗಳನ್ನು ಮಾಡಿದೆ. ಆದರೆ ವಿಶ್ವಕಪ್ನಂತಹ ದೊಡ್ಡ ಟೂರ್ನಿಯಲ್ಲಿ ಒಂದು ತಪ್ಪು ಕೂಡ ದೊಡ್ಡ ಸಂಕಷ್ಟ ತರಬಹುದು ಅನ್ನುವುದನ್ನು ಕೋಚ್ ಮತ್ತು ನಾಯಕ ಅರಿತುಕೊಳ್ಳುವುದು ಉತ್ತಮ.