ಟಿ20 ವಿಶ್ವಕಪ್ (T20 Worldcup) ಆರಂಭವಾಗಲು ಇನ್ನೊಂದೇ ದಿನ ಉಳಿದಿದೆ. ನಾಳೆಯಿಂದ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗಲಿವೆ. ಮುಂದಿನ ವಾರ ಮೈನ್ ಮ್ಯಾಚ್‌ಗಳು ಶುರುವಾಗಲಿವೆ. ಆಸ್ಟ್ರೇಲಿಯಾದ ಪಿಚ್‌ಗಳಲ್ಲಿ (Australia) ಬೌಲರ್‌ಗಳು ನರ್ತನ ಮಾಡ್ತಾರಾ ಅಥವಾ ಬ್ಯಾಟ್ಸ್‌ಮನ್‌ಗಳು ಅಬ್ಬರಿಸುತ್ತಾರಾ ಅನ್ನು ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಟಿ20 ಅಲ್ಟಿಮೇಟ್ ಚಾಂಪಿಯನ್‌ಗಳ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಡಾರ್ಕ್‌ಹಾರ್ಸ್‌ಗಳು, ಫೆವರೀಟ್‌ಗಳ ಬಗ್ಗೆ ಕಣ್ಣಿದೆ.
ಈ ಮಧ್ಯೆ 7 ಆವೃತ್ತಿಯ ಟಿ20 ವಿಶ್ವಕಪ್‌ಗಳಲ್ಲಿ ಗರಿಷ್ಠ ರನ್ ಹೊಡೆದವರ ಬಗ್ಗೆಯೂ ಮಾತಿದೆ. ಶ್ರೀಲಂಕಾದ (Srilanka) ಮಿಸ್ಟರ್ ಡಿಪೆಂಡಬಲ್ ಮಹೇಲಾ ಜಯವರ್ಧನೆ (Mahela Jayawardhane) ಚುಟುಕು ಮಹಾಸಮರದಲ್ಲಿ ನಾಲ್ಕಂಕಿ ಗಡಿ ದಾಟಿದ ಏಕೈಕ ಬ್ಯಾಟ್ಸ್‌ಮನ್ (Highest Scorer in T20 Worldcup). ಆದರೆ ಈ ವಿಶ್ವಕಪ್‌ನಲ್ಲಿ ಜಯವರ್ಧನೆ ದಾಖಲೆ ಪತನವಾಗುವುದು ಖಚಿತ. ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ನಡುವೆ ಈ ಫೈಟ್ ನಡೆಯುತ್ತದೆ.

ಕ್ರಿಸ್‌ಗೇಲ್- 965-33 – ಪಂದ್ಯ
ತಿಲಕರತ್ನೆ ದಿಲ್ಶಾನ್- 897-35 – ಪಂದ್ಯ


ಡೇವಿಡ್ ವಾರ್ನರ್- 762-30 – ಪಂದ್ಯ
ಎಬಿಡಿ ವಿಲಿಯರ್ಸ್- 717-30 – ಪಂದ್ಯ
ಶಕೀಬ್ ಅಲ್ ಹಸನ್- 698-31- ಪಂದ್ಯ
ಕುಮಾರ ಸಂಗಕ್ಕಾರ- 661-31 – ಪಂದ್ಯ
ಶೋಯಬ್ ಮಲಿಕ್- 646- 34 – ಪಂದ್ಯ