ಟಿ20 ವಿಶ್ವಕಪ್ ಆರಂಭವಾಗುತ್ತಿದ್ದಂತೆ ರೋಹಿತ್ ನೇತೃಥ್ವದ ಟೀಮ್ ಇಂಡಿಯಾ ಅಭ್ಯಾಸ ಪಂದ್ಯಗಳನ್ನಾಡಲು ಬ್ರಿಸ್ಬೇನ್ ಗೆ ಬಂದಿಳಿದಿದೆ.
ಬ್ರಿಸ್ಬೇನ್ ಗೆ ಬಂದಿಳಿಯುತ್ತಿದ್ದಂತೆ ಟೀಮ್ ಇಂಡಿಯಾ ಆಗಾರರು ಅಭಿಮಾನಿಗಳಿಗೆ ಆಟೋಗ್ರಾಫ್ ಕೊಟ್ಟು ಸಂತಸಪಟ್ಟರು.
ಇಂದು ಭಾನುವಾರ ಗಬ್ಬಾದಲ್ಲಿ ಮೊದಲ ಪ್ರಾಕ್ಟೀಸ್ ಸೆಷನ್ ಹಮ್ಮಿಕೊಂಡಿದೆ. ವೇಗಿ ಮೊಹ್ಮದ್ ಶಮಿ ಈಗಾಗಲೇ ತಂಡವನ್ನು ಸೇರಿಕೊಂಡಿದ್ದಾರೆ. ಮೊಹ್ಮದ್ ಶಮಿ ಹಾಗೂ ಶಾರ್ದೂಲ್ ಠಾಕೂರ್ ಶನಿವಾರ ತಂಡವನ್ನು ಸೇರಿದರು.
ನಾನು ಶಮಿಯನ್ನು ನೋಡಿಲ್ಲ ಆದರೆ ತಂಡ ಸೇರಿಕೊಂಡಿದ್ದಾರೆ ಎನ್ನುವುದನ್ನು ಕೇಳಿದ್ದೇನೆ. ಭಾನುವಾರ ಅಭ್ಯಾಸವಿದ್ದು ಶಮಿಯನ್ನು ಎದುರು ನೋಡುತ್ತಿದ್ದೇನೆ ಎಂದು ನಾಯಕ ರೋಹಿತ್ ಶರ್ಮಾ ಹೇಳಿದರು.
ಶಮಿ ಕಳೆದ ವರ್ಷ ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್ ನಂತರ ಟಿ20 ಆವೃತ್ತಿಯಲ್ಲಿ ಆಡಿರಲಿಲ್ಲ. ಆಸ್ಟ್ರೇಲಿಯಾದಲ್ಲಿ ಒಳ್ಳೆಯ ಪ್ರದರ್ಶನ ನೀಡಿದ್ದಾರೆ ಎನ್ನುವ ಕಾರಣಕ್ಕೆ ಶಮಿ ಬುಮ್ರಾ ಜಾಗಕ್ಕೆ ಆಯ್ಕೆಯಾಗಿದ್ದಾರೆ.
ಅ.17 ಹಾಗೂ ಅ.19ರಂದು ಟೀಮ್ ಇಂಡಿಯಾ ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಅಭ್ಯಾಸ ಪಂದ್ಯಗಳನ್ನು ಆಡಲಿದೆ.