ಕ್ರಿಕೆಟ್ ಶಿಶು ನಮಿಬಿಯಾ ಟಿ20 ವಿಶ್ವಕಪ್ನ ಉದ್ಘಾಟನಾ ಪಂದ್ಯದಲ್ಲಿ ಏಷ್ಯಾ ಚಾಂಪಿಯನ್ ಶ್ರೀಲಂಕಾ ವಿರುದ್ಧ 55 ರನ್ ಗಳ ಭರ್ಜರಿ ಗೆಲುವು ದಾಖಲಿಸಿ ಶುಭಾರಂಭ ಮಾಡಿದೆ.
ಗೀಲಾಂಗ್ ನಲ್ಲಿ ನಡೆದ ಮೊದಲ ಪಂದ್ಯದಲ್ಲಿಟಾಸ್ ಗೆದ್ದ ಶ್ರೀಲಂಕಾ ತಂಡ ಫಿಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ನಮಿಬಿಯಾ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 163 ರನ್ ಕಲೆ ಹಾಕಿತು.ಶ್ರೀಲಂಕಾ 19 ಓವರ್ಗಳಲ್ಲಿ 108 ರನ್ ಗಳಿಗೆ ಸರ್ವಪತನ ಕಂಡಿತು.
164 ರನ್ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡ ಪಾಥುಮ್ ನಿಸ್ಸಾಂಕಾ 9, ಕುಶಾಲ್ ಮೆಂಡೀಸ್ 6, ಧನಂಜಯ ಡಿಸಿಲ್ವಾ 12, ಧನುಷ್ಕಾ ಗುಣತಿಲಕ 0, ಭಾನುಕಾ ರಾಜಪಕ್ಸ 20, ನಾಯಕ ದಸಾನು ಶನಕಾ 29 ರನ್ ಗಳಿಸಿದರು.ವನಿಂದು ಹಸರಂಗ 4,ದುಶ್ಮಂತಾ ಚಾಮೀರಾ ಅಜೇಯ 8 ರನ್ ಗಳಿಸಿದರು.
ನಮಿಬಿಯಾ ಪರ ಡೇವಿಡ್ ವೈಸ್ 16ಕ್ಕೆ 2, ಬೆರ್ನಾರ್ಡ್ 18ಕ್ಕೆ 2, ಬೆನ್ ಶಿಕೊಂಗೊ 22ಕ್ಕೆ 2,ಜಾನ್ ಫ್ರೈಲಿಂಕ್ 26ಕ್ಕೆ 2 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ನಮಿಬಿಯಾ ಪರ ಮೈಕಲ್ ವಾನ್ 3, ಡಿವಾನ್ ಲಾ ಕಾಕ್ 9, ಜಾನ ನಿಕೊಲ್ 20, ಸ್ಟೀಫಾನ್ ಬಾರ್ಡ್ 26, ಎರಸ್ಮಾಸ್ 20, ಜಾನ್ ಫ್ರೈಲಿಂಕ್ 44 ರನ್ ಗಳಿಸಿದರು. ಜೆಜೆ ಸ್ಮಿತ್ ಅಜೇಯ 31 ರನ್ ಗಳಿಸಿದರು.
ಲಂಕಾ ಪರ ಪ್ರಮೋದ್ ಮಧುಸೂದನ್ 37ಕ್ಕೆ 2 ವಿಕೆಟ್ ಪಡೆದರು. ಮಹೇಶ್ ತಿಕ್ಷ್ಣ,ದುಶ್ಮಂತಾ ಚಾಮೀರಾ,ಚಾಮಿಕಾ ಕರುಣರತ್ನೆ ಹಾಗೂ ವನಿಂದು ಹಸರಂಗ ತಲಾ 1 ವಿಕೆಟ್ ಪಡೆದರು.