ಆಸ್ಟ್ರೇಲಿಯಾದಲ್ಲಿ (Australia) ನಡೆಯಲಿರುವ ಟಿ20 ವಿಶ್ವಕಪ್‌ಗೆ (T20 World Cup) ದಕ್ಷಿಣ ಆಫ್ರಿಕಾ (South Africa) ತಂಡವನ್ನು ಪ್ರಕಟಿಸಲಾಗಿದೆ. ಆಸ್ಟ್ರೇಲಿಯಾ ಮೊದಲಿಗೆ ತಂಡವನ್ನು ಪ್ರಕಟಿಸಿದರೆ ಆ ಬಳಿಕ ಇಂಗ್ಲೆಂಡ್ (England) ತನ್ನ ತಂಡವನ್ನು ಅಂತಿಮಗೊಳಿಸಿತ್ತು. ಈಗ ದಕ್ಷಿಣ ಆಫ್ರಿಕಾ ತಂಡದ ಡಿಟೇಲ್ಸ್ ಹೊರ ಬಿದ್ದಿದೆ.
15 ಸದಸ್ಯರ ತಂಡವನ್ನು ಪ್ರಕಟಿಸಿರುವ ಕ್ರಿಕೆಟ್ ಸೌತ್ ಆಫ್ರಿಕಾ ತೆಂಬಾ ಬವುಮಾರನ್ನು ನಾಯಕನನ್ನಾಗಿ ಮಾಡಿದೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟಾನ್ ಡಿ ಕಾಕ್, ಏಡಿಯನ್ ಮಾರ್ಕ್ ರಾಂ, ಅನುಭವಿ ಡೇವಿಡ್ ಮಿಲ್ಲರ್ ತಂಡದ ಬ್ಯಾಟಿಂಗ್ ಬಲವಾಗಿದ್ದಾರೆ. ಲುಂಗಿ ಎನ್‌ಗಿಡಿ, ಅನ್ರಿಚ್ ನೋರ್ಟ್ಜೆ, ವೇಯ್ನ್ ಪಾರ್ನೆಲ್ ಮತ್ತು ಡ್ವೈನ್ ಪ್ರಿಟೋರಿಯಸ್ ಫಾಸ್ಟ್ ಬೌಲರ್‌ಗಳಾಗಿದ್ದಾರೆ. ಕೇಶವ್ ಮಹಾರಾಜ್ ಮತ್ತು ತಬ್ರೈಜ್ ಶಂಸಿ ಸ್ಪೆಷಲಿಸ್ಟ್ ಸ್ಪಿನ್ನರ್‌ಗಳಾಗಿದ್ದಾರೆ.
ಅಕ್ಟೋಬರ್ 16 ರಿಂದ ನವೆಂಬರ್ 13 ರವರೆಗೆ ಆಸ್ಟ್ರೇಲಿಯಾದಲ್ಲಿ ವಿಶ್ವಕಪ್ ಟೂರ್ನಿ ನಡೆಯಲಿದೆ. ಅನುಭವಿ ಮತ್ತು ಯುವ ಆಟಗಾರರ ಶಕ್ತಿಯನ್ನೇ ದಕ್ಷಿಣ ಆಫ್ರಿಕಾ ತಂಡ ಹೆಚ್ಚು ನಂಬಿಕೊಂಡಿದೆ. ಉತ್ತಮ ಫಾರ್ಮ್‌ನಲ್ಲಿರುವ ದಕ್ಷಿಣ ಆಫ್ರಿಕಾ ತಂಡದ ಮೇಲೆ ಹೆಚ್ಚು ವಿಶ್ವಾಸವಿದೆ.
ದಕ್ಷಿಣ ಆಫ್ರಿಕಾ ತಂಡ:
ಟೆಂಬಾ ಬವುಮಾ(ನಾಯಕ), ಕ್ವಿಂಟನ್ ಡಿ ಕಾಕ್, ರಿಜಾ ಹೆನ್ರಿಕ್ಸ್, ಕೇಶವ್ ಮಹಾರಾಜ್, ಏಡಿಯನ್ ಮಾರ್ಕ್‌ರಾಂ , ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಅನ್ರಿಚ್ ನಾರ್ಟ್ಜೆ, ವೇಯ್ನ್ ಪಾರ್ನೆಲ್, ಡ್ವೈಯ್ನ್ ಪ್ರಿಟೋರಿಯಸ್, ರಿಲೆ ರೋಸೋ, ತಬ್ರೈಜ್ ಶಮ್ಸಿ, ಟ್ರಿಸ್ಟಾನ್ ಸ್ಟಬ್ಸ್