ವನಿಂದು ಹಸರಂಗ ಅವರ ಅದ್ಭುತ ಸ್ಪಿನ್ ಮ್ಯಾಜಿಕ್ ನೆರವಿನಿಂದ ಶ್ರೀಲಂಕಾ ತಂಡ ಅಫ್ಘಾನಿಸ್ತಾನ ವಿರುದ್ಧ 6 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಸೋಲಿನೊಂದಿಗೆ ಆಫ್ಘಾನ್ ಸೆಮಿಫೈನಲ್ ರೇಸ್ನಿಂದ ಹೊರ ಬಿದ್ದಿದೆ.
ಬ್ರಿಸ್ಬೇನ್ ಮೈದಾನದಲ್ಲಿ ನಡೆದ ಗ್ರೂಪ್ 1ರ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ತಂಡ ಬ್ಯಾಟಿಂಗ್ ಆಯ್ದುಕೊಂಡು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 144 ರನ್ ಕಲೆ ಹಾಕಿತು. ಶ್ರೀಲಂಕಾ ತಂಡ 18.3 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತು.
ಆಫ್ಘಾನ್ ಪರ ಪಾಥುಮ್ ರಹಮಾನ್ಹುಲ್ಲಾ ಗುರ್ಬಾಜ್ 28, ಉಸ್ಮಾನ್ ಘಣಿ 27, ಇಬ್ರಾಹಿಂ ಜರ್ದಾನ್ 22, ನಜೀಬ್ ಹುಲ್ಲಾ ಜರ್ದಾನ್ 18, ಗುಲ್ಬಾದಿನ್ ನೈಬ್ 12, ನಾಯಕ ಮೊಹ್ಮದ್ ನಬಿ 13, ರಶೀದ್ ಖಾನ್ 9, ಅಜಮತ್ ಹುಲ್ಲಾ ಒಮರ್ಜಾಯಿ ಅಜೇಯ 3 ರನ್, ಮುಜೀಬ್ ಉರ್ ರೆಹಮಾನ್ 1 ರನ್ ಗಳಿಸಿದರು.
ವನಿಂದು ಹಸರಂಗ 13ಕ್ಕೆ 3, ಲಾಹಿರು ಕುಮಾರ 30ಕ್ಕೆ2,ರಜೀತಾ 31ಕ್ಕೆ 1 ವಿಕೆಟ್ ಪಡೆದರು.
![T20 world cup ಲಂಕಾಕ್ಕೆ ಮಣಿದ ಅಫ್ಘಾನಿಸ್ತಾನ ಟೂರ್ನಿಯಿಂದ ಔಟ್ 4 lanka win 1](http://sportskarnataka.com/wp-content/uploads/2022/11/lanka-win-1-300x200.jpg)
145 ರನ್ ಗುರಿ ಬೆನ್ನತ್ತಿದ ಲಂಕಾ ಪರ ಪಾಥುಮ್ ನಿಸ್ಸಂಕಾ 10, ಕುಸಾಲ ಮೆಂಡೀಸ್ 25, ಧನಂಜಯ ಡಿಸಿಲ್ವಾ ಅಜೇಯ 66 ರನ್ (42 ಎಸೆತ,6 ಬೌಂಡರಿ 2 ಸಿಕ್ಸರ್) ಚರಿತ್ ಅಸಲಂಕಾ 19 ರನ್, ಭಾನುಕಾ ರಾಜಪಕ್ಸ 18 ರನ್ ಗಳಿಸಿದರು.
ಮುಜೀಬ್ ಉರ್ ರೆಹಮಾನ್ 24ಕ್ಕೆ 2, ರಶೀದ್ ಖಾನ್ 31ಕ್ಕೆ 2 ವಿಕೆಟ್ ಪಡೆದರು. 3 ವಿಕೆಟ್ ಪಡೆದ ವನಿಂದು ಹಸರಂಗ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.