ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವಕಪ್ಗೆ (T20 World Cup) ಒಂದೊಂದೇ ತಂಡಗಳು ತನ್ನ ಅಂತಿಮ 15 ಆಟಗಾರರ ಹೆಸರನ್ನುಪ್ರಕಟಿಸುತ್ತಿವೆ. ಹಾಲಿ ಚಾಂಪಿಯನ್ ಆತಿಥೇಯ ಆಸ್ಟ್ರೇಲಿಯಾ ತನ್ನ ಅಂತಿಮ ತಂಡವನ್ನು ಪ್ರಕಟಿಸಿದ ಬೆನ್ನಲ್ಲೇ ಈಗ ಮಾಜಿ ಚಾಂಪಿಯನ್ ಇಂಗ್ಲೆಂಡ್ (England) 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಏಕದಿನ ಕ್ರಿಕೆಟ್ನ ವಿಶ್ವಚಾಂಪಿಯನ್ (ODI WC winners) ತಂಡವನ್ನು ಸಾಕಷ್ಟು ಅಳೆದುತೂಗಿ ಸೆಲೆಕ್ಟ್ ಮಾಡಲಾಗಿದೆ.
ಜೋಸ್ ಬಟ್ಲರ್ (Jos Buttler) ತಂಡವನ್ನುಮುನ್ನಡೆಸಲಿದ್ದು ಅವರ ಜೊತೆಗೆ ಜಾನಿ ಬೇರ್ಸ್ಟೋವ್ ಮತ್ತು ಫಿಲ್ಸಾಲ್ಟ್ ಬ್ಯಾಕಪ್ ವಿಕೆಟ್ ಕೀಪರ್ಗಳಾಗಿದ್ದಾರೆ. ಮೊಯಿನ್ ಅಲಿ, ಮತ್ತು ಲಿವಿಂಗ್ ಸ್ಟೋನ್ ಸ್ಪಿನ್ ಆಲ್ ರೌಂಡರ್ಗಳ ಕೋಟಾ ಭರ್ತಿ ಮಾಡಿದ್ದಾರೆ. ಸ್ಯಾಮ್ ಕರ್ರನ್ ಡೇವಿಡ್ ವಿಲ್ಲಿ ಮತ್ತು ಬೆನ್ಸ್ಟೋಕ್ಸ್ ವೇಗದ ಬೌಲಿಂಗ್ನ ಆಲ್ರೌಂಡರ್ಗಳಾಗಿದ್ದಾರೆ. ಹ್ಯಾರಿ ಬ್ರೂಕ್, ಡೇವಿಡ್ ಮಲನ್ ಪ್ಯೂರ್ ಬ್ಯಾಟ್ಸ್ಮನ್ಗಳು.
ಆದಿಲ್ ರಶೀದ್ ತಂಡದಲ್ಲಿರುವ ಏಕೈಕ ಸ್ಪೆಷಲಿಸ್ಟ್ ಸ್ಪಿನ್ನರ್. ಕ್ರಿಸ್ ಜೊರ್ಡಾನ್, ಕ್ರಿಸ್ವೋಕ್ಸ್ ಮತ್ತು ಮಾರ್ಕ್ವುಡ್ ಫಾಸ್ಟ್ ಬೌಲಿಂಗ್ನ ಆಯ್ಕೆಗಳು. 15 ಸದಸ್ಯರ ಜೊತೆ ಇಂಗ್ಲೆಂಡ್ ಲಿಯಂ ಡಾಸನ್, ರಿಚರ್ಡ್ ಗ್ಲೀಸನ್ ಮತ್ತು ಟೈಮಲ್ ಮಿಲ್ಸ್ರನ್ನು ಮೀಸಲು ಆಟಗಾರರಾಗಿ ಹೆಸರಿಸಿದೆ.
ಇಂಗ್ಲೆಂಡ್ ತಂಡ:
ಜೋಸ್ ಬಟ್ಲರ್ (ನಾಯಕ), ಮೊಯಿನ್ ಅಲಿ, ಜಾನಿ ಬೈರ್ಸ್ಟೋ, ಹ್ಯಾರಿ ಬ್ರೂಕ್, ಸ್ಯಾಮ್ ಕರ್ರನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್ಸ್ಟೋನ್, ಡೇವಿಡ್ ಮಲನ್, ಆದಿಲ್ ರಶೀದ್, ಫಿಲ್ ಸಾಲ್ಟ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್
ಮೀಸಲು ಆಟಗಾರರು: ಲಿಯಾಮ್ ಡಾಸನ್, ರಿಚರ್ಡ್ ಗ್ಲೀಸನ್, ಟೈಮಲ್ ಮಿಲ್ಸ್