ಟಿ20 ವಿಶ್ವಕಪ್ (T20 World Cup) ಬಗ್ಗೆ ಚರ್ಚೆ ಜೋರಾಗುತ್ತಿದೆ. ಆಸ್ಟ್ರೇಲಿಯಾದಲ್ಲಿ (Australia) ಟೂರ್ನಿ ನಡೆಯುತ್ತಿರುವುದರಿಂದ ತಯಾರಿಗಳು ಸಿಕ್ಕಾಪಟ್ಟೆ ಚೆನ್ನಾಗಿರಬೇಕು. ಆಸ್ಟ್ರೇಲಿಯನ್ ಪಿಚ್ಗಳು ವೇಗದ ಬೌಲರ್ಗಳಿಗೆ ನೆರವು ನೀಡಿದರೆ, ದೊಡ್ಡ ಬೌಂಡರಿಗಳು ಸ್ಪಿನ್ನರ್ಗಳಿಗೆ ವಿಕೆಟ್ ಬೀಳವಂತೆ ಮಾಡುತ್ತದೆ. ಆದರೆ ಟೀಮ್ ಇಂಡಿಯಾ (Team India) ಫಾಸ್ಟ್ ಬೌಲಿಂಗ್ ಹಾಗೂ ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ವೀಕ್ ಆಗುತ್ತಿದೆ. ಹೀಗಾಗಿ ಭಾರತದ ವಿಶ್ವಕಪ್ ಯಾತ್ರೆ ಬಗ್ಗೆ ಡೌಟ್ ಕ್ರಿಯೇಟ್ ಆಗಲು ಶುರುವಾಗಿದೆ.
ಜಸ್ಪ್ರಿತ್ ಬುಮ್ರಾ (Jaspreet Bumrah) ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್ ಫಾಸ್ಟ್ ಬೌಲರ್ (Fast Bowler). ಪಂದ್ಯದ ಯಾವುದೇ ಹಂತದಲ್ಲೂ ಇವರ ಸೇವೆ ನಿರ್ಣಾಯಕ. ಆದರೆ ಬುಮ್ರಾ ಗಾಯಗೊಂಡಿದಾರೆ. ಸೆ. 16ರಂದು ಭಾರತ (India) ತಂಡ ಆಯ್ಕೆಯಾಗಲಿದೆ ಎನ್ನಲಾಗುತ್ತಿದ್ದು, ಅಷ್ಟರೊಳಗೆ ಸಂಪೂರ್ಣ ಫಿಟ್ ಆಗುವುದು ಅನುಮಾನ. ಬುಮ್ರಾ ಅನುಪಸ್ಥಿತಿಯು ಭಾರತ ತಂಡಕ್ಕೆ ಭಾರಿ ಹಿನ್ನಡೆಯಾಗಲಿದೆ. ಸದ್ಯ ಯಾರ್ಕರ್ ಸ್ಪೆಷಲಿಸ್ಟ್ ಎನ್ಸಿಎನ (NCA) ಪುನಶ್ಚೇತನ ಶಿಬಿರದಲ್ಲಿದ್ದಾರೆ. ಬುಮ್ರಾ ಅಲಭ್ಯರಾದರೆ ಅವರ ಸ್ಥಾನ ತುಂಬಲು ಬೇರೆ ವೇಗದ ಬೌಲರ್ಗಳಿದ್ದಾರೆ. ಆದರೆ ಅವರಂತೆ ಪಂದ್ಯ ಗೆಲ್ಲಿಸಿ ಕೊಡಬಹುದಾದ ಬೌಲರ್ಗಳಿಲ್ಲ.
ಇನ್ನು ಜಡೇಜಾ (Ravindra Jadeja)ಮೊಣಕಾಲು ಗಾಯದಿಂದ ಚೇತರಿಸಿಕೊಳ್ಳುವುದು ಅಸಾಧ್ಯ ಎಂದು ಹೇಳಲಾಗುತ್ತಿದೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ನಲ್ಲಿ ಜಡೇಜಾ ಕೊಡುಗೆ ಟೀಮ್ ಇಂಡಿಯಾಕ್ಕೆ ಅನಿವಾರ್ಯ. ಆದರೆ ಈ ಆಲ್ರೌಂಡರ್ (All Rounder) ಫಿಟ್ ಆಗುವುದು ಸಂದೇಹ. ಇವರ ಜಾಗಕ್ಕೆ ಅಕ್ಸರ್ ಪಟೇಲ್ (Axar Patel) ಆಯ್ಕೆಯಾದರೂ ಜಡೇಜಾ ತಂಡಕ್ಕೆ ತುಂಬಬಲ್ಲ ಶಕ್ತಿ ಮತ್ತು ಅನುಭವದ ಕೊರತೆ ಎದುರಾಗಲಿದೆ.
ಟೀಮ್ ಇಂಡಿಯಾದ ಆಟಗಾರರು ರಾಂಗ್ ಟೈಮ್ನಲ್ಲಿ ಗಾಯಗೊಳ್ಳುತ್ತಿದ್ದಾರೆ. ಆಟಗಾರರ ಗಾಯಗಳು (Injury) ಟೀಮ್ ಇಂಡಿಯಾದ ವಿಶ್ವಕಪ್ ಗೆಲ್ಲುವ ಕನಸನ್ನು ನುಚ್ಚುನೂರು ಮಾಡುವ ಸಾಧ್ಯತೆ ಇದೆ.