ನೇಪಾಳ (Nepal) ಕಂಡ ದಿ ಬೆಸ್ಟ್ ಕ್ರಿಕೆಟರ್ ಲೆಗ್ ಸ್ಪಿನ್ನರ್ (Leg Spinner) ಸಂದೀಪ್ ಲಮಿಚ್ಚನ್ನೆ (Sandeep Lamichhane) ಅಪ್ರಾಪ್ರ ಬಾಲಕಿಯ ಮೇಲೆ ಅತ್ಯಾಚಾರ ಎಸೆಗಿದ ಆರೋಪ (Rape Case) ಎದುರಿಸುತ್ತಿದ್ದಾರೆ. ಕಠ್ಮಂಡುವಿನಲ್ಲಿ ದಾಖಲಾಗಿರುವ ಕೇಸ್ ಪ್ರಕಾರ ಅವರ ವಿರುದ್ಧ ಬಂಧನ ವಾರಂಟ್ ಜಾರಿಯಾಗಿದೆ (Arrest Warrant). ಈ ಮಧ್ಯೆ ನೇಪಾಳ ಕ್ರಿಕೆಟ್ ಬೋರ್ಡ್ (Cricket Association of Nepal) ಅವರನ್ನು ಸೆಂಟ್ರಲ್ ಕಾಂಟ್ರಾಕ್ಟ್ನಿಂದ ಹೊರಗಿಟ್ಟಿದೆ. ಯುವ ಸ್ಪಿನ್ನರ್ ಬಂಧನದ ಭೀತಿ ಎದುರಿಸುತ್ತಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳು ಸಂದೀಪ್ ಅವರ ಕ್ರಿಕೆಟ್ ಜೀವನಕ್ಕೆ ದುಬಾರಿಯಾಗಿದೆ. ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ (CPL) ಆಡಲು ಜಮೈಕಾ ತಲ್ಲಾವಾಸ್ ತಂಡದಲ್ಲಿದ್ದರು. ಆದರೆ ಬಂಧನ ವಾರಂಟ್ ಜಾರಿಯಾಗುತ್ತಿದ್ದಂತೆ ತಲ್ಲಾವಸ್ ತಂಡ ಅವರನ್ನು ಬಿಡುಗಡೆ ಮಾಡಿದೆ. ಕ್ರಿಕೆಟ್ ಅಸೋಸಿಯೇಶನ್ ಅಫ್ ನೇಪಾಳ, ಸಂದೀಪ್ ಮೇಲಿನ ಆರೋಪಗಳು ಬಗೆಹರಿಯುವ ತನಕ ಅವರ ಗುತ್ತಿಗೆಯನ್ನು ತಡೆ ಹಿಡಿಯಲಾಗಿದ ಎಂದು ಘೋಷಿಸಿದೆ. ಈ ಮಧ್ಯೆ ಸಂದೀಪ್ ತಾನು ನಿರಪರಾಧಿಯಾಗಿದ್ದು, ಕಾನೂನು ಪ್ರಕಾರ ಎಲ್ಲಾ ಆರೋಪಗಳಿಂದ ಮುಕ್ತವಾಗುವೆ ಎಂದು ಆತ್ಮವಿಶ್ವಾಸದಿಂದ ನುಡಿದಿದ್ದಾರೆ.
22 ವರ್ಷದ ಸಂದೀಪ್ ನೇಪಾಳ ಕ್ರಿಕೆಟ್ನ ದಿ ಬೆಸ್ಟ್ ಕ್ರಿಕೆಟರ್. ಐಪಿಎಲ್ (IPL), ಬಿಗ್ಬ್ಯಾಷ್ (BBL), ಬಾಂಗ್ಲಾದೇಶ ಪ್ರೀಮಿಯರ್ ಲೀಗ್, ಲಂಕಾ ಪ್ರೀಮಿಯರ್ ಲೀಗ್ ಮತ್ತು ಕೆರಿಬಿಯನ್ ಪ್ರೀಮಿಯರ್ ಲೀಗ್ ಆಡಿದ ನೇಪಾಳದ ಏಕೈಕ ಕ್ರಿಕೆಟಿಗ. 2018ರಲ್ಲಿ ಸಂದೀಪ್ ಐಪಿಎಲ್ ಆಟಗಾರರ ಹರಾಜಿನಲ್ಲಿ 20 ಲಕ್ಷ ರೂಪಾಯಿಗಳಿಗೆ ಡೆಲ್ಲಿ ಡೇರ್ ಡೆವಿಲ್ಸ್ಗೆ ಮಾರಾಟವಾಗಿದ್ದರು.
ನೇಪಾಳ ಪರ 30 ಏಕದಿನ (ODI) ಮತ್ತು 44 T20I ಅಂತರಾಷ್ಟ್ರೀಯ ಪಂದ್ಯಗಳನ್ನು ಸಂದೀಪ್ ಆಡದ್ದಾರೆ. ಅಷ್ಟೇ ಅಲ್ಲ ನೇಪಾಳ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದರು. ವಿಶ್ವಕ್ರಿಕೆಟ್ನಲ್ಲಿ ತಂಡ ಮುನ್ನಡೆಸಿದ ಅತಿ ಕಿರಿಯ ಆಟಗಾರರಲ್ಲಿ ಸಂದೀಪ್ ಒಬ್ಬರಾಗಿದ್ದರು.