ಟೀಮ್ ಇಂಡಿಯಾದ ಏಷ್ಯಾಕಪ್ (Asia Cup) ಲೆಕ್ಕಾಚಾರ ಇಂದು ಮುಗಿಯುತ್ತಿದೆ. ಅಫ್ಘಾನಿಸ್ತಾನ (Afghanistan) ವಿರುದ್ಧ ಔಪಚಾರಿಕ ಪಂದ್ಯವಾಡಿ ದುಬೈನಿಂದ ಮುಂಬೈಗೆ ಟೀಮ್ ಇಂಡಿಯಾ (Team India) ಬರಲಿದೆ. 5 ದಿನಗಳ ಗ್ಯಾಪ್ ಬಳಿಕ ಮತ್ತೆ ಟೀಮ್ ಇಂಡಿಯಾ ಒಟ್ಟಾಗಲಿದೆ. ಆಸ್ಟ್ರೇಲಿಯಾ (Australia) ವಿರುದ್ಧದ ಸರಣಿಗೆ ಸಿದ್ಧತೆ ಮಾಡಿಕೊಳ್ಳಬೇಕಿದೆ.
ಆಸ್ಟ್ರೇಲಿಯಾ ವಿರುದ್ಧ ಸರಣಿ ಮುಗಿದ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ಆಟ ಆರಂಭವಾಗಲಿದೆ. ಇಲ್ಲಿ 3 ಏಕದಿನ ಮತ್ತು 3 ಟಿ20 ಪಂದ್ಯ ಇರಲಿದೆ. ಇದಾದ ಬಳಿಕ ನೇರವಾಗಿ ಟಿ20 ವಿಶ್ವಕಪ್‌ಗಾಗಿ (T20 World Cup) ಆಸ್ಟ್ರೇಲಿಯಾಕ್ಕೆ ಹಾರಬೇಕಿದೆ. T20 ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯಗಳ (T20 WC Warm up match Schedule) ವೇಳಾಪಟ್ಟಿಯನ್ನು ಐಸಿಸಿ (ICC) ಪ್ರಕಟಿಸಿದೆ. ಎಲ್ಲಾ 16 ತಂಡಗಳು ತಲಾ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿವೆ. ಅಕ್ಟೋಬರ್ 17 ರಂದು ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಭಾರತ ಗಬ್ಬಾದಲ್ಲಿ ಮೊದಲ ಪಂದ್ಯವನ್ನು ಆಡಲಿದೆ. ಬಳಿಕ ಅಕ್ಟೋಬರ್ 19 ರಂದು ನ್ಯೂಜಿಲೆಂಡ್ (Newzealand) ವಿರುದ್ಧ ಕಣಕ್ಕಿಳಿಯಲಿದೆ.
ಒಟ್ಟು 15 ವಾರ್ಮ್‌ಅಪ್ ಮ್ಯಾಚ್‌ಗಳು ನಡೆಯಲಿವೆ. ಭಾರತ ಮೊದಲ ಪಂದ್ಯ ಭಾರತೀಯ ಕಾಲಮಾನದಂತೆ ಬೆಳಗ್ಗೆ 9 ಗಂಟೆಗೆ ಆರಂಭವಾದರೆ, 2ನೇ ಪಂದ್ಯ ಮಧ್ಯಾಹ್ನ 2 ಗಂಟೆಗೆ ಶುರುವಾಗಲಿದೆ.
ಭಾರತ ಅಕ್ಟೋಬರ್ 23 ರಂದು ಪಾಕಿಸ್ತಾವನ್ನು ಮೆಲ್ಬರ್ನ್‌ನಲ್ಲಿ ಎದುರಿಸಲಿದೆ. ಈ ಪಂದ್ಯ ಮಧ್ಯಾಹ್ನ 1.30 ಗಂಟೆಗೆ ಆರಂಭವಾಗಲಿದೆ. 2ನೇ ಪಂದ್ಯದಲ್ಲಿ ಭಾರತ ಅರ್ಹತಾ ಸುತ್ತಿನ A ಬಣದ ರನ್ನರ್ ಅಪ್ ವಿರುದ್ಧ ಅಕ್ಟೋಬರ್ 27 ರಂದು ಸಿಡ್ನಿಯಲ್ಲಿ ಆಡಲಿದೆ. ಈ ಪಂದ್ಯ ಸಂಜೆ 4.30 ಗಂಟೆಗೆ ಆರಂಭವಾಗಲಿದೆ. ಮೂರನೇ ಪಂದ್ಯದಲ್ಲಿ ಭಾರತ ಅಕ್ಟೋಬರ್ 30 ರಂದು ಪರ್ತ್ ನಲ್ಲಿ ಸೌತ್ ಆಫ್ರಿಕಾ ವಿರುದ್ಧ ಆಡಲಿದೆ. ಈ ಪಂದ್ಯ ಕೂಡ 4.30ಕ್ಕೆ ಆರಂಭವಾಗಲಿದೆ. ನವೆಂಬರ್ 2 ರಂದು ಬಾಂಗ್ಲಾದೇಶ ವಿರುದ್ಧ ಆಡಿಲೇಡ್ ಓವಲ್ ಹಾಗೂ ನವೆಂಬರ್ 6 ರಂದು ಮೆಲ್ಬರ್ನ್‌ನಲ್ಲಿ ಅರ್ಹತಾ ಸುತ್ತಿನ ಗ್ರೂಪ್ ಬಿ ರನ್ನರ್ ಅಪ್ ವಿರುದ್ಧ ಆಡಲಿದೆ.