ಟಿ20 ವಿಶ್ವಕಪ್ ಆರಂಭವಾಗಿದೆ. ಅ.23ರಿಂದ ಬಲಿಷ್ಠ ತಂಡಗಳ ಕಾದಾಟ ಆರಂಭವಾಗಲಿವೆ. ಸೋಲು ಗೆಲುವಿನಲೆಕ್ಕಾಚಾರಗಳು ನಡೆಯುತ್ತಿವೆ. ಈ ಬಾರಿಯ ಟೂರ್ನಿಯಲ್ಲಿ ಮಧ್ಯಮ ಕ್ರಮಾಂಕದ ಎಡಗೈ ಬ್ಯಾಟರ್ ಗಳು ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಯಾರು ಆ ಐದು ಬ್ಯಾಟರ್ಗಳು ಅನ್ನೋ ಡಿಟೇಲ್ಸ್ ಇಲ್ಲಿದೆ.
ಮ್ಯಾಥೀವ್ ವೇಡ್
ಕಳೆದ ವರ್ಷ ದುಬೈನಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ವೇಗಿ ಶಾಹೀನ್ ಅಫ್ರೀದಿಗೆ ಆಸಿಸ್ ಬ್ಯಾಟರ್ ಮ್ಯಾಥೀವ್ ವೇಡ್ ಚಚ್ಚಿದನ್ನು ಯಾವ ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿಗಳು ಮರೆಯುವುದಿಲ್ಲ. ಆ ಪಂದ್ಯದಲ್ಲಿ ವೇಡ್ 17 ಎಸೆತದಲ್ಲಿ 41 ರನ್ ಚಚ್ಚಿದ್ದರು.
ನಂತರ ವೇಡ್ 17 ಟಿ20 ಪಂದ್ಯಗಳ ಪೈಕಿ 12ರಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದಾರೆ. ಮೊಹಾಲಿ ಟಿ20 ಪಂದ್ಯದಲ್ಲಿ ವೇಡ್ 21 ಎಸೆತದಲ್ಲಿ 45 ರನ್ ಚಚ್ಚಿದ್ದರು. ನಾಗ್ಪುರದಲ್ಲಿ 20 ಎಸೆತದಲ್ಲಿ 43 ರನ್ ಹೊಡೆದಿದ್ದರು.
ಡೇವಿಡ್ ಮಿಲ್ಲರ್
ಸೌತ್ ಆಫ್ರಿಕಾ ತಂಡದ ಸ್ಫೋಟಕ ಬ್ಯಾಟರ್ ಡೇವಿಡ್ ಮಿಲ್ಲರ್ ಟಿ20 ವಿಶ್ವಕಪ್ ಗೂ ಮುನ್ನ 6 ಅದ್ಭುತ ಸೀಸನ್ಗಳನ್ನು ಕಂಡಿದ್ದಾರೆ. ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ಪರ 16 ಪಂದ್ಯಗಳಿಂದ 481 ರನ್ ಚಚ್ಚಿ 142.73 ಸ್ಟ್ರೈಕ್ ರೇಟ್ ಪಡೆದಿದ್ದಾರೆ. ಟೂರ್ನಿಯಲ್ಲಿ 23 ಸಿಕ್ಸ್ ಚಚ್ಚಿದ್ದಾರೆ. ಇತ್ತೀಚೆಗೆ ಭಾರತ ವಿರುದ್ಧದ ಟಿ20 ಸರಣಿಯಲ್ಲಿ 47 ಎಸತೆದಲ್ಲಿ 106 ರನ್ ಕಲೆ ಹಾಕಿದ್ದಾರೆ.
ಮೊಯಿನ್ ಅಲಿ
ಇಂಗ್ಲೆಂಡ್ ತಂಡದ ಅನುಭವಿ ಆಲ್ರೌಂಡರ್ ಮೊಯಿನ್ ಅಲಿ ವೈಟ್ ಬಾಲ್ಗೆ ಹೇಳಿ ಮಾಡಿಸಿದ ಬೌಲರ್. ಇತ್ತಿಚೆಗೆ ಆತಿಥೇಯ ಪಾಕಿಸ್ತಾನ ನೆಲದಲ್ಲಿ ತಂಡವನ್ನು ಮುನ್ನಡೆಸಿ 4-3 ಅಂತರದಿಂದ ಟಿ20 ಸರಣಿ ಗೆದ್ದು ಬೀಗಿದ್ದರು.
ಕರಾಚಿಯಲ್ಲಿ ನಡೆದಿದ್ದ 2ನೇ ಟಿ20 ಪಂದ್ಯದಲ್ಲಿ ಮೊಯಿನ್ ಅಲಿ 23 ಎಸೆತದಲ್ಲಿ 55 ರನ್ ಹೊಡೆದಿದ್ದರು. ನಂತರ 5ನೇ ಟಿ20 ಪಂದ್ಯದಲ್ಲಿ 37 ಎಸೆತದಲ್ಲಿ 51 ರನ್ ಹೊಡೆದಿದ್ದರು. ಮೊನ್ನೆ ಕೆನಬೆರಾದಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಮೊಯಿನ್ ಅಲಿ 92 ರನ್ ಸಿಡಿಸಿ ಸಾಮರ್ಥ್ಯ ತೋರಿಸಿದ್ದರು.
ಭಾನುಕಾ ರಾಜಪಕ್ಸ
ಭಾನುಕಾ ರಾಜಪಕ್ಸ ಏಷ್ಯಾಕಪ್ ಫೈನಲ್ನನ ಹೀರೊ. ಫಿಟ್ನೆಸ್ ಸಮಸ್ಯೆಯಿಂದಾಗಿ ನಿವೃತ್ತಿ ಘೋಷಿಸಿ ನಂತರ ಮತ್ತೆ ತಂಡಕ್ಕೆ ಬಂದು ಫಿನಿಶರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಏಷ್ಯಕಪ್ ಫೈನಲ್ ನಲ್ಲಿ ರಾಜಪಕ್ಸ 45 ಎಸೆತದಲ್ಲಿ 71 ರನ್ ಚಚ್ಚಿದ್ದಾರೆ. ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಜೇಮ್ಸ್ ನಿಶಾಮ್
ನ್ಯೂಜಿಲೆಂಡ್ ತಂಡದ ಜೇಮ್ಸ್ ನಿಶಾಮ್ ವಿಧ್ವಂಸಕ ಬ್ಯಾಟರ್. ಟಿ20 ಆವೃತ್ತಿಯಲ್ಲಿ ಇವರ ಸ್ಟ್ರೈಕ್ ರೇಟ್ 163.65 ಆಗಿದೆ. 2021ರ ಟಿ20 ವಿಶ್ವಕಪ್ ನ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಜಿಮ್ಮಿ ನಿಶಾಮ್ 11 ಎಸೆತದಲ್ಲಿ 27 ರನ್ ಗಳಿಸಿದ್ದರು. 12 ಟಿ20 ಪಂದ್ಯಗಳಿಂದ ನಿಶಾಮ್ 192.10 ಸ್ಟ್ರೈಕ್ ರೇಟ್ ಪಡೆದಿದ್ದಾರೆ.