ಮುಂಬರುವ ಟಿ20 ವಿಶ್ವಕಪ್ ನಲ್ಲಿ ಗಾಯಾಳು ಬುಮ್ರಾ ಬದಲಿಗೆ ವೇಗಿ ಮೊಹ್ಮದ್ ಶಮಿಗೆ ತಂಡದಲ್ಲಿ ಸ್ಥಾನ ನೀಡುವ ಬಗ್ಗೆ ಟೀಮ್ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಸುಳಿವು ನೀಡಿದ್ದಾರೆ.
ಇತ್ತೀಚೆಗಷ್ಟೆ ಕೊರೋನಾ ಸೋಂಕಿಗೆ ಗುರಿಯಾಗಿದ್ದ ಮೊಮ್ಮದ್ ಶಮಿ ಇದೀಗ ಫಿಟ್ ಆಗುವತ್ತ ಗಮನ ನೀಡಿದ್ದಾರೆ.
ಇದಕ್ಕೂ ಮುನ್ನ ದೀಪಕ್ ಚಾಹರ್ ಜೊತೆ ಮೊಹ್ಮದ್ ಶಮಿ ಮೀಸಲು ಆಟಗಾರನಾಗಿ ಆಯ್ಕೆ ಮಾಡಲಾಗಿತ್ತು .ಕೊರೋನಾ ಇದ್ದ ಕಾರಣ ಶಮಿ ಬದಲು ದೀಪಕ್ ಚಾಹರ್ ಅವರನ್ನು ಆಯ್ಕೆ ಮಾಡಲಾಗಿತ್ತು .
ಬುಮ್ರಾ ಸ್ಥಾನದಲ್ಲಿ ಯಾರು ಆಡಬೇಕೆಂಬುದನ್ನು ಇನ್ನಷ್ಟೆ ಬಿಸಿಸಿಐ ನಿರ್ಧರಿಸಬೇಕಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟ20 ಸರಣಿ ನಂತರ ಗೊತ್ತಾಗಲಿದೆ ಎಂದು ತಿಳಿದು ಬಂದಿತ್ತು.
ಇದೀಗ ಕೋಚ್ ದ್ರಾವಿಡ್ ಶಮಿಯನ್ನು ಆಯ್ಕೆ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ.
ಬದಲಿ ಆಟಗಾರನನ್ನು ನೇಮಕ ಮಾಡಲು ನಮಗೆ ಆಯ್ಕೆಗಳಿವೆ. ಅ.15ರವರೆಗೆ ಅವಕಾಶವಿದೆ. ಮೀಸಲು ಆಟಗಾರನಾಗಿ ಶಮಿ ಇದ್ದಾರೆ ದುರಾದೃಷ್ಟವಶತ್ ಅವರು ಎರಡು ಸರಣಿಗಳಲ್ಲಿ ಆಡಲು ಆಗಲಿಲ್ಲ ಎಂದು ದ್ರಾವಿಡ್ ಹೇಳಿದ್ದಾರೆ .
ಮೊಹ್ಮದ್ ಶಮಿ ಈಗ ಎನ್ ಸಿಎಯಲ್ಲಿದ್ದಾರೆ. ಕೋವಿಡ್ ನಿಂದ ಬಳಲಿದ್ದರಿಂದ 14-15 ದಿನಗಳಲ್ಲಿ ಅವರು ಹೇಗೆ ಚೇತರಿಸಿಕೊಂಡಿದ್ದಾರೆ ಎನ್ನುವುದರ ಬಗ್ಗೆ ವರದಿ ಸಿಗಬೇಕಿದೆ ಎಂದು ದ್ರಾವಿಡ್ ಮಾಹಿತಿ ನೀಡಿದ್ದಾರೆ.
ಡೆತ್ ಬೌಲಿಂಗ್ ಟೀಮ್ ಇಂಡಿಯಾಗೆ ದೊಡ್ಡ ತಲೆ ನೋವಾಗಿದೆ. ಅ.6ರಂದು ರೋಹಿತ್ ಪಡೆ ಟಿ20 ವಿಶ್ವಕಪ್ ಆಡಲು ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳಸಲಿದೆ. ಪರ್ತ್ ನಲ್ಲಿ ಆಡಿ ಬ್ರಿಸ್ಬೇನ್ಗೆ ಅಭ್ಯಾಸ ಪಂದ್ಯಗಳನ್ನು ಆಡಲು ತೆರೆಳಲಿದೆ.