
ಫಿಟ್ನೆಸ್ ಸಮಸ್ಯೆಯಿಂದಾಗಿ ಟೀಮ್ ಇಂಡಿಯಾದ ಯುವ ವೇಗಿ ದೀಪಕ್ ಚಾಹರ್ ಟಿ20 ವಿಶ್ವಕಪ್ ನಿಂದ ಹೊರ ನಡೆದಿದ್ದಾರೆ. ವೇಗಿಗಳಾದ ಮೊಹ್ಮದ್ ಶಮಿ ಹಾಗೂ ಮೊಹಮದ್ ಸಿರಾಜ್ ಆಸ್ಟ್ರೇಲಿಯಾಕ್ಕೆ ಪ್ರಯಾಣ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಅ.15ರವರೆಗೆ ಸಮಯ ಇರುವುದರಿಂದ ವೇಗಿ ಜಸ್ಪ್ರೀತ್ ಬುಮ್ರಾ ಜಾಗದಲ್ಲಿ ಯಾರು ಆಡಬೇಕೆನ್ನುವುದು ಇನ್ನು ನಿರ್ಧಾರವಾಗಿಲ್ಲ.
ಗಾಯದಿಂದ ಚೇತರಿಸಿಕೊಂಡು ಜಿಂಬಾಬ್ವೆ ಸರಣಿ ಮೂಲಕ ಕಮ್ ಬ್ಯಾಕ್ ಮಾಡಿದ್ದ ದೀಪಕ್ ಚಾಹರ್ ಮೊನ್ನೆ ದ.ಆಫ್ರಿಕಾ ವಿರುದ್ಧದ ಸರಣಯಲ್ಲಿ ಮತ್ತೆ ಗಾಯಗೊಂಡರು.
ಈ ಹಿನ್ನಲೆಯಲ್ಲಿ ಚಾಹರ್ ಫಿಟ್ನೆಸ್ ಸಮಸ್ಯೆಯಿಂದಾಗಿ ಟಿ20 ವಿಶ್ವಕಪ್ ನಿಂದ ಹೊರ ನಡೆದಿದ್ದಾರೆ. ಚಾಹರ್ ಟಿ20 ವಿಶ್ವಕಪ್ನಲ್ಲಿ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದರು.
ದೀಪಕ್ ಚಾಹರ್ ಬದಲು ಮತ್ತೋರ್ವ ವೇಗಿ ಶಾರ್ದೂಲ್ ಠಾಕೂರ್ ಆಸಿಸ್ ನಾಡಿಗೆ ಪ್ರಯಾಣ ಬೆಳಸಲಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ವೇಳೆ ವೇಗಿಗಳಾದ ಮೊಹಮದ್ ಶಮಿ ಹಾಗೂ ಮೊಹ್ಮದ್ ಸೀರಾಜ್ ಇಬ್ಬರಲ್ಲಿ ಒಬ್ಬರು ಬುಮ್ರಾ ಜಾಗದಲ್ಲಿ ಆಡಲಿದ್ದಾರೆ.

ಅನುಭವದ ಆಧಾರದ ಮೇಲೆ ಮೊಹ್ಮದ್ ಶಮಿ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ. ಮೊಹ್ಮದ್ ಸಿರಾಜ್ ದ.ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ 3 ಪಂದ್ಯಗಳಿಂದ 5 ವಿಕೆಟ್ ಪಡೆದು ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದರು.
ವೇಗಿ ಶಾರ್ದೂಲ್ ಠಾಕೂರ್ ಕೂಡ ಪೈಪೋಟಿ ನಡೆಸುತ್ತಿದ್ದಾರೆ. ಶಮಿ ಅಯ್ಕೆಯಾಗವ ನೆಚ್ಚಿನ ಬೌಲರ್ ಆಘಿದ್ದಾರೆ.