ವಿದೇಶ ಪ್ರವಾಸದಲ್ಲಿರುವ ಕೇಂದ್ರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ತಂಡದ ಮಾಜಿ ಸ್ಟೀವ್ ವ್ಹಾ ಅವರಿಂದ ಕ್ರಿಕೆಟ್ ಪಾಠ ಕಲಿತರು.
ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಕೇಂದ್ರ ವಿದೇಶಾಂಗ್ ಸಚಿವ ಜೈಶಂಕರ್ ಮಂಗಳವಾರ ಐತಿಹಾಸಿಕ ಸಿಡ್ನಿ ಕ್ರಿಕೆಟ್ ಮೈದಾನಕ್ಕೆ ಭೇಟಿ ನೀಡಿದರು.
ವಿಶ್ವಕಪ್ ವಿಜೇತ ನಾಯಕ ಹಾಗೂ ಭಾರತದೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಂಡಿರುವ ಸ್ಟೀವ್ ವ್ಹಾ ಸಚಿವ ಜೈಶಂಕರ್ಗೆ ಸಿಡ್ನಿ ಮೈದಾನವನ್ನು ಪರಿಚೆಯ ಮಾಡಿಕೊಟ್ಟರು. ಜೊತೆಗೆ ಕ್ರಿಕೆಟ್ ಪಾಠವನ್ನು ಹೇಳಿಕೊಟ್ಟರು.
ಭಾರತ ಮತ್ತು ಆಸ್ಟ್ರೇಲಿಯಾವನ್ನು ಕ್ರಿಕೆಟ್ ಒಂದುಗೂಡಿಸುತ್ತದೆ. ಸಿಡ್ನಿ ಮೈದಾನದಕ್ಕೆ ಸಮಯ ತೆಗೆದುಕೊಂಡು ಭೇಟಿ ಮಾಡಿದೆ. ದಂತ ಕತೆ ಸ್ಟೀವ್ ವ್ಹಾ ಅವರನ್ನು ಭೇಟಿಯಾದೆ ಎಂದು ಸಚಿವ ಜೈಶಂಕರ್ ಟ್ವೀಟ್ ಮಾಡಿದ್ದಾರೆ.

ಸಚಿವ ಜೈಶಂಕರ್ ಮೊನ್ನೆ ನ್ಯೂಜಿಲೆಂಡ್ ಪ್ರವಾಸದ ವೇಳೆ ಭಾರತ – ನ್ಯೂಜಿಲೆಂಡ್ ನ ಸಂಬಂಧವನ್ನು ಶ್ಲಾಘಿಸಿ ಕೋಚ್ ಗಳಾದ ಜಾನ್ ರೈಟ್ ಮತ್ತು ಸ್ಟೀಫನ್ ಫ್ಲೆಮಿಂಗ್ ಅವರನ್ನು ಶ್ಲಾಘಿಸಿದರು.
ಜಾನ್ ರೈಟ್ ಅವರನ್ನು ಯಾವ ಭಾರತಿಯರು ಮರೆಯಲು ಸಾಧ್ಯವಿಲ್ಲ.ಹಾಗೆ ಸ್ಟೀಫನ್ ಫ್ಲೆಮಿಂಗ್ ಅವರನ್ನು ಐಪಿಎಲ್ ಅಭಿಮಾನಿಗಳು ಮರೆಯುವುದಿಲ್ಲ ಎಂದಿದ್ದಾರೆ.
ಜಾನ್ ರೈಟ್ ಕಾಲದಲ್ಲಿ ಟೀಮ್ ಇಂಡಿಯಾ ವಿಶ್ವ ಕ್ರಿಕೆಟ್ ನಲ್ಲಿ ಬಲಿಷ್ಠ ತಂಡವಾಗಿ ಹೊರಹೊಮ್ಮಿತು. 2003ರ ವಿಶ್ವಕಪ್ ಭಾರತ ಫೈನಲ್ ತಲುಪಿತು.