ಭಾರತದ ಕ್ರಿಕೆಟ್ (India) ತಂಡವೊಂದು ಪಾಕ್(Pakistan) ತಂಡದ ವಿರುದ್ಧ ಕ್ರಿಕೆಟ್ ಪಂದ್ಯ ಆಡಲು ಸಿದ್ಧವಾಗಿದೆ. ಅದೂ ಕೂಡ ಎರಡು ದೇಶಗಳ ದೇಶೀಯ ತಂಡಗಳು ಮುಖಾಮುಖಿಯಾಗಲಿವೆ. ಎಸ್, ಕ್ರಿಕೆಟ್ ನಮೀಬಿಯಾ ಗ್ಲೋಬಲ್ ಟಿ20 ನಮೀಬಿಯಾ ಸೀರಿಸ್ (T20 Global Super League) ಆಯೋಜಿಸಲು ಮುಂದಾಗಿದೆ. ಇದರಲ್ಲಿ ಭಾರತ ಪಶ್ಚಿಮ ಬಂಗಾಳ (West Bengal) ಮತ್ತು ಪಾಕಿಸ್ತಾನದ ಲಾಹೋರ್ ಖಲಂದರ್ (Lahore Khalander) ಟೀಮ್ಗಳು ಭಾಗವಹಿಸಲಿದೆ. ಸೌತ್ ಆಫ್ರಿಕಾದ (South Africa) ದೇಶೀಯ ತಂಡ ಕೂಡ ಇದರ ಭಾಗವಾಗಲಿದೆ.
ಈ ಬಗ್ಗೆ ಬಂಗಾಳ ಕ್ರಿಕೆಟ್ ಅಸೋಸಿಯೇಶನ್ ತನ್ನ ಭಾಗವಹಿಸುವಿಕೆಯನ್ನು ಖಚಿತ ಪಡಿಸಿದೆ. ಲಾಹೋರ್ ತಂಡದ ಭಾಗವಹಿಸುವಿಕೆಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ದಕ್ಷಿಣ ಆಫ್ರಿಕಾದ ದೇಶೀಯ ತಂಡಕ್ಕೂ ಸಮಸ್ಯೆ ಇಲ್ಲ. ಆದರೆ ಲಾಜಿಸ್ಟಿಕ್ ವಿಷಯಗಳು ಸಾರ್ಟ್ ಔಟ್ ಆದ ಮೇಲೆ ಅದಿಕೃತ ಪ್ರಕಟನೆಗಳು ಹೊರ ಬೀಳಲಿವೆ.
ಬಂಗಾಳ ತಂಡವನ್ನು ಅಭಿಮನ್ಯು ಈಸ್ವರನ್ ಮುನ್ನಡೆಸಲಿದ್ದಾರೆ. ಶಹಬಾಸ್ ಅಹ್ಮದ್, ಇಶನ್ ಪೊರೆಲ್, ಮುಕೇಶ್ ಮುಕಾರ್, ಆಕಾಶ್ ದೀಪ್, ವೃತ್ತಿಕ್ ಚಟರ್ಜಿ ಸೇರಿದಂತೆ ಹಲವು ಆಟಗಾರರು ಈ ಟೂರ್ನಿ ಆಡಲಿದ್ದಾರೆ. ನಮೀಬಿಯಾ ತಂಡಕ್ಕೆ ಇದು ಅಂತರಾಷ್ಟ್ರಿಯ ಮಟ್ಟದಲ್ಲಿ ಸದ್ದು ಮಾಡಲು ಇರುವ ಅವಕಾಶವಾಗಿದೆ . ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 (T20) ವಿಶ್ವಕಪ್ನಲ್ಲಿ ಆಟ ಶುರುಮಾಡುವ ಮುನ್ನ ಇದು ಅಭ್ಯಾಸ ಪಂದ್ಯವಾಗಿದೆ. ಆಸ್ಟ್ರೇಲಿಯಾಕ್ಕೆ ತೆರಳುವ ಮುನ್ನ ನಮೀಬಿಯಾ(Nambia) ಪಪುವಾ ನ್ಯುಗಿನಿ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ. ನಮೀಬಿಯಾ ಟಿ20 ವಿಶ್ವಕಪ್ನಲ್ಲಿ ಶ್ರೀಲಂಕಾ, ನೆದರ್ಲೆಂಡ್ ಮತ್ತು ಯುಎಇ ಜೊತೆ ಕ್ವಾಲಿಫೈಯಿಂಗ್ ರೌಂಡ್ ಆಡಬೇಕಿದೆ.