ಟಿ20 ವಿಶ್ವಕಪ್(T20 World Cup) ಟೂರ್ನಿಯ ಸೂಪರ್-12(Super-12) ಪ್ರವೇಶಿಸುವ ಮೊದಲೇ ಸೋಲಿನ ಆಘಾತ ಕಂಡಿರುವ ಯುನೈಟೆಡ್ ಅರಬ್ ಎಮಿರೇಟ್ಸ್ (United Arab Emirates) ಮತ್ತು ಶ್ರೀಲಂಕಾ ತಂಡಗಳು ಇಂದು ನಡೆಯುವ T20 ವಿಶ್ವಕಪ್ 2022 ಗ್ರೂಪ್ A ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಟೂರ್ನಿಯಲ್ಲಿ ನಡೆದ ಎ ಗುಂಪಿನ ಪಂದ್ಯದಲ್ಲಿ ಗೆರ್ಹಾರ್ಡ್ ಎರಾಸ್ಮಸ್ ನೇತೃತ್ವದ ನಮೀಬಿಯಾ ವಿರುದ್ಧ 55 ರನ್‌ಗಳ ಸೋಲು ಕಂಡಿರುವ ಶ್ರೀಲಂಕಾ, ದೊಡ್ಡಮಟ್ಟದ ಆಘಾತ ಕಂಡಿದೆ. ನಮೀಬಿಯಾ ವಿರುದ್ಧದ ಸೋಲಿನಿಂದಾಗಿ ಶ್ರೀಲಂಕಾ, ನೆಟ್ ರನ್ ರೇಟ್ -2.750 ಆಗಿದ್ದು, ರೌಂಡ್ 1ರಲ್ಲಿರುವ ಎಲ್ಲಾ 8 ತಂಡಗಳಲ್ಲಿ ಅತ್ಯಂತ ಕೆಟ್ಟ ರನ್‌ರೇಟ್ ಇದಾಗಿದೆ. ಹೀಗಾಗಿ ಟೂರ್ನಿಯ ಸೂಪರ್-12 ಹಂತಕ್ಕೆ ಆಯ್ಕೆಯಾಗಲು ಶ್ರೀಲಂಕಾ ತಂಡಕ್ಕೆ ಯುಎಇ ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.
ಮತ್ತೊಂದೆಡೆ ಸಿಪಿ ರಿಜ್ವಾನ್ ನೇತೃತ್ವದ ಯುಎಇ, ಗೀಲಾಂಗ್‌ನಲ್ಲಿ ನಡೆದ ರೋಚಕ ಫೈಟ್‌ನಲ್ಲಿ ಸ್ಕಾಟ್ ಎಡ್ವರ್ಡ್ಸ್ ನೇತೃತ್ವದ ನೆದರ್ಲ್ಯಾಂಡ್ಸ್ ವಿರುದ್ಧ ಮೂರು ವಿಕೆಟ್‌ಗಳ ಸೋಲಿನ ಆಘಾತ ಅನುಭವಿಸಿದೆ. ಹೀಗಾಗಿ ಗ್ರೂಪ್-ಎ ವಿಭಾಗದ ಪಾಯಿಂಟ್ ಟೇಬಲ್‌ನಲ್ಲಿ ಬಡ್ತಿ ಪಡೆಯುವ ಜೊತೆಗೆ ಸೂಪರ್-12 ಹಂತಕ್ಕೇರುವ ಆಸೆ ಜೀವಂತ ಇರಿಸಲು ಯುಎಇ ಸಹ ಶ್ರೀಲಂಕಾ ವಿರುದ್ಧ ಗೆಲ್ಲಬೇಕಾಗಿದೆ. ಆದರೆ ಟಿ20ಯಲ್ಲಿ ಯುಎಇ ಈವರೆಗೂ ಶ್ರೀಲಂಕಾವನ್ನು ಸೋಲಿಸಿಲ್ಲ, ಒಂದೊಮ್ಮೆ ಇಂದಿನ ಪಂದ್ಯದಲ್ಲಿ ಸೋಲಿಸಿದರೆ ಮತ್ತೊಂದು ಅಚ್ಚರಿ ಫಲಿತಾಂಶಕ್ಕೆ ಕಾರಣವಾಗಲಿದೆ.
ಸಂಭಾವ್ಯ ತಂಡಗಳು:
ಶ್ರೀಲಂಕಾ: ಪತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್, ಧನಂಜಯ ಡಿಸಿಲ್ವಾ, ಧನುಷ್ಕ ಗುಣತಿಲಕ, ಭಾನುಕ ರಾಜಪಕ್ಸೆ, ದಸುನ್ ಶನಕ, ವನಿಂದು ಹಸರಂಗ, ಚಮಿಕ ಕರುಣಾರತ್ನೆ, ದುಷ್ಮಂತ ಚಮೀರ, ಪ್ರಮೋದ್ ಮದುಶನ್, ಮಹೀಶ್ ತೀಕ್ಷಣ
ಯುಎಇ: ಮುಹಮ್ಮದ್ ವಸೀಮ್, ಚಿರಾಗ್ ಸೂರಿ, ವೃತ್ಯ ಅರವಿಂದ್, ಸಿಪಿ ರಿಜ್ವಾನ್, ಬಸಿಲ್ ಹಮೀದ್, ಜವರ್ ಫರೀದ್, ಅಯಾನ್ ಅಫ್ಜಲ್ ಖಾನ್, ಕಾಶಿಫ್ ದೌದ್, ಕಾರ್ತಿಕ್ ಮೆಯ್ಯಪ್ಪನ್, ಜುನೈದ್ ಸಿದ್ದಿಕ್, ಜಹೂರ್ ಖಾನ್.
==================