ಟಿ20 ವಿಶ್ವಕಪ್ ಟೂರ್ನಿಯ ಆರಂಭದಿಂದಲೂ ಫಾರ್ಮ್ ಸಮಸ್ಯೆಗೆ ಸಿಲುಕಿದ್ದ ಇಂಗ್ಲೆಂಡ್(England Cricket) ಆರಂಭಿಕ ಜೋಡಿ ಜೋಸ್ ಬಟ್ಲರ್(Jos Buttler) ಹಾಗೂ ಅಲೆಕ್ಸ್ ಹೇಲ್ಸ್(Alex Hales) ಸೆಮಿಫೈನಲ್(Semi Finals) ಪಂದ್ಯದಲ್ಲಿ ಸರ್ವಶ್ರೇಷ್ಠ ಬ್ಯಾಟಿಂಗ್ ಪ್ರದರ್ಶಿಸಿ ವಿಶ್ವದಾಖಲೆ(World Record) ಬರೆದಿದ್ದಾರೆ.
ಅಡಿಲೇಡ್ನಲ್ಲಿ ನಡೆದ ಭಾರತದ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಅಲೆಕ್ಸ್ ಹೇಲ್ಸ್(86* ರನ್, 47 ಬಾಲ್, 7 ಸಿಕ್ಸ್, 4 ಬೌಂಡರಿ) ಹಾಗೂ ಜಾಸ್ ಬಟ್ಲರ್(80* ರನ್, 49 ಬಾಲ್, 9 ಬೌಂಡರಿ, 3 ಸಿಕ್ಸ್) ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಟೀಂ ಇಂಡಿಯಾದ ಬೌಲರ್ಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಈ ಇಬ್ಬರು ಬ್ಯಾಟ್ಸ್ಮನ್ಗಳು ಮೊದಲ ವಿಕೆಟ್ಗೆ 170 ರನ್ಗಳ ಜೊತೆಯಾಟವಾಡಿದರು. ಆ ಮೂಲಕ ತಂಡಕ್ಕೆ ಗೆಲುವು ತಂದುಕೊಡುವ ಜೊತೆಗೆ ವಿಶ್ವ ದಾಖಲೆ ಬರೆದು ಮಿಂಚಿದರು.
ಇನ್ನಿಂಗ್ಸ್ ಆರಂಭದಿಂದಲೇ ಸ್ಪೋಟಕ ಆಟಕ್ಕೆ ಮುಂದಾದ ಅಲೆಕ್ಸ್ ಹೇಲ್ಸ್, ಇಂಗ್ಲೆಂಡ್ ತಂಡದ ಗೆಲುವಿನ ಹಾದಿಯನ್ನ ಸುಗಮಗೊಳಿಸಿದರು. ಇವರಿಗೆ ಸಾಥ್ ನೀಡಿದ ನಾಯಕ ಬಟ್ಲರ್ ಸಹ ಅರ್ಧಶತಕ ಸಿಡಿಸಿ ಗಮನ ಸೆಳೆದರು. ಆ ಮೂಲಕ 10 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದ ಆಂಗ್ಲರ ಪಡೆ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ಗೆ ಎಂಟ್ರಿಕೊಟ್ಟಿತು.
ಜೊತೆಯಾಟದ ದಾಖಲೆ:
ಭಾರತದ ವಿರುದ್ಧ ಅಲೆಕ್ಸ್ ಹೇಲ್ಸ್ ಹಾಗೂ ಜಾಸ್ ಬಟ್ಲರ್, ಮೊದಲ ವಿಕೆಟ್ಗೆ 170 ರನ್ಗಳಿಸಿದ್ದು, ಟಿ20 ವಿಶ್ವಕಪ್ನಲ್ಲಿ ದಾಖಲಾದ ಅತ್ಯಧಿಕ ಜೊತೆಯಾಟವಾಗಿದೆ. ಈ ಹಿಂದೆ ಸೌತ್ ಆಫ್ರಿಕಾದ ಕ್ವಿಂಟನ್ ಡಿಕಾಕ್ ಹಾಗೂ ರೊಸ್ಸೋ(168 ರನ್) ರನ್ಗಳಿಸಿದ್ದು ಅತ್ಯುತ್ತಮ ಜೊತೆಯಾಟವಾಗಿತ್ತು.
ಅತ್ಯುತ್ತಮ ಜೊತೆಯಾಟ-ಟಿ20 ವಿಶ್ವಕಪ್ನಲ್ಲಿ
1. ಬಟ್ಲರ್-ಹೇಲ್ಸ್ – 170* ರನ್
2. ಡಿಕಾಕ್-ರೊಸ್ಸೊ – 168 ರನ್
3. ಜಯವರ್ಧನೆ-ಸಂಗಕ್ಕಾರ – 166 ರನ್
4. ರಿಜ್ವಾನ್-ಬಾಬರ್ – 152* ರನ್
5. ಹೇಲ್ಸ್-ಮಾರ್ಗನ್ – 152 ರನ್