ವಿರಾಟ್ ಕೊಹ್ಲಿ ಕಂ ಬ್ಯಾಕ್ ಮಾಡಿದ್ದಾರೆ. ರನ್ಗಳಿಸುತ್ತಿಲ್ಲ ಎಂದವರಿಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ. ತನ್ನಲ್ಲಿ ಇನ್ನೂ ಕಸುವಿದೆ, ಮೇಲಾಗಿ ರನ್ ಹಸಿವಿದೆ ಅನ್ನುವುದನ್ನು ತೋರಿಸಿಕೊಂಡಿದ್ದಾರೆ. ಏಷ್ಯಾಕಪ್ ಟೂರ್ನಿಯಲ್ಲಿ(Asia Cup) ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಅಜೇಯ 59 ರನ್ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ. ಸೂರ್ಯ ಕುಮಾರ್ ಇನ್ನಿಂಗ್ಸ್ ಮುಂದೆ ಕೊಹ್ಲಿ(Virat kohli) ಇನ್ನಿಂಗ್ಸ್ ಮಂಕಾಗಿ ಕಂಡರೂ ಅದಕ್ಕೆ ಅದರದ್ದೇ ಮಹತ್ವ ಇದೆ.
ವಿರಾಟ್ ಕೊಹ್ಲಿ ಅಂತರಾಷ್ಟ್ರೀ ಟಿ20ಯಲ್ಲಿ (T20 Cricket) 50 ಮತ್ತು ಅದಕ್ಕಿಂತ ಹೆಚ್ಚು ರನ್ಗಳಿಸಿದ್ದ (Most 50s) ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರುತ್ತಾರೆ. ಸದ್ಯ 31 ಅರ್ಧಶತಕಗಳನ್ನು ರೋಹಿತ್ (Rohit Sharma) ಮತ್ತು ಕೊಹ್ಲಿ ಸಿಡಿಸಿದ್ದರೂ ಕಡಿಮೆ ಪಂದ್ಯಗಳನ್ನು ಆಡಿದ ಆಧಾರದಲ್ಲಿ ಕೊಹ್ಲಿ ಮುಂದಿದ್ದಾರೆ. ವಿರಾಟ್ ಹಿಂದೆಯೇ ಪಾಕ್ ನಾಯಕ ಬಾಬರ್ ಅಜಂ ಇದ್ದಾರೆ. ಉಳಿದ ಆಟಗಾರರು ವಿರಾಟ್ ಮತ್ತು ರೋಹಿತ್ಗಿಂತ ಸಾಕಷ್ಟು ಹಿಂದಿದ್ದಾರೆ.
ಗರಿಷ್ಠ ಫಿಫ್ಟಿ
★ ರೋಹಿತ್ ಶರ್ಮಾ- 31 (134 ಪಂದ್ಯ)
★ ವಿರಾಟ್ ಕೊಹ್ಲಿ-31 (101 ಪಂದ್ಯ)
★ ಬಾಬರ್ ಅಜಮ್- 27
★ ಡೇವಿಡ್ ವಾರ್ನರ್ – 23
★ ಮಾರ್ಟಿನ್ ಗಪ್ಟಿಲ್ – 22
★ ಆರೋನ್ ಫಿಂಚ್- 19
★ ಕೆ.ಎಲ್. ರಾಹುಲ್- 18
ವಿರಾಟ್ ಆಟಕ್ಕೆ ನಿಂತರೇ ರೋಹಿತ್ಗಿಂತ ಸುಲಭವಾಗಿ ಮುಂದೆ ಸಾಗುತ್ತಾರೆ. ಹಾಗಂತ ರೋಹಿತ್ ವಿರಾಟ್ ಕೊಹ್ಲಿಗಿಂತ ಮುಂದೆ ಹೋಗಲ್ಲ ಅನ್ನುವ ಹಾಗಿಲ್ಲ. ಯಾಕಂದರೆ ಹಿಟ್ಮ್ಯಾನ್ ಕೂಡ ಬಿಗ್ ಇನ್ನಿಂಗ್ಸ್ ನಿರೀಕ್ಷೆಯಲ್ಲಿದ್ದಾರೆ. ಬಹುಷಃ ಪಾಕ್ ವಿರುದ್ಧ ಇಂತಹ ಇನ್ನಿಂಗ್ಸ್ ಬಂದರೂ ಬರಬಹುದು.