ಸೂರ್ಯಕುಮಾರ್ ಯಾದವ್ (Surya Kumar Yadav), ಟೀಮ್ ಇಂಡಿಯಾದ (Team India) ಹೊಸ ಸೆನ್ಸೇಷನ್. ರೋಹಿತ್ ಬಳಗದ ಆಟಗಾರರ ಸರಾಸರಿ ಸ್ಟ್ರೈಕ್‌ರೇಟ್ ಒಟ್ಟಾರೆಯಾಗಿ 130 ರಿಂದ 135ರಷ್ಟಿದೆ. ಆದರೆ ಸೂರ್ಯಕುಮಾರ್ ಬ್ಯಾಟಿಂಗ್ ಸ್ಟ್ರೈಕ್‌ರೇಟ್ 175ರ ಆಸುಪಾಸಿನಲ್ಲಿದೆ. ಕಳೆದೊಂದು ವರ್ಷದಲ್ಲಿ ಸೂರ್ಯ ಮುಟ್ಟಿದ್ದೆಲ್ಲವೂ ಚಿನ್ನ. “SKY” is the Limit.
ಟೀಮ್ ಇಂಡಿಯಾದ 360 ಡಿಗ್ರಿ ಪ್ಲೇಯರ್ ಸೂರ್ಯಕುಮಾರ್ ಯಾದವ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಎಬಿಡಿ ವಿಲಿಯರ್ಸ್‌ರನ್ನು (AB de Villiers)ಮೀರಿಸುವಂತಹ ಆಟ ಇವರಲ್ಲಿದೆ. ಆಟಕ್ಕಿಳಿದಾಗ ದಿನ ತನ್ನದೇ ಆಗಿದ್ದರೆ ಬೌಲರ್‌ಗಳ ಕಥೆ ಮುಗಿತು. ಸ್ಕ್ವೇರ್ ಲೆಗ್, ಫೈನ್ ಲೆಗ್, ಲಾಂಗ್ ಆನ್, ಕೌಸ್ ಕಾರ್ನರ್, ಮಿಡ್‌ವಿಕೆಟ್, ಲಾಂಗ್ ಆಫ್, ಕವರ್ಸ್, ಪಾಯಿಂಟ್, ಥರ್ಡ್ ಮ್ಯಾನ್ ಹೀಗೆ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಬೌಂಡರಿ, ಸಿಕ್ಸರ್‌ಗೆ ಅಟ್ಟುವ ಸಾಮರ್ಥ್ಯ ಇವರಲ್ಲಿದೆ. ಈ ವರ್ಷವಂತೂ ಟಿ20 ಕ್ರಿಕೆಟ್ (T20) ಅಂದರೆ ಸೂರ್ಯ ಕುಮಾರ್ ಯಾದವ್, ಸೂರ್ಯ ಕುಮಾರ್ ಯಾದವ್ ಅಂದರೆ ಟಿ20 ಕ್ರಿಕೆಟ್ ಅನ್ನುವ ಹಾಗಾಗಿದೆ.
2022ರಲ್ಲಿ SKY ಅಂತರಾಷ್ಟ್ರೀಯ T20 ಕ್ರಿಕೆಟ್‌ನಲ್ಲಿ ಆಡಿರುವುದು ಕೇವಲ 14 ಇನಿಂಗ್ಸ್‌ಗಳನ್ನು ಮಾತ್ರ. ಆದರೆ ಅದಾಗಲೇ ಸೂರ್ಯ 31 ಸಿಕ್ಸರ್ ಸಿಡಿಸಿದ್ದಾರೆ. ಇನ್ನಷ್ಟು ಪಂದ್ಯಗಳು ಬಾಕಿ ಇವೆ. ಬಹುಷಃ ಈ ವರ್ಷವೊಂದರಲ್ಲೇ ಇದೇ ಫಾರ್ಮ್‌ನಲ್ಲಿ ಉಳಿದರೆ ಸೂರ್ಯ ಸಿಕ್ಸರ್‌ಗಳ ಸಂಖ್ಯೆ 60 ಅಥವಾ 70ರ ಗಡಿ ದಾಟಿದರೂ ಅಚ್ಚರಿ ಇಲ್ಲ. ಯಾಕಂದರೆ ಸೂರ್ಯ ಪಾಲಿಗೆ “SKY” is the Limit.
ಅಂದಹಾಗೇ ಈ ವರ್ಷ ಸೂರ್ಯ ಸಿಕ್ಸ್ ಹಿಟ್ಟರ್‌ಗಳ ಲಿಸ್ಟ್‌ನಲ್ಲಿ ನಂಬರ್ 1 ಸ್ಥಾನದಲ್ಲಿ ಇಲ್ಲ. ಆದರೆ ನಂಬರ್ ವನ್ ಆಗುವುದು ಖಚಿತ. ಯಾಕಂದರೆ 39 ಸಿಕ್ಸರ್ ಸಿಡಿಸಿರುವ ಪಪುವಾ ನ್ಯೂಗಿನಿಯ ಟೋನಿ ಉರಾಗೆ ಹೆಚ್ಚು ಪಂದ್ಯಗಳಿಲ್ಲ. ವೆಸ್ಟ್‌ಇಂಡೀಸ್‌ನ ರೋವ್ಮನ್ ಪೊವೆಲ್ 35 ಸಿಕ್ಸರ್ ಸಿಡಿಸಿದರೂ ಸ್ಥಿರವಾದ ಆಟ ಆಡುತ್ತಿಲ್ಲ. ಆಸ್ಟ್ರೀಯಾದ ಇಕ್ಬಾಲ್ 34 ಸಿಕ್ಸರ್ ಸಿಡಿಸಿ ಸೂರ್ಯನಿಗಿಂತ ಮುಂದಿದ್ದರೂ ಅವಕಾಶಗಳು ಕಡಿಮೆ. ಬಲ್ಗೇರಿಯಾದ KC ಡಿಸೋಜಾ 31 ಸಿಕ್ಸರ್ ಸಿಡಿಸಿದ್ದರೂ ಅದು ಪ್ರಯೋಜನವಿಲ್ಲ. ಇನ್ನು ವಿಂಡೀಸ್ ನಾಯಕ ನಿಕೊಲಸ್ ಪೂರನ್ 31 ಸಿಕ್ಸರ್ ಮತ್ತು ಜಿಂಬಾಬ್ವೆಯ ಸಿಕಂದರ್ ರಾಜಾ 27 ಸಿಕ್ಸರ್‌ಗಳನ್ನು ಸಿಡಿಸಿ ಸೂರ್ಯನಿಗೆ ಪೈಪೋಟಿ ನೀಡುತ್ತಿದ್ದಾರೆ.
ಜಗತ್ತಿಗೆ ಬೆಳಕು ನೀಡುವ ಸೂರ್ಯನ ಬಗ್ಗೆ ಗೊತ್ತಿದೆ. ಪವರ್ ಏನು ಅನ್ನುವುದು ತಿಳಿದಿದೆ. ಈಗ ಟೀಮ್ ಇಂಡಿಯಾದ ಸೂರ್ಯನ ಬಗ್ಗೆಯೂ ಎಲ್ಲೆಡೆ ಭಯ ಶುರುವಾಗಿದೆ. ಯಾಕಂದರೆ ಬೌಲರ್‌ಗಳ ಗ್ರಹಗತಿ ಮೇಲೆ ಸೂರ್ಯನ ದೃಷ್ಟಿ ಬಿದ್ದಿದೆ. ಯಾಕಂದರೆ ಈತ ಸಿಕ್ಸ್ ಹಿಟ್ಟಿಂಗ್ ಮಷಿನ್ (Six hitting Machine).