T-20 Tri-series in New Zealand- ಬಾಂಗ್ಲಾ ತಂಡದ ವಿರುದ್ದ ಪಾಕ್ ಗೆ 21 ರನ್ ಗಳ ಜಯ
ಟಿ-20 ತ್ರಿಕೋನ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 21 ರನ್ ಗಳಿಂದ ಪಾಕಿಸ್ತಾನ ಸೋಲಿಸಿದೆ.
ಐಸಿಸಿ ಟಿ-20 ವಿಶ್ವಕಪ್ ಟೂರ್ನಿಗೆ ಮುನ್ನ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ತ್ರಿಕೋನ ಟಿ-20 ಸರಣಿಯನ್ನು ಆಡುತ್ತಿದೆ.
ಕ್ರೈಸ್ಟ್ ಚರ್ಚ್ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತ್ತು.
ಪಾಕ್ ತಂಡದ ಆರಂಭಿಕ ಮಹಮ್ಮದ್ ರಿಜ್ವಾನ್ ಅವರು ಆಕರ್ಷಕ 78 ರನ್ ಸಿಡಿಸಿದ್ರು. ಹಾಗೇ ಯಾಸೀರ್ ಆಲಿ 21 ಎಸೆತಗಳಲ್ಲಿ 42 ರನ್ ಗಳಿಸಿದ್ರು.
ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಬಾಂಗ್ಲಾದೇಶ 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 146 ರನ್ ಗಳಿಸಲಷ್ಟೇ ಶಕ್ತವಾಯ್ತು. ಪಾಕ್ ತಂಡದಿಂದ ಮಹಮ್ಮದ್ ವಾಸೀಮ್ 24ಕ್ಕೆ 3 ವಿಕೆಟ್ ಪಡೆದ್ರೆ, ಟಾಸ್ಕಿನ್ ಅಹಮ್ಮದ್ 25ಕ್ಕೆ 2 ವಿಕೆಟ್ ಉರುಳಿಸಿದ್ರು.
ಅಕ್ಟೋಬರ್ 8ರಂದು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಕ್ರೈಸ್ಟ್ ಚರ್ಚ್ ನಲ್ಲಿ ಕಾದಾಟ ನಡೆಸಲಿವೆ.