FIFA Women’s Under-17 World Cup: ಸೋಲಿನ ನಿರಾಸೆಯನ್ನು ಮರೆಯಲು ಭಾರತಕ್ಕೆ ಗೆಲುವಿನ ಅನಿವಾರ್ಯತೆ
ಮೊದಲ ಪಂದ್ಯದಲ್ಲಿ ಎಂಟು ಗೋಲುಗಳ ಸೋಲು ಆತಿಥೇಯರನ್ನು ನಿರಾಸೆಗೊಳಿಸಿದೆ. ಆದರೆ ಮೊರಾಕೊ ವಿರುದ್ಧ ಶುಕ್ರವಾರ ನಡೆಯಲಿರುವ ಫಿಫಾ ಮಹಿಳಾ 17 ವರ್ಷದೊಳಗಿನವರ ವಿಶ್ವಕಪ್‌ನ ಎರಡನೇ ಗುಂಪಿನ ಪಂದ್ಯದಲ್ಲಿ ತಮ್ಮ ಖ್ಯಾತಿಯನ್ನು ಉಳಿಸಲು ತಂಡವು ಉತ್ತಮವಾಗಿ ಆಡುವ ಅನಿವಾರ್ಯತೆ ಇದೆ.
ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಭಾರತವನ್ನು ಅಮೆರಿಕ 0-8 ಅಂತರದಿಂದ ಸೋಲಿಸಿತ್ತು. ಥಾಮಸ್ ಡೆನ್ನರ್ಬಿ ಅವರ ತಂಡವು ಈ ಫಲಿತಾಂಶವನ್ನು ಮರೆತು ಮೊರಾಕೊ ವಿರುದ್ಧದ ಗುಂಪಿನಲ್ಲಿ ಜಯದ ಕನಸು ಕಾಣುತ್ತಿದೆ.
ಆಫ್ರಿಕನ್ ಅರ್ಹತಾ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಮೊರೊಕ್ಕೊ ಈ ಟೂರ್ನಿಗೆ ಪ್ರವೇಶ ಪಡೆದಿರುವುದರಿಂದ ಭಾರತಕ್ಕೆ ಇದು ಸುಲಭವಲ್ಲ. ಅರ್ಹತಾ ಪಂದ್ಯಾವಳಿಯಲ್ಲಿ ಮೊರಾಕೊ ಪೆನಾಲ್ಟಿ ಶೂಟೌಟ್‌ನಲ್ಲಿ ಘಾನಾವನ್ನು ಸೋಲಿಸಿತ್ತು. ಮತ್ತೊಂದೆಡೆ ಭಾರತ ಆತಿಥೇಯರಾಗಿ ನೇರ ಪ್ರವೇಶ ಪಡೆದಿದೆ.
“ನಮಗೆ ಮೊರಾಕೊ ವಿರುದ್ಧ ಗೆಲ್ಲುವ ಅವಕಾಶವಿದೆ. ನಾವು ಸರಿಯಾಗಿ ಆಡಿದರೆ, ಗೋಲು ಗಳಿಸಲಾಗುತ್ತದೆ. ಮತ್ತು ನಾವು ಅಂಕಗಳನ್ನು ಪಡೆಯುತ್ತೇವೆ. ಉತ್ತಮವಾಗಿ ಮಾಡುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ. ಅಕ್ಟೋಬರ್ 17 ರಂದು ನಡೆಯಲಿರುವ ಕೊನೆಯ ಗುಂಪಿನ ಪಂದ್ಯದಲ್ಲಿ ಭಾರತ ಬ್ರೆಜಿಲ್‌ನಂತಹ ದೊಡ್ಡ ತಂಡವನ್ನು ಆಡಬೇಕಾಗಿದೆ. ಹೀಗಾಗಿ ಅಂಕ ಗಳಿಸುವ ಅವಕಾಶ ಇದೆ” ಎಂದು ಡೆನ್ನರ್ಬಿ ಹೇಳಿದ್ದಾರೆ.