Syed Mushtaq Ali T-20: ಕರ್ನಾಟಕ ತಂಡ ಪ್ರಕಟ, ಮಯಾಂಕ್ ಗೆ ಪಟ್ಟ
ಪಂಜಾಬ್ ನಲ್ಲಿ ನಡೆಯಲಿರುವ ಸೈಯದ್ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಟೂರ್ನಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ತಂಡವನ್ನು ಮಯಾಂಕ್ ಅಗರ್ ವಾಲ್ ಮುನ್ನಡೆಸಲಿದ್ದಾರೆ.
ಸ್ಟಾರ್ ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದು ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿದೆ. ಚುಟುಕು ಕ್ರಿಕೆಟ್ ನಲ್ಲಿ ತಮ್ಮದೇ ಛಾಪು ಮೂಡಿಸಿದ ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಲ್ಲದೆ ಯುವ ಆಟಗಾರರಿಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ. ತಂಡ ಪಿ.ವಿ ಶಶಿಕಾಂತ್ ಅವರ ಗರಡಿಯಲ್ಲಿ ಆಡಲಿದೆ.
ಮಹಾರಾಜ್ ಟ್ರೋಫಿಯಲ್ಲಿ ಮಿಂಚಿದ ಆಟಗಾರರಿಗೆ ತಂಡದಲ್ಲಿ ಮಣೆ ಹಾಕಲಾಗಿದೆ. ಚೇತನ್ ಎಲ್ ಆರ್ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲಿದ್ದಾರೆ. ಮನೋಜ್ ಭಂಡಾರಿ ತಂಡ ಸೇರಿಕೊಂಡಿದ್ದಾರೆ.
ಕರ್ನಾಟಕ ತಂಡ: ಮಯಾಂಕ್ ಅಗರ್ ವಾಲ್, ದೇವದತ್ ಪಡೀಕ್ಕಲ್, ಮನೀಷ್ ಪಾಂಡೆ, ಚೇತನ್ ಎಲ್.ಆರ್., ಅಭಿನವ್ ಮನೋಹರ್, ಮನೋಜ್ ಭಂಡಾರೆ, ಗೌತಮ್ ಕೆ., ಶ್ರೇಯಸ್ ಗೋಪಾಲ್, ಜೆ.ಸುಚಿತ್, ಲುವನಿತ್ ಸಿಸೋಡಿಯಾ, ಶರತ್ ಬಿ.ಆರ್., ವಿ.ಕೌಶಿಕ್, ವಿ.ವೈಶಾಕ್, ವಿದ್ವತ್ ಕರಿಯಪ್ಪ, ವೆಂಕಟೇಶ್ ಎಂ.
Syed Mushtaq Ali T-20, Karnataka, Mayank Agarwal