ಸಯ್ಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿ – ಸೆಮಿಫೈನಲ್ ಪ್ರವೇಶಿಸಿದ ಪಿ.ವಿ. ಸಿಂಧೂ, ಮಿಥುನ್
ಭಾರತದ ಅಗ್ರ ಆಟಗಾರ್ತಿ ಪಿ.ವಿ. ಸಿಂಧೂ ಅವರು ಸಯ್ಯದ್ ಮೋದಿ ಇಂಟರ್ ನ್ಯಾಷನಲ್ ಸೂಪರ್ -300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಲಕ್ನೋದಲ್ಲಿ ನಡೆಯುತ್ತಿರುವ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಿ.ವಿ. ಸಿಂಧೂ ಅವರು ಥೈಲೆಂಡ್ ನ ಸುಪಾನಿಡಾ ಕಟೆಥೋಂಗ್ ಅವರನ್ನು ಪರಾಭವಗೊಳಿಸಿದ್ರು.
65 ನಿಮಿಷಗಳ ಹೋರಾಟದಲ್ಲಿ ಅಗ್ರ ಶ್ರೇಯಾಂಕಿತೆಯಾಗಿರುವ ಪಿ.ವಿ. ಸಿಂಧೂ ಅವರು ಮೊದಲ ಸೆಟ್ ನಲ್ಲಿ 11-21ರಿಂದ ಸುಪಾನಿಡಾ ವಿರುದ್ಧ ಹಿನ್ನಡೆ ಅನುಭವಿಸಿದ್ರು. ಆದ್ರೆ ನಂತರದ ಎರಡು ಸೆಟ್ ಗಳಲ್ಲಿ ಅದ್ಭುತ ಆಟವನ್ನಾಡಿದ ಪಿ.ವಿ. ಸಿಂಧೂ 21-12, 21-17ರಿಂದ ಸುಪಾನಿಡಾ ಅವರನ್ನು ಸೋಲಿಸಿದ್ರು.
ಸೆಮಿಫೈನಲ್ ನಲ್ಲಿ ಪಿ.ವಿ. ಸಿಂಧೂ ಅವರು ಐದನೇ ಶ್ರೇಯಾಂಕಿತೆ ರಷ್ಯಾದ ಎವ್ಗೆನಿಯಾ ಕೊಸೆಕ್ಯಾ ಅವರನ್ನು ಎದುರಿಸಲಿದ್ದಾರೆ.
ಇನ್ನು ಪುರುಷರ ಸಿಂಗಲ್ಸ್ ನಲ್ಲಿ ಭಾರತದ ಎಚ್. ಎಸ್. ಪ್ರಣೋಯ್ ಅವರು ಕ್ವಾರ್ಟರ್ ಫೈನಲ್ ನಲ್ಲಿ ನಿರಾಸೆ ಅನುಭವಿಸಿದ್ದಾರೆ.
ಐದನೇ ಶ್ರೇಯಾಂಕಿತ ಭಾರತದ ಪ್ರಣೋಯ್ ಅವರು 59 ನಿಮಿಷಗಳ ಹೋರಾಟದಲ್ಲಿ 19-21, 16-21ರಿಂದ ಫ್ರಾನ್ಸ್ ನ ಆರ್ನಾಡ್ ಮಾರ್ಕೆಲ್ ಅವರಿಗೆ ತಲೆಬಾಗಿದ್ರು.
ಆದ್ರೆ ಮಿಥುನ್ ಮಂಜುನಾಥ್ ಅವರು ಪುರುಷರ ಸಿಂಗಲ್ಸ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಮಿಥುನ್ ಮಂಜುನಾಥ್ 11-21, 21-12, 21-18ರಿಂದ ರಷ್ಯಾದ ಸರ್ಗೆಯ್ ಸಿರಾಂಟ್ ಅವರನ್ನು ಸೋಲಿಸಿದ್ರು.
ಹಾಗೇ ಮಿಕ್ಸೆಡ್ ಡಬಲ್ಸ್ ನಲ್ಲಿ ಎಮ್. ಆರ್. ಅರ್ಜುನ್ ಮತ್ತು ಟ್ರೀಸಾ ಜಾಲಿ 24-22, 21-17ರಿಂದ ಫ್ರೇಂಚ್ ನ ವಿಲಿಯಮ್ ವಿಲೆಗೆರ್ ಮತ್ತು ಆನ್ ಟ್ರಾನ್ ಅವರನ್ನು ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಇನ್ನೊಂದೆಡೆ ಮಹಿಳೆಯರ ಡಬಲ್ಸ್ ನಲ್ಲಿ ರಮ್ಯಾ ವೆಂಕಟೇಶ್ ಮತ್ತು ಅಪೇಕ್ಷಾ ನಾಯಕ್ ಅವರು ಕ್ವಾರ್ಟರ್ ಫೈನಲ್ ಗೆ ಎಂಟ್ರಿಯಾಗಿದ್ದಾರೆ.