ಆಸ್ಟ್ರೇಲಿಯನ್ ಓಪನ್ 2022 – ನಾಲ್ಕನೇ ಸುತ್ತಿಗೆ ಎಂಟ್ರಿಯಾದ ಸ್ಪೇನ್ ಗೂಳಿ ರಫೆಲ್ ನಡಾಲ್
ಆರನೇ ಶ್ರೇಯಾಂಕಿತ ಸ್ಪೇನ್ ನ ಗೂಳಿ ರಫೆಲ್ ನಡಾಲ್ ಅವರು ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಮೂರನೇ ಸುತ್ತಿನ ಪಂದ್ಯದಲ್ಲಿ ರಫೆಲ್ ನಡಾಲ್ ಅವರು 6-3, 6-2, 3-6, 6-1ರಿಂದ ಕರೇನ್ ಖಾಚ್ನೋವಾ ಅವರನ್ನು ಪರಾಭವಗೊಳಿಸಿದ್ರು.
21ನೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಯನ್ನು ಎದುರು ನೋಡುತ್ತಿರುವ ರಫೆಲ್ ನಡಾಲ್ ಅದ್ಭುತವಾದ ಲಯಲ್ಲಿದ್ದಾರೆ. ರೋಜರ್ ಫೆಡರರ್ ಮತ್ತು ನೊವಾಕ್ ಜಾಕೊವಿಕ್ ಅವರ ಅನುಪಸ್ಥಿತಿಯಲ್ಲಿ ನಡಾಲ್ ಈ ಬಾರಿಯ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರನಾಗಿದ್ದಾರೆ.
ಪುರುಷರ ಇನ್ನೊಂದು ಸಿಂಗಲ್ಸ್ ನಲ್ಲಿ ವಿಶ್ವದ ಏಳನೇ ಶ್ರೇಯಾಂಕಿತ ಮ್ಯಾಟೊ ಬೆರೆಟಿನಿ ಅವರು ನಾಲ್ಕನೇ ಸುತ್ತಿಗೆ ಎಂಟ್ರಿಯಾಗಿದ್ದಾರೆ. ಬೆರೆಟಿನಿ ಅವರು 6-2, 7-6, 4-6, 2-6, 7-6ರಿಂದ ಸ್ಪೇನ್ ನ ಕಾರ್ಲೊಸ್ ಆಕ್ಲಾರಾಝ್ ವಿರುದ್ಧ ಪ್ರಯಾಸದ ಜಯ ಸಾಧಿಸಿದ್ರು.
ಪುರುಷರ ಮತ್ತೊಂದು ಸಿಂಗಲ್ಸ್ ನಲ್ಲಿ ಸರ್ಬಿಯಾದ ಮಿಯೊಮಿರ್ ಕೆಮಾನೊವಿಕ್ ಅವರು 6-4, 6-7, 6-2, 7-5ರಿಂದ ಲಾರೆಂಝೋ ಸೊನೆಗೊ ಅವರನ್ನು ಪರಾಭವಗೊಳಿಸಿದ್ರು.
ಮಿಯೋಮಿರ್ ಕೆಮಾನೊ ಅವರು ಮೊದಲ ಸುತ್ತಿನಲ್ಲಿ ನೊವಾಕ್ ಜಾಕೊವಿಕ್ ಅವರನ್ನು ಎದುರಿಸಬೇಕಿತ್ತು. ಆದ್ರೆ ಜಾಕೊವಿಕ್ ಕೋವಿಡ್ ಲಸಿಕೆ ವಿಚಾರದಲ್ಲಿ ಟೂರ್ನಿಯಿಂದ ಹೊರನಡೆದಿದ್ದರು. ಹೀಗಾಗಿ ಮಿಯೊಮಿ ಅವರು ಇದೀಗ ನಾಲ್ಕನೇ ಸುತ್ತು ಪ್ರವೇಶಿದ್ದಾರೆ.