ಅಗ್ರ ಶೂಟರ್ ಮನು ಭಾಕರ್ ಐಎಸ್‍ಎಸ್‍ಎಫ್ ಶೂಟಿಂಗ್ ವಿಶ್ವಕಪ್‍ನಲ್ಲಿ ಕಂಚು ಗೆದ್ದಿದ್ದಾರೆ. ಈ ಮೂಲಕ ಭಾರತ ಆರನೆ ಪದಕ ಪಡೆದಿದೆ. ಪ್ರಾಬಲ್ಯ ಮೆರೆದಿರುವ ಚೀನಾ 6 ಚಿನ್ನ ಗೆದ್ದು ಅಗ್ರಸ್ಥಾನದಲ್ಲಿದೆ.
ಶನಿವಾರ ನಡೆದ ಮಹಿಳೆಯರ 25 ಮೀ. ಪಿಸ್ತೂಲ್ ವಿಭಾಗದಲ್ಲಿ ಮನು 584 ಅಂಕಗಳನ್ನು ರಾಪಿಡ್ ವಿಭಾಗದಲ್ಲಿ ಪಡೆದರು.ಇವರೊಂದಿಗೆ ಭಾರತದ ಮತ್ತೋರ್ವ ಮಹಿಳಾ ಶೂಟರ್ ಇಶಾ ಸಿಂಗ್ 581 ಅಂಕ ಪಡೆದು ಏಳನೆ ಸ್ಥಾನ ಪಡೆದರು. ಇಬ್ಬರು ಭಾರತೀಯರು ಅಮೋಘ ಪ್ರದರ್ಶನ ನೀಡಿದರು.
ಭಾರತದ ಮನು ಭಾಕರ್ ಮತ್ತು ಜರ್ಮನಿಯ ಡೊರೀನ್ ವೆನ್ನೆಕಾಂಪ್ ಪದಕ ಸುತ್ತಿಗೆ ಅರ್ಹತೆ ಪಡೆದರು.