ಹಾಲಿ ಚಾಂಪಿಯನ್ ಪಿ.ವಿ.ಸಿಂಧು ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಎರಡನೆ ಸುತ್ತು ಪ್ರವೇಶಿಸಿದ್ದಾರೆ.
ಎರಡು ಬಾರಿ ಒಲಿಂಪಿಕ್ ಚಾಂಪಿಯನ್ ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಹೈದ್ರಾಬಾದ್ ಆಟಗಾರ್ತಿ ಎದುರಾಳಿ ಸ್ಟಾಡೆಲ್ಮಾನ್ ವಿರುದ್ಧ 32 ನಿಮಿಷಗಳ ಕಾಲ ಹೋರಾಡಿ 21-9, 21-16 ಅಂಕಗಳಿಂದ ಗೆದ್ದರು.ಈ ಗೆಲುವು ಸಿಂಧು ಈ ಋತುವಿನ ಮೊದಲ ಗೆಲುವಾಗಿದೆ.
ಮೊದಲ ಸುತ್ತಿನಲ್ಲಿ ಸಿಂಧು, 6-4 ಅಂಕಗಳ ಮುನ್ನಡೆ ಪಡೆದರು. ನಂತರ 5 ಅಂಕಗಳನ್ನು ಪಡೆದು 11-6 ಅಂಗಳಾಗಿ ಪರವರ್ತಿಸಿದರು. ನಂತರ ಸಿಂಧು ನಿರಾಯಾಸವಾಗಿ ಗೆದ್ದರು.
ಆದರೆ ಎರಡನೆ ಸುತ್ತಿನಲ್ಲಿ ಸಿಂಧು 2-6 ಅಂಕಗಳಿಂದ ಹಿನ್ನಡೆ ಅನುಭವಿಸಿದರು. ಎಚ್ಚೆತ್ತು ಆಡಿದ ಸಿಂಧು 21-16 ಅಂಕಳಾಗಿ ಪರಿವರ್ತಿಸಿದರು.
ಕಳೆದ ಮೂರು ಪ್ರತಿಷ್ಠಿತ ಟೂರ್ನಿಗಳಿಂದ ಸಿಂಧು ಮೊದಲ ಸುತ್ತಿನಲ್ಲೆ ಸೋತು ಟೂರ್ನಿಯಿಂದ ಹೊರಬಿದ್ದಿದ್ದರು.