ಟೀಮ್ ಇಂಡಿಯಾದ ಮಿಸ್ಟರ್ 360 ಸೂರ್ಯ ಕುಮಾರ್ ಯಾದವ್ ಮತ್ತೊಮ್ಮೆ ಗೋಲ್ಡ್ ನ್ ಡಕ್ ಆಗುವ ಮೂಲಕ ಅನಗತ್ಯ ದಾಖಲೆ ಬರೆದಿದ್ದಾರೆ.
ಚೆಪಾಕ್ ಅಂಗಳದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೆ ಏಕದಿನ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿ ಭಾರೀ ನಿರಾಸೆ ಮೂಡಿಸಿದರು. 7ನೇ ಕ್ರಮಾಂಕದಲ್ಲಿ ಇಳಿದಿದ್ದ ಸೂರ್ಯ ಕುಮಾರ್ ಆಸ್ಟನ್ ಅಗಾರ್ ಅವರ ಮೊದಲ ಎಸೆತದಲ್ಲೆ ವಿಕೆಟ್ ಒಪ್ಪಿಸಿದರು.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸೂರ್ಯ ಕುಮಾರ್ ಮೊದಲ ಎಸೆತದಲ್ಲಿ ಔಟ್ ಆಗಿದ್ದರು. ವಿಶಾಖಪಟ್ಟಣದಲ್ಲೂ ಮೊದಲ ಎಸೆತದಲ್ಲೆ ಪೆವಿಲಿಯನ್ ಸೇರಿದ್ದರು.
ಈ ಎರಡೂ ಪಂದ್ಯಗಳಲ್ಲೂ ವೇಗಿ ಮಿಚೆಲ್ ಸ್ಟಾರ್ಕಗೆ ವಿಕೆಟ್ ಒಪ್ಪಿಸಿದ್ದರು. ಇದೀಗ ಮೂರನೆ ಪಂದ್ಯದಲ್ಲಿ ಆಸ್ಟನ್ ಅಗಾರ್ಗೆ ಎಸೆತಲ್ಲಿ ಬೌಲ್ಡ್ ಆಗಿ ಅನಗತ್ಯ ದಾಖಲೆ ಬರೆದಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ 3 ಬಾರಿ ಡಕೌಟ್ ಆದ ಮೊದಲ ಬ್ಯಾಟರ್ ಎಂಬ ಅನಗತ್ಯ ದಾಖಲೆಯನ್ನ ತಮ್ಮದಾಗಿಸಿಕೊಂಡರು.